Breaking News

ಸಿ.ಎಲ್.ಸಿ.ಯಿಂದ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ 145 ಮಂದಿ ಫಲಾನುಭವಿಗಳು ಶಿಬಿರದಲ್ಲಿ ಭಾಗಿ

Puttur_Advt_NewsUnder_1
Puttur_Advt_NewsUnder_1

 

clcಪುತ್ತೂರು: ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಪುತ್ತೂರು, ಮಾದೆ ದೇವುಸ್ ಚರ್ಚ್ ಪುತ್ತೂರು, ಭಾರತೀಯ ರೆಡ್ ಕ್ರಾಸ್ ಘಟಕ ಪುತ್ತೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ-ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಉಡುಪಿ ಮತ್ತು ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಾದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಡಿ.4 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ಕಣ್ಣಿದ್ದರೆ ಸಾಲದು, ದೃಷ್ಟಿಯಿರಬೇಕು- ವಂ|ಸಂತೋಷ್: ಮಾದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಸಂತೋಷ್ ಡಿ’ಸೋಜರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಕಣ್ಣು ಅಗತ್ಯವಾಗಿದೆ. ಕೇವಲ ಕಣ್ಣಿದ್ದರೆ ಸಾಲದು, ದೃಷ್ಟಿಯಿರಬೇಕು. ಪರಿಸರದ ಆನಂದವನ್ನು ಸವಿಯಬೇಕಾದರೆ, ಇತರರ ಕಷ್ಟವನ್ನು ಅರಿಯಬೇಕಾದರೆ ಕಣ್ಣಿನ ಅಗತ್ಯ ತುಂಬಾ ಇದೆ. ಜನರಿಗೆ ಬಹಳ ಉಪಯೋಗವಾಗುವ ನಿಟ್ಟಿನಲ್ಲಿ ಶಿಬಿರ ಹಮ್ಮಿಕೊಂಡಿರುವ ಸಂಘಟಕರಿಗೆ ತೀಕ್ಷ್ಣವಾದ ದೃಷ್ಟಿಯನ್ನು ದೇವರು ಕರುಣಿಸಲಿ ಎಂದು ಶುಭಹಾರೈಸಿದರು.

 ನಗರಸಭಾ ನಾಮನಿರ್ದೇಶನ ಸದಸ್ಯ ಜೋಕಿಂ ಡಿ’ಸೋಜ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ-ಮಂಗಳೂರು ಇದರ ವೈದ್ಯಾಧಿಕಾರಿ ಡಾ.ರಾಜನಾಥ ಹೆಗ್ಡೆ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಕೋಶಾಧಿಕಾರಿ ವಿನ್ಸೆಂಟ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಜೋನ್ ಪಿಂಟೋ ಸ್ವಾಗತಿಸಿ, ಕಾರ್ಯದರ್ಶಿ ವಿಲಿಯಂ ನೊರೊನ್ಹಾ ವಂದಿ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ-ಮಂಗಳೂರು ಇಲ್ಲಿನ ಸಿಬ್ಬಂದಿ ಚೈತ್ರ, ಸುಮಲತಾ, ಹರೀಶ್, ಸುದರ್ಶನ್ ಸಹಿತ 6 ಮಂದಿ ಸಿಬ್ಬಂದಿಗಳು ಸಹಕಾರ ನೀಡಿದರು.

ಕಣ್ಣಿನ ಬಗ್ಗೆ ಇರುವ ತೊಂದರೆಯನ್ನು ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡುವಂತಾಗಬೇಕು. ಸಣ್ಣ ಮಕ್ಕಳಲ್ಲಿ ಇಂತಹ ತೊಂದರೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆಯನ್ನು ಮಾಡುವಂತಾಗಬೇಕು, ರಕ್ತದೊತ್ತಡ ಹಾಗೂ ಮಧುಮೇಹವಿದ್ದವರು ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ . ಇಂದು ನಡೆದ ಶಿಬಿರದಲ್ಲಿ ಆಪರೇಷನ್‌ಗೆ ಒಳಗಾದವರಿಗೆ ಸ್ವತಹ ಆಸ್ಪತ್ರೆಯ ವಾಹನದಲ್ಲಿ ಕರೆದುಕೊಂಡು ಹೋಗಿ  ಶಸ್ತ್ರಚಿಕಿತ್ಸೆ ಮಾಡಿಸಿ ವಾಪಾಸು ಕರೆದು ತಂದು ಬಿಡಲಾಗುವುದು.

-ಮಧುಕರ್, ಪಿಆರ್‌ಒ, ಪ್ರಸಾದ್ ನೇತ್ರಾಲಯ

ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.