ರಾಮಕೃಷ್ಣ ಮಿಶನ್ ವತಿಯಿಂದ ಸ್ವಚ್ಚ ಸುಂದರ ಪುತ್ತೂರಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1

ramakrishna swacha1

* ಸ್ವಚ್ಚತೆಯ ವ್ರತಕ್ಕೆ ಸಹಭಾಗಿತ್ವವಿರಲಿ- ಧರ್ಮವೃತಾನಂದಜೀ ಮಹಾರಾಜ್

* ಸ್ವಚ್ಚತೆ ಬದುಕಿನ ಅಂಗವಾಗಬೇಕು – ಕ್ಯಾಪ್ಟನ್ ಗಣೇಶ್ ಕಾರ್ಣಿಕ್

* ಸ್ವಯಂ ಜಾಗೃತಿ ಮೂಡಬೇಕು – ಡಾ. ಎಂ.ಕೆ.ಪ್ರಸಾದ್

* ಮನೆಯಿಂದಲೇ ಸ್ವಚ್ಛತೆ ಆರಂಭವಾಗಲಿ – ಎನ್.ಸುಧಾಕರ್ ಶೆಟ್ಟಿ

ಪುತ್ತೂರು: ಮಂಗಳೂರಿನಲ್ಲಿ ಸಜ್ಜನ ನಾಗರಿಕರನ್ನು ಸಂಘಟಿಸಿ ಮಂಗಳೂರಿನ ಸ್ವಚ್ಛತೆಯಲ್ಲಿ ಯಶಸ್ವಿ ಪಡೆದ ರಾಮಕೃಷ್ಣ ಮಿಶನ್ ಪುತ್ತೂರಿನಲ್ಲೂ ಪುತ್ತೂರಿನ ನಾಗರಿಕರನ್ನು ಸೇರಿಸಿಕೊಂಡು ಸ್ವಚ್ಛ ಪುತ್ತೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ದ.೪ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಚಾಲನೆ ಸಿಕ್ಕಿದೆ.

ಸ್ವಚ್ಛ ಪುತ್ತೂರು ಆಗಬೇಕೆನ್ನುವ ನೂರಾರು ಮಂದಿ ಕಾರ್ಯಕರ್ತರು ಬೆಳಿಗ್ಗೆ ಪೊರಕೆ ಹಿಡಿದು ಕಸ ತೆಗೆಯುವುದರೊಂದಿಗೆ ತರೆಗೆಲೆಗಳಿಂದ ಮುಚ್ಚಿ ಹೋಗಿದ್ದ ರಸ್ತೆಯ ಬದಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗಿದೆ. ಮುಂದೆ ಪ್ರತಿ ತಿಂಗಳ ಮೊದಲ ಆದಿತ್ಯವಾರ ಸ್ವಚ್ಛತೆ ಕಾರ್ಯಕ್ರಮ ನಡೆಯಲಿದೆ.

ಸ್ವಚ್ಚತೆಯ ವ್ರತಕ್ಕೆ ಸಹ ಭಾಗಿತ್ವವಿರಲಿ:  ಸ್ವಚ್ಛ ಪುತ್ತೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರಿನ ರಾಮಕೃಷ್ಣ ಮಿಷನ್‌ನ ಸ್ವಾಮಿ ಧರ್ಮವೃತಾನಂದಜೀ ಮಹಾರಾಜ್‌ರವರು ಮಾತನಾಡಿ ಸ್ವಚ್ಛತೆ ಎಲ್ಲರಿಗೂ ಬೇಕು. ಅದೇ ರೀತಿ ಜನರ ಸಹಭಾಗಿತ್ವವೂ ಬೇಕು. ಈ ನಿಟ್ಟಿನಲ್ಲಿ ಎಲ್ಲರು ವ್ರತ ಕೈಗೊಳ್ಳಬೇಕಾಗಿದೆ. ಪೊರಕೆ ಹಿಡಿಯುವುದೇ ಇಲ್ಲಿ ವ್ರತ ವಾಗಲಿದೆ. ಸ್ವಚ್ಛ ಸುಂದರ ಪುತ್ತೂರು ಆಗುವ ತನಕ ವ್ರತ ಭಂಗವಾಗದೆ ಎಲ್ಲರ ಸಹಭಾಗಿತ್ವವಿರಲಿ ಎಂದರು. ರಾಮಕೃಷ್ಣ ಮಠ ಮತ್ತು ವಿಶನ್ ಆದರ್ಶ ತೋರಿಸುವ ಕೆಲಸ ಮಾತ್ರವೇ ಮಾಡುತ್ತದೆ. ಈ ಕೆಲಸ ಎಲ್ಲರಿಗೂ ಪ್ರೇರಣೆಯಾಗಬೇಕು, ಜನರ ಸಹಭಾಗಿತ್ವ ಬೇಕು. ಎಲ್ಲಾ ಕಡೆ ಆಶ್ರಮವೇ ಹೋಗಿ ಸ್ವಚ್ಚತೆ ಮಾಡಲು ಆಗುವುದಿಲ್ಲ. ಯುವಕರ ತಂಡ ಈ ನಿಟ್ಟಿನಲ್ಲಿ ಸಿದ್ದವಾಗಬೇಕು ಎಂದರು.

ಸ್ವಚ್ಚತೆ ಬದುಕಿನ ಅಂಗವಾಗಬೇಕು: ಅತಿಥಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್‌ರವರು ಮಾತನಾಡಿ ಕಸ ಉತ್ಪಾದನೆಯಾಗುವುದಕ್ಕೆ ಯಾರು ಕಾರಣ ಎನ್ನುವುದರ ಅರಿವು ಬೆಳೆಯಬೇಕು. ಇದರಿಂದ ಮನೆ, ಗ್ರಾಮ, ಊರು ಸ್ವಚ್ಚತೆಯಾಗಲು ಸಾಧ್ಯವಿದೆ. ಸ್ವಚ್ಚತೆ ಪ್ರತಿಯೊಬ್ಬರ ಬದುಕಿನ ಅಂಗವಾಗಬೇಕು ಎಂದರು.

ಸ್ವಯಂ ಜಾಗೃತಿ ಮೂಡಬೇಕು:  ಆದರ್ಶ ಆಸ್ಪತ್ರೆಯ ಡಾ. ಎಂ.ಕೆ. ಪ್ರಸಾದ್‌ರವರು ಮಾತನಾಡಿ ಸ್ವಚ್ಛತೆ ಕುರಿತು ಸ್ವಯಂ ಜಾಗೃತಿ ಮೂಡಬೇಕು. ದೇಶದಲ್ಲಿ ಘಣತ್ಯಾಜ್ಯ ನಿರ್ವಹಣಾ ಸಚಿವರು ಬೇಕು ಎಂದರು.

ಮನೆಯಿಂದಲೇ ಸ್ವಚ್ಛತೆ ಆರಂಭವಾಗಲಿ:  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿಯವರು ಮಾತನಾಡಿ, ಮನೆಯಿಂದಲೇ ಸ್ವಚ್ಚತೆ ಆರಂಭವಾಗಬೇಕು. ಎಲ್ಲರೂ ಕೈಜೋಡಿಸಿದಾಗ ಯಶಸ್ಸು ಸಾಧ್ಯವಿದೆ ಎಂದರು. ಕಾರ್ಯಕ್ರಮ ಸಂಯೋಜಕ ಶ್ರೀಕೃಷ್ಣ ಉಪಾದ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೋದ್ ಸ್ವಾಗತಿಸಿ,  ನಿಕೇತ್‌ರಾಜ್ ಮೌರ್ಯ ವಂದಿಸಿದರು. ಶ್ಯಾಮಸುದರ್ಶನ ಭಟ್ ಹೊಸಮೂಲೆ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ‍್ಯಕ್ರಮದ ಬಳಿಕ  ಎಲ್ಲರು ಸ್ವಚ್ಚತಾ ಕಾರ್ಯ ನಡೆಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.