Breaking News

ಗ್ರಾಮಗಳಲ್ಲಿ ಡಿಜಿಟಲ್‌ಸಾಕ್ಷರತೆಗೆ ಚಿಂತನೆ; ಸುದ್ದಿ ಮಾಹಿತಿ ಟ್ರಸ್ಟ್ ಸಭೆ

Puttur_Advt_NewsUnder_1
Puttur_Advt_NewsUnder_1

digital

ಪುತ್ತೂರು: ನೋಟು ರದ್ದತಿಯ ಜೊತೆ ಜೊತೆಗೆ ಕೇಂದ್ರ ಸರಕಾರ ಪ್ರತಿಯೋರ್ವ ಭಾರತೀಯ ಪ್ರಜೆಗೂ ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಯುಗಕ್ಕೆ ಪರಿವರ್ತನೆಯಾಗಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತೀ ಗ್ರಾಮ ಮಟ್ಟದಲ್ಲಿ ಡಿಜಿಟಲ್ ಸಾಕ್ಷರತೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸುದ್ದಿ ಮಾಹಿತಿ ಟ್ರಸ್ಟ್ ಪುತ್ತೂರು ಚಿಂತನೆ ನಡೆಸಿದೆ.

ದ.2ರಂದು ಇಲ್ಲಿನ ದಿನೇಶ್ ಭವನ ಸುದ್ದಿ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರದಲ್ಲಿ ನಡೆದ ಸುದ್ದಿ ಮಾಹಿತಿ ಟ್ರಸ್ಟ್ ಸಭೆಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದರವರು ಈ ಬಗ್ಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದರು. ಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ’ಗ್ರಾಮದರ್ಶನ’ ಗ್ರಾಮದ ಸಂಪೂರ್ಣ ಮಾಹಿತಿ ಅಭಿಯಾನ ಹಾಗೂ ಅತ್ಯವಶ್ಯಕ ಮಾಹಿತಿ ಕಾರ‍್ಯಾಗಾರಗಳನ್ನು ಆಯೋಜಿಸಲು ತಯಾರಿ ನಡೆಸಿದ್ದು, ಮೊದಲ ಮಾದರಿ ನಾಲ್ಕು ಗ್ರಾಮಗಳಲ್ಲಿ ಈಗಾಗಲೇ ಪ್ರಥಮ ಹಂತವಾದ ಫೊಟೋಗ್ರಫಿ ನಡೆದಿದೆ. ಇದರ ಜೊತೆಗೆ ಮುಂದಿನ ಹಂತದಲ್ಲಿ ಪ್ರಧಾನವಾಗಿ ಜನರಿಗೆ ಅತೀ ಅವಶ್ಯಕವಾಗಿರುವ ಇ-ಬ್ಯಾಂಕಿಂಗ್ ಸೇವೆ ಮತ್ತು ಎಲ್ಲಾ ತರದ ಇ-ಸೇವೆಗಳ ಉಪಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ’ಡಿಜಿಟಲ್ ಸಾಕ್ಷರತೆ’ಯ ಚಟುವಟಿಕೆಗಳನ್ನು ನಡೆಸಲಿzವೆ ಎಂದು ಅವರು ಹೇಳಿದರು.

ಸುದ್ದಿ ಮಾಹಿತಿ ಟ್ರಸ್ಟ್‌ನ ಅಧೀನದಲ್ಲಿ ಪುತ್ತೂರಿನ ಎಲ್ಲಾ ಗ್ರಾಮಗಳ ಫೇಸ್‌ಬುಕ್ ರಚಿಸಲಾಗಿದ್ದು, ಆಯಾ ಗ್ರಾಮದವರು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಾದರಿ ನಾಲ್ಕು ಗ್ರಾಮಗಳಲ್ಲಿ (ಕೆಯ್ಯೂರು, ಆರ್ಯಾಪು, ಬಜತ್ತೂರು, ನೂಜಿಬಾಳ್ತಿಲ) ನಡೆಸಿದ ಫೊಟೋಗ್ರಫಿಯ ವಿಶೇಷ ಫೊಟೋಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪ್ರತೀ ಗ್ರಾಮ ಮಟ್ಟದಲ್ಲಿ ಗ್ರೂಪ್‌ಗೆ ಜನರನ್ನು ಸೇರಿಸುವ ಕಾರ್ಯವೂ ಪ್ರಗತಿಯಲ್ಲಿದೆ.

ಸಭೆಯಲ್ಲಿ ಸುದ್ದಿ ಬಿಡುಗಡೆಯ ಸಿಇಒ ಸೃಜನ್ ಊರುಬೈಲು, ಅಶೋಕ್ ಎಡಮಲೆ, ಜ್ಯೋತಿ ಪ್ರಕಾಶ್ ಪುಣಚ,  ಕರುಣಾಕರ ರೈ ಸಿ.ಎಚ್, ಉಮೇಶ್ ಮಿತ್ತಡ್ಕ, ಸಂತೋಷ್ ಶಾಂತಿನಗರ,  ರಾಜೇಶ್ ಎಂ ಎಸ್,  ಹರೀಶ್ ಬಾರಿಂಜ, ಯತೀಶ ಉಪ್ಪಳಿಗೆ, ಶಿವಕುಮಾರ್ ಈಶ್ವರಮಂಗಲ, ಸಿ.ಶೇ. ಕಜೆಮಾರ್, ನವೀನ್ ಕೌಡಿಚ್ಚಾರ್, ಸುನಿಲ್ ಕಾವು, ಫಾರೂಕ್ ಮುಕ್ವೆ, ಕೇಶವ ಪ್ರಸಾದ್, ದೀಪಕ್ ಉಬಾರ್, ಸಿದ್ದೀಕ್ ಕುಂಬ್ರ, ಯೂಸುಫ್ ರೆಂಜಲಾಡಿ ಭಾಗವಹಿಸಿ ವಿವಿಧ ಸಲಹೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.