ವಿವೇಕಾನಂದ ಕ.ಮಾ.ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕುಶಲತೆ ಮತ್ತು ಪರಿಶ್ರಮದ ಕೆಲಸ ಅಗತ್ಯ – ನಿಖಿಲ ಸುಮಾ

Puttur_Advt_NewsUnder_1
Puttur_Advt_NewsUnder_1

 

vkmಪುತ್ತೂರು: ಸಮಾಜದಲ್ಲಿ ಇತರರು ತಮ್ಮನ್ನು ಗುರುತಿಸುವಂತಾಗಲು ವಿದ್ಯಾರ್ಥಿಗಳು ಕುಶಲತೆ ಮತ್ತು ಪರಿಶ್ರಮವೆರಡನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ  ನಿಖಿಲ ಸುಮ ಹೇಳಿದರು.

ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಇನ್ನೊರ್ವ ಮುಖ್ಯ ಅತಿಥಿ ದ.ಕ ಜಿಲ್ಲಾ ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್‌ಅಂಬೆಕಲ್ಲು ಮಾತನಾಡುತ್ತಾ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳಿಂದ ಸಾಧಕರಿಗೆ ವೇದಿಕೆ ಸಿಗುತ್ತದೆ ಎಂದರು. ಶಾಲಾ ಆಡಳಿತ ಮಂಡಳಿ ಸದಸ್ಯ ವಸಂತ ಸುವರ್ಣ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಕರ ಪರಿಶ್ರಮದಿಂಂದ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯು ಪ್ರಕಾಶಿಸಲು ಸಾಧ್ಯವಾಗಿ ಹೊಸ ಸಾಧನೆಗಳಿಗೆ ಪ್ರೋತ್ಸಾಹ ದೊರಕಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಕಾರ್ಯಕ್ರಮದ ಜೊತೆಜೊತೆಗೆ ಸ್ವರೂಪ ಅಧ್ಯಯನ ಕೇಂದ್ರದ ತಂಡದವರಿಂದ ಬೀಟ್ ಬಾಕ್ಸಿಂಗ್, ಮಿಮಿಕ್ರಿ, ರಂಗಗೀತೆಯಂತಹ ವಿಶಿಷ್ಠ ಕಾರ್ಯಕ್ರಮ ನೆರೆದವರ ಮನ ರಂಜಿಸುತ್ತಾ ಸಾಗಿದವು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಧ್ಯಾ ಕಜೆ ಮತ್ತು ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿಕುಡ್ವ ಪ್ರಾರ್ಥಿಸಿ, ನಳಿನಿ ವಾಗ್ಲೆ ಸ್ವಾಗತಿಸಿದರು. ಪೂರ್ಣಿಮಾ ಮಾತಾಜಿ ಧನ್ಯವಾದ ಸಮರ್ಪಿಸಿ, ಸೌಮಶ್ರೀ  ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.