ಕುಂಡಡ್ಕ ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಪೂಜೆ, ಸನ್ಮಾನ, ವಿದ್ಯಾರ್ಥಿವೇತನ ವಿತರಣೆ

Puttur_Advt_NewsUnder_1
Puttur_Advt_NewsUnder_1

kundadka1 kundadka2

ದ್ವೇಷ ಸಾಧನೆ ಮಾಡುವ ಬದಲು ನಾವು ಸಂಘಟಿತರಾಗಬೇಕು: ಯಶೋಧರ ಬಂಗೇರ

ಪುತ್ತೂರು: ನಾವು ಪರಸ್ಪರ ವೈರತ್ವಕಟ್ಟಿಕೊಂಡು ದ್ವೇಷ ಸಾಧನೆ ಮಾಡುವ ಬದಲು ಒಗ್ಗಟ್ಟಾಗಿ ಸಂಘಟಿತರಾಗಬೇಕು. ದ್ವೇಷದಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಾನವ ಸಂಬಂಧವನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಅಳಿಕೆ ನೆಕ್ಕಿತ್ತಪುಣಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಎಂ. ಯಶೋಧರ ಬಂಗೇರವರು ಹೇಳಿದರು.

ಅವರು ದ.4ರಂದು ಕುಂಡಡ್ಕ ಬಿಲ್ಲವ ಸಂಘದ ಹದಿನೈದನೇ ವರ್ಷದ ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಹಾಗು ಸನ್ಮಾನ ಮತ್ತು ವಿದ್ಯಾರ್ಥಿವೇತನ ಸಮಾರಂಭದಲ್ಲಿ ಮಾತನಾಡಿದರು. ಮೊಬೈಲ್‌ನಿಂದಾಗಿ ಇಂದಿನ ಯುವ ಪೀಳಿಗೆ ದಾರಿ ತಪ್ಪುತಿದೆ, ಮಾತೆಯರು ತಮ್ಮ ಮಕ್ಕಳನ್ನು ಆದಷ್ಟು ಮೊಬೈಲ್‌ನಿಂದ ದೂರವಿರುವಂತೆ ಮಾಡಿ ಸಂಸ್ಕಾರಯುತರಾಗುವಂತೆ ಮಾಡ ಬೇಕೆಂದು ಅವರು ಹೇಳಿದರು. ವಿಟ್ಲ ಮುಡ್ನೂರು ಗ್ರಾಪಂ ಅಧ್ಯಕ್ಷೆ ಪಿ.ಪ್ರೇಮಲತಾ ಪಟ್ಲ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ನ್ಯಾಯವಾದಿ ರಂಜಿತ್ ಪೂಜಾರಿ ಮೈರ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಾಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ವಿಟ್ಲ ಯೂತ್ ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷ ಸತ್ಯನಾರಾಯಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೂರ್ತೆಗಾರಿಕೆ ಮಾಡುತ್ತಿದ್ದ ಸಂಜೀವ ಪೂಜಾರಿ ಕಾರ್ಯಾಡಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯತೀಶ್ ಕೇದಗೆದಡಿ ಸನ್ಮಾನಪತ್ರ ವಾಚಿಸಿದರು. ದೀಕ್ಷಿತಾ ಕೆ., ಮೇಘನಾ ಪಿ., ಜಯಪ್ರಸಾದ್, ಜೀವನ್‌ರವರಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಪದ್ಮಾವತಿ ಕೇದಗೆದಡಿ, ದೂಮಪ್ಪ ಪೂಜಾರಿ ಪೆರುವಾಜೆ, ನಾರಾಯಣ ಪೂಜಾರಿ, ದೂಮಪ್ಪ ಪೂಜಾರಿ ಕೇದಗೆದಡಿ, ಹೊನ್ನಪ್ಪ ಪೂಜಾರಿ ಕುಂಡಡ್ಕ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಿಲ್ಲವ ಸಂಘ ಕುಂಡಡ್ಕ ಇದರ ಅಧ್ಯಕ್ಷ ವಿಠಲ ಪೂಜಾರಿ ಅತಿಕಾರಬೈಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೀವನ್ಯ, ವರ್ಷಿತಾ ಪ್ರಾರ್ಥನೆ ಹಾಡಿದರು. ಸಾರಾಯಣ ಎಸ್.ಕೆ ಸ್ವಾಗತಿಸಿ, ಸುಂದರ ಕೇದಗೆದಡಿ ವಂದಿಸಿದರು. ಕೆ.ಟಿ ಆನಂದ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಗುರು ಮಿತ್ರ ಬಳಗದ ವತಿಯಿಂದ ಮಧ್ಯಾಹ್ನ 2 ಗಂಟೆಯಿಂದ ಸ್ಥಳೀಯ ಹಾಗು ಪರವೂರಿನ ಪ್ರತಿಭಾನ್ವಿತ ಯುವ ಪ್ರತಿಭೆಗಳಿಂದ ನೃತ್ಯ, ಹಾಸ್ಯ, ಮಿಮಿಕ್ರಿ ನಡೆಯಿತು. ಸಾಯಂಕಾಲ ಸ್ನೇಹ ಕಲಾವಿದರು ಪುಣಚ ಇವರಿಂದ ಮನಸ್ಸ್ ಎನ್ನಿಲೆಕ ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.