Breaking News

ಕಣಿಯೂರ್ ಕನ್ಯಾನ  ದಶವಾರ್ಷಿಕ ಮಹಾ ಸಮ್ಮೇಳನ ದೋಹಾ ಕತ್ತಾರ್‌ನಲ್ಲಿ ಪ್ರಚಾರ ಸಭೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

kaniyoorಪುತ್ತೂರು: ಹಂಝತ್ತುಲ್ ಕರ್ರಾರ್ ಜುಮಾ ಮಸೀದಿ ಕಣಿಯೂರ್ ಕನ್ಯಾನ  ಇದರ ದಶವಾರ್ಷಿಕ ಮಹಾಸಮ್ಮೇಳನ 2017 ಎಪ್ರಿಲ್14, 15, 16ರಂದು ನಡೆಯಲಿದ್ದು, ಇದರ ಪ್ರಚಾರ ಸಂಗಮವು ದೋಹಾ ಕತ್ತಾರ್‌ನಲ್ಲಿ ನಡೆಯಿತು.

ಮುಖ್ಯ ಅಥಿತಿಗಳಾಗಿ ಹಂಝತುಲ್ ಕರ್ರಾರ್ ಮಸೀದಿ ಅಧ್ಯಕ್ಷ ಹಾಜಿ ಕೆ.ಕೆ. ಸುಲೈಮಾನ್ ಫೈಝಿ ಕಣಿಯೂರ್, ಜಾಫರ್ ಸಾದಿಕ್ ಮುಸ್ಲಿಯಾರ್ ಕಕ್ಕಿಂಜೆ, ಪಿ.ಎಂ.ಇಬ್ರಾಹಿಂ ಹಾಜಿ ಪನೀರ್, ಎಸ್. ಹಸೈನಾರ್ ಸಮಡ್ಕ, ರಷೀದ್ ಕಕ್ಕಿಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಸೀದಿ ಪರಿಚಯವನ್ನು ಹಾಗೂ ಸಮ್ಮೇಳನದ ಬಗ್ಗೆ ಕೆ.ಕೆ. ಸುಲೈಮಾನ್ ಪೈಝಿಯವರು ನೀಡಿದರು.

ಬಳಿಕ ದಶವಾರ್ಷಿಕ ಸಮ್ಮೇಳನದ ಕತ್ತಾರ್ ಸ್ವಾಗತ ಸಮಿತಿ ಯನ್ನು ರಚಿಸಲಾಯಿತು. ಗೌರವಾಧಕ್ಷರಾಗಿ ಸುಲೈಮಾನ್ ಬಲ್ಲೂರ್ ಮರ್ಕಿಯ ಕತ್ತಾರ್, ಅಧ್ಯಕ್ಷರಾಗಿ ಪಿ.ಎಂ. ಇಬ್ರಾಹಿಂ ಹಾಜಿ ಪನೀರ್, ಉಪಾಧ್ಯಕ್ಷರುರಾಗಿ ಎಸ್. ಹಸೈನಾರ್ ಸಮಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಷೀದ್ ಕಕ್ಕಿಂಜೆ, ಕಾರ್ಯದರ್ಶಿ ಯಾಗಿ ಅಬ್ದುಲ್ ರಝಾಕ್ ಸಾಂಬಾರ್ ತೋಟ, ಸಂಘಟನಾ ಕಾರ್ಯದರ್ಶಿಯಾಗಿ ಶಮೀರ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ರಹೀಂ ಬಾಯಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನಿಸಾರ್ ಪನೀರ್, ಶಂಸುದ್ದೀನ್ ಸಾಂಬಾರ್ ತೋಟ, ಸಿರಾಜ್ ಸಾಂಬಾರ್ ತೋಟ, ಹಾರಿಸ್ ಸಾಂಬಾರ್ ತೋಟ, ನಾಸಿರ್ ಸಾಂಬಾರ್ ತೋಟ, ಉಬೈದುಲ್ಲಾ ಸಂಪ್ಯ ಪುತ್ತೂರು ಮೊದಲಾದವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.