ವಿಕ್ಟರ್ಸ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1

victors-1ಪುತ್ತೂರು: ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಸಂಘದ ವಾರ್ಷಿಕ ಮಹಾಸಭೆಯು ಡಿ.3 ರಂದು ಅಪರಾಹ್ನ ಮಾದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಅತ್ಯುತ್ತಮ ಶಾಲೆಗಳಲ್ಲೊಂದಾದ ಈ ಶಾಲೆಯಲ್ಲಿ ಅದೆಷ್ಟೋ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಈ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸಂಘವು ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.

ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋರವರು ಮಾತನಾಡಿ, ಸುವರ್ಣ ವರ್ಷದ ಆಚರಣೆಯ ಪ್ರಯುಕ್ತ ಸಂಘವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಈ ಕಾರ್ಯಕ್ರಮಗಳು ಸುಸೂತ್ರವಾಗಿ ಸಾಗಲು ಸಮಿತಿಯನ್ನು ಮಾಡಲಿzವೆ ಮತ್ತು ಪ್ರತಿಯೊಬ್ಬರ ಸಹಕಾರವು ಈ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗಿದೆ ಎಂದರು.

ನಿರ್ಗಮನ ಅಧ್ಯಕ್ಷೆ ಐವಿ ಗ್ರೆಟ್ಟಾ ಪಾಸ್‌ರವರು ಸ್ವಾಗತಿಸಿ, ಮಾತನಾಡಿ, ಸುವರ್ಣ ವರ್ಷದ ವಿಜೃಂಭಣೆಯನ್ನು ನಾವೆಲ್ಲರೂ ಒಂದಾಗಿ ಯಶಸ್ವಿಗೊಳಿಸಬೇಕು, ಇಂತಹ ಕಾರ್ಯಕ್ರಮವು ಮುಂದಿನ ಜನಾಂಗದವರಿಗೆ ಆದರ್ಶವಾಗಿರಬೇಕು ಎಂದ ಅವರು ತನ್ನ ಅಧ್ಯಕ್ಷಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ನೂತನ ಅಧ್ಯಕ್ಷೆ ಮೇರಿ ಲೋಬೋರವರು ಮಾತನಾಡಿ, ನಗುಮುಖದ ಮತ್ತು ನಯವಾದ ಮಾತುಗಳನ್ನಾಡುವ ಸಂಚಾಲಕರಿಂದ ಪೂರ್ಣ ಪ್ರಮಾಣದ ಸಹಕಾರವನ್ನು ಆಶಿಸುತ್ತಿದ್ದೇವೆ. ಸುವರ್ಣ ವರ್ಷದ ಕಾರ್ಯಕ್ರಮಗಳು ಯಶಸ್ವಿಯಾಗಲು ದೇವರ ಆಶೀರ್ವಾದದೊಂದಿಗೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.

ಪ್ರತಿಭಾವಂತರಿಗೆ ಕಿರುಕಾಣಿಕೆ: ಪ್ರತಿಭಾವಂತ ವಿದ್ಯಾರ್ಥಿಗಳಾದ ಫಿಯೋನಾ ಮಸ್ಕರೇನ್ಹಸ್, ವರ್ಷಾ ಪಿ, ಅಮೃತ, ಆತ್ಮಿ ಜೆ.ಶೆಟ್ಟಿರವರಿಗೆ ಈ ಸಂದರ್ಭದಲ್ಲಿ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.

ಬಡವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ: ಅನೀಷಾ ಡಿಸೋಜ, ವೀಣಾ ಡಿ’ಸೋಜ, ಸ್ವರ್ಣ, ಆಯಿಷತ್ ಅನ್ಸೀಫಾ, ಲೀನಾ ಎ.ವಿ, ವೆನಿಸ್ಸ ಮಸ್ಕರೇನ್ಹಸ್‌ರವರಿಗೆ ಪ್ರೋತ್ಸಾಹಧನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಪದಾಧಿಕಾರಿಗಳ ಆಯ್ಕೆ: 2016-17ನೇ ಸಾಲಿನ ಸುವರ್ಣ ವರ್ಷದ ನೂತನ ಸಮಿತಿಯ ಅಧ್ಯಕ್ಷರಾಗಿ ಶಿಕ್ಷಕಿ ಮೇರಿ ಲೋಬೋ ಸೇರಿದಂತೆ ಇತರ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆಗೊಳಿಸಲಾಯಿತು.

ಪ್ರೀಮಾ ರೋಚ್ ಮತ್ತು ಬಳಗ ಪ್ರಾರ್ಥಿಸಿದರು. ಸುನೀತಾ ಪಿಂಟೋರವರು ಲೆಕ್ಕಪತ್ರ ಮಂಡಿಸಿ, ಕಾರ್ಯದರ್ಶಿ ಫೆಲ್ಸಿ ಡಿಸೋಜ ವರದಿ ವಾಚಿಸಿದರು. ಲೀನಾ ಪಾಸ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.