ಎಸ್.ಡಿ.ಪಿ.ಐ ಬನ್ನೂರು ಘಟಕದಿಂದ ಹಾರಾಡಿ ಶಾಲೆಯಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1

 

sdpi1 sdpi2ಪುತ್ತೂರು: ಎಸ್.ಡಿ.ಪಿ.ಐ ಬನ್ನೂರು ಘಟಕದ ವತಿಯಿಂದ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್‌ಟಿಟ್ಯೂಟ್ ಮಂಗಳೂರು ಇದರ ಸಹಯೋಗದೊಂದಿಗೆ ಹಾರಾಡಿ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ದ.5ರಂದು ನಡೆಯಿತು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ನಡೆದ ಶಿಬಿರದಲ್ಲಿ ನೂರಾರು ಮಂದಿ ಉಚಿತ ಚಿಕಿತ್ಸೆ, ಸಲಹೆ ಪಡೆದು ಕೊಂಡಿದ್ದಾರೆ.

ವ್ಯಾಯಾಮದಿಂದ ಉತ್ತಮ ಆರೋಗ್ಯ: ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ.ಎ ಸಿದ್ದಿಕ್‌ರವರು ಮಾತನಾಡಿ ಮನುಷ್ಯ ಯಾಂತ್ರಿಕ ಜೀವನಕ್ಕೆ ಮಾರುಹೋಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಸರಿಯಾದ ವ್ಯಾಯಾಮ ನಿರಂತರ ಮಾಡಿದರೆ ಯಾವುದೇ ರೋಗ ಬರಲು ಸಾಧ್ಯವಿಲ್ಲ ಎಂದು ಹೇಳಿದರು.  ಶಾಲಾ ಮುಖ್ಯಗುರು ಮುದರರವರು ಮಾತನಾಡಿ ಮನುಷ್ಯನಿಗೆ ಹಣಕ್ಕಿಂತಲೂ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಜಿಲ್ಲಾಧ್ಯಕ್ಷ ಸಂಶುದ್ಧೀನ್ ಮತ್ತು ಸದಸ್ಯ ಜಾಬಿರ್ ಅರಿಯಡ್ಕ ಸಂದರ್ಭೋಚಿತವಾಗಿ ಮಾತನಾಡಿದರು. ಎಸ್.ಡಿ.ಪಿ.ಐ ಬನ್ನೂರು ಘಟಕದ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್.ಡಿ.ಪಿ.ಐ ಪುತ್ತೂರು ಘಟಕದ ಅಧ್ಯಕ್ಷ ಅಶ್ರಫ್ ಬಾವು, ಸಿಲ್.ಸಿಲಾ ವೆಲ್ಫೇರ್ ಎಸೋಸಿಯೇಶನ್ ಬನ್ನೂರು ಘಟಕದ ಅಧ್ಯಕ್ಷ ಎ.ಒ ಇಬ್ರಾಹಿಂ, ಬನ್ನೂರು ಮಸೀದಿ ಅಧ್ಯಕ್ಷ ಅಬೂಬಕ್ಕರ್, ಸದಸ್ಯ ರಫೀಕ್  ಬಾಂಬೆ ಉಪಸ್ಥಿತರಿದ್ದರು.  ಅಝೀಝ್ ಕೆಮ್ಮಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೂರಕ್ಕಿಂತಲೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು. ಇಂಡಿಯಾನ ಆಸ್ಪತ್ರೆಯ ಡಾ. ದೇವವೃತ್ ಶೆಟ್ಟಿ, ಡಾ| ಸಮಿಯುಲ್ಲಾ ರೇಗೋ ಹಾಗೂ ಸಿಬ್ಬಂದಿಗಳು ಶಿಬಿರದಲ್ಲಿ ರೋಗಿಗಳಿಗೆ ಮಾಹಿತಿ ನೀಡಿದರು. ರಿಯಾಝ್, ಸಾಬಿರ್, ಆರಿಫ್, ಇಫಾಝ್, ಪವಾಝ್, ಹಾರಿಸ್ ಮುಕ್ವೆ, ಖಾದರ್ ಅಕ್ಕರೆ, ಇರ್ಷಾದ್, ಸಿರಾಜ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.