Breaking News

’ಗ್ರಾಮೀಣ ಭಾಗದಲ್ಲಿ ದುಡಿಯುವ ಮಹಿಳೆಯರಿಗೆ ಸಂಬಳದಲ್ಲಿ ತಾರತಮ್ಯ ಪ್ರಶ್ನಿಸುವಂತಾಗಬೇಕು’- ನೂಜಿಬಾಳ್ತಿಲ ಮಹಿಳಾ ಗ್ರಾಮಸಭೆಯಲ್ಲಿ ತಾ.ಪಂ. ಸದಸ್ಯೆ ಉಷಾಅಂಚನ್

Puttur_Advt_NewsUnder_1
Puttur_Advt_NewsUnder_1

noojibalthila

ಕಡಬ: ಮಹಿಳೆಯರು ಅಬಲೆಯರಲ್ಲ ಅವರು ಸಬಲೆಯರು. ಪುರುಷ ಸಮಾನ ಮಹಿಳೆಯರಾಗಿzವೆ ಎಂದು ತಾ.ಪಂ.ಸದಸ್ಯೆ ಉಷಾ ಅಂಚನ್ ಹೇಳಿದರು. ಅವರು ನೂಜಿಬಾಳ್ತಿಲ ಗ್ರಾ.ಪಂ. ವತಿಯಿಂದ ನ.೩೦ ರಂದು ಗ್ರಾ.ಪಂ. ವಠಾರದಲ್ಲಿ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮಹಿಳೆಯರು ಇಂದು ಸ್ವತಂತ್ರರಾಗಿದ್ದಾರೆ. ಎಲ್ಲಾ ಮಹಿಳೆಯರು ಮನೆಯ ದಿನನಿತ್ಯದ ಕೆಲಸಗಳನ್ನು ಮಾಡಿ ಗ್ರಾಮ ಸಭೆಗೆ ಬಂದಿzವೆ. ಇಂದು ಸರಕಾರದ ೫೦% ಮೀಸಲಾತಿ ಪಡೆಯುವುದರೊಂದಿಗೆ ಪ್ರತಿಯೊಂದು ಹಂತದಲ್ಲೂ ಸಮಾಜದಲ್ಲಿ ಗೌರವಾನ್ವಿತಳಾಗಿ ಬದುಕುವ ಹಕ್ಕು ಮಹಿಳೆಯರಿಗಿದ್ದು ಗ್ರಾ.ಪಂ.ನಿಂದ ತಾ.ಪಂ., ಜಿ.ಪಂ., ಎಂಎಲ್‌ಎ, ಎಂ.ಪಿ.ಗಳ ಬಗ್ಗೆ ಗಮನಹರಿಸಿ ಎಲ್ಲಾ ಕಾಮಗಾರಿ ಸೇರಿದಂತೆ ಆಗುಹೋಗುಗಳ ಬಗ್ಗೆ ಗಮನಹರಿಸಿ ಎಲ್ಲಿ ಯಾರಿಂದಲೂ ತಪ್ಪುಗಳಾಗಿದ್ದರೂ ಪ್ರಶ್ನಿಸುವ ಹಕ್ಕು ನಮಗಿದ್ದು ನಾವು ಸಂಪೂರ್ಣ ತೊಡಗಿಸಿಕೊಂಡು ಮನೆಯನ್ನು ಬೆಳಗಿಸುವ ಮಹಿಳೆಯಾಗಿ ದೇಶವನ್ನು ಬೆಳಗಿಸುವ ಭದ್ರ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡು ದಿ| ಇಂದಿರಾ ಗಾಂಧಿಯಂತೆ ಶಕ್ತಿಶಾಲಿ ಮಹಿಳೆಯರಾಗಬೇಕೆಂದು ಹೇಳಿದರು. ಇಂದು ದೇಶದಲ್ಲಿ ಸಮಾನತೆ ಇದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಮೂಲಕ ಸಮಾನ ಕೂಲಿ ಜಾರಿ ಮಾಡಲಾಗಿದೆ. ಆದರೆ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿರುವ ನಮಗೆ ಗ್ರಾಮೀಣ ಭಾಗದಲ್ಲಿ ಅವರ ಅರ್ಧ ಸಂಬಳ ನೀಡಿ ತಾರತಮ್ಯವೆಸಗುತ್ತಿರುವುದು ವಿಷಾದನೀಯ. ಇದನ್ನು ನಾವು ಪ್ರಶ್ನಿಸಲೇ ಬೇಕಾಗಿದೆ ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ  ಸದಾನಂದ ಗೌಡ ಸಾಂತ್ಯಡ್ಕ ತಾಯಿಯೇ ಪರಮಶ್ರೇಷ್ಟಳಾಗಿರುವ ಈ ಪುಣ್ಯಭೂಮಿಯಲ್ಲಿ ಮಹಿಳೆಯರೇ ಸರ್ವಶ್ರೇಷ್ಟರು. ಅದನ್ನು ಅರಿತು ಬಾಳಿದರೆ ಸಮಾಜಕ್ಕೆ ಒಳಿತು ಎಂದರು.

ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ನಾವು ಎಲ್ಲಾ ರೀತಿಯಿಂದಲೂ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದ್ದು ಈಗಾಗಲೇ ದೇಶದಾದ್ಯಂತ ಮಹಿಳೆಯರು ಸಬಲೀಕರಣ ಹೊಂದುವುದರೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸರಕಾರ ಮಹಿಳೆಯರಿಗೆ ಶೇ.೫೦ ಮೀಸಲಿಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದೆ ಎಂದರು.

ಗ್ರಾ.ಪಂ.ಸದಸ್ಯರಾದ ರಾಮಚಂದ್ರ ಗೌಡ ಎಸ್, ಪಿ.ಯು ಸ್ಕರಿಯಾ, ಅಮ್ಮಣಿ ಜೋಸೆಫ್, ವಲ್ಸ ಕೆ.ಜೆ, ಪುಷ್ಪಲತಾ, ಹೊನ್ನಮ್ಮ, ಕಿ.ಆರೋಗ್ಯ ಸಹಾಯಕಿಯರಾದ ದಯಾಕಿರಣ್, ಮಧುರಾ ಉಪಸ್ಥಿತರಿದ್ದರು. ನೂಜಿ ಅಡೆಂಜ, ಬಾಳೆಮಾರ್, ಬಳ್ಳೇರಿ, ಬಳಕ್ಕ, ಬೇರಿಕೆ, ಮೀನಾಡಿ, ಮಾರಪ್ಪೆ, ತಲೆಕ್ಕಿ, ಬಸ್ತಿ, ಬದಿಬಾಗಿಲು, ಕಾಡುಮನೆ, ಪಾಡ್ಲ, ನೀರಾರಿ, ಮಾವಿನಕಟ್ಟೆ, ಪೇರಡ್ಕ, ಕುಬಲಾಡಿ, ಕನ್ವಾರೆ, ಬರಿಕ್ಕಳ, ಗೋಳಿಯಡ್ಕ, ನಿಡ್ಮೇರು ಭಾಗಗಳಿಂದ ಮಹಿಳೆಯರು ಭಾಗವಹಿಸಿದ್ದರು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಸ್ವಾಗತಿಸಿ, ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮರಾಮ್‌ದಾಸ್  ಪ್ರಾಸ್ತಾವಿಕವಾಗಿ ಮಾತನಾಡಿ ಸಮಗ್ರ ಮಾಹಿತಿ ನೀಡಿದರು.

ಕೇಂದ್ರ ಸರಕಾರ ರಾಜ್ಯ ಸರಕಾರ ಎಲ್ಲಾ ರೀತಿಯಿಂದಲೂ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ. ಆದರೆ ಅದೆಷ್ಟೋ ಪುಟಾಣಿಗಳನ್ನು ಬೆಳಿಗ್ಗೆಯಿಂದ ಸಂಜೆ ತನಕ ಅಂಗನವಾಡಿಯಲ್ಲಿ ಸಾಕಿ ಸಲಹಿ ಅವರ ಸೇವೆ ಮಾಡುತ್ತಿರುವುದಲ್ಲದೆ ಇಲಾಖೆಯಿಂದ ಹಾಗೂ ಇತರ ಇಲಾಖೆಗಳಿಂದಲೂ ನೀಡುವ ಆದೇಶಗಳನ್ನು ಪಾಲಿಸಿ ದಿನಪೂರ್ತಿ ದುಡಿಯುವ ಅಂಗನವಾಡಿ ಕಾರ‍್ಯಕರ್ತೆಯರಿಗೆ ಅತ್ಯಲ್ಪ ಗೌರವಧನ ನೀಡುವುದರೊಂದಿಗೆ ದುಡಿಸಿಕೊಳ್ಳುತ್ತಿರುವ ಬಗ್ಗೆ ನಮ್ಮ ಸಂಕಷ್ಟದ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಬಗ್ಗೆ ಮಹಿಳಾ ಗ್ರಾಮಸಭೆಯ ಮೂಲಕ ನಮ್ಮ ಕೂಗನ್ನು ಸರಕಾರಕ್ಕೆ ಮುಟ್ಟಿಸಿ ನಮಗೆ ಸರಿಯಾದ ಸಂಬಳ ಸಿಗುವಂತೆ ಒತ್ತಾಯಿಸಬೇಕೆಂದು ಅಂಗನವಾಡಿ ಕಾರ‍್ಯಕರ್ತೆಯರಾದ ಎಲಿಯಮ್ಮ, ವಾರಿಜ, ಪ್ರಫುಲ್ಲ ರೈ, ಅಮೀನ ಕೆ, ರಾಜೀವಿ, ಸುಮಿತ್ರ, ಸಾರಮ್ಮ, ಹೇಮಾವತಿ ಆಗ್ರಹಿಸಿದರು. ಈ ಬಗ್ಗೆ ಉತ್ತರಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಉಷಾ ಅಂಚನ್ ಖಂಡಿತಾ ಅಂಗನವಾಡಿ ಕಾರ‍್ಯಕರ್ತೆಯರಿಗೆ ಸರಕಾರಿ ಶಾಲಾ ಶಿಕ್ಷಕರಿಗೆ ಸಿಗುವ ಸಂಬಳ ಸಿಗಬೇಕಾಗಿದೆ. ಅವರ ಕೆಲಸ ಎಲೆಮರೆ ಕಾಯಿಯಂತೆ ಬಿಡುವಿಲ್ಲದೆ ನಡೆಯುತ್ತಿದೆ. ನಮಗೆ ೧ ಅಥವಾ ೨ ಮಕ್ಕಳನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತಿರುವಾಗ ೨೦-೩೦ ಪುಟಾಣಿಗಳನ್ನು ನೋಡಿಕೊಂಡು  ಅವರಿಗೆ ಶಾಲಾ ಪೂರ್ವ ಶಿಕ್ಷಣದೊಂದಿಗೆ ಅವರ ಪಾಲನೆ ಪೋಷಣೆ, ಗರ್ಭಿಣಿ ಬಾಣಂತಿಯರ ಪೋಷಣೆ, ಕಿಶೋರಿಯರ ಪೋಷಣೆ ಸೇರಿದಂತೆ ಮನೆ ಭೇಟಿ ಗಣತಿ ಸೇರಿದಂತೆ ಅದೆಷ್ಟೋ ಬೇರೆ ಬೇರೆ ತಮಗೆ ಹೊರಿಸುವ ಕರ್ತವ್ಯಗಳನ್ನು ಮಾಡುತ್ತಿರುವ ಕಾರ‍್ಯಕರ್ತೆಯರಿಗೆ ಸರಕಾರ ಸರಿಯಾದ ಸಂಬಳ ನೀಡಲೇಬೇಕಾಗಿದೆ. ಇಂದು ಇಲ್ಲಿ ನಡೆದ ಗ್ರಾಮಸಭೆಯ ಮೂಲಕ ನಿರ್ಣಯಮಾಡಿ ಸರಕಾರಕ್ಕೆ ಕಳುಹಿಸಲಾಗುವುದು ಎಂದರು. ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಮಾತನಾಡಿ ಇದು ಅಂಗನವಾಡಿ ಕಾರ‍್ಯಕರ್ತೆಯರ ನಿಜವಾದ ಬೇಡಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಸರಕಾರವನ್ನು ಒತ್ತಾಯಿಸಲಾಗುವುದು ಎಂದರು. ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡರವರು ಈಗಿನ ಪರಿಸ್ಥಿತಿಯಲ್ಲಿ ಯಾರೊಬ್ಬರಿಗೂ ದಿನಕ್ಕೆ ರೂ.೫೦೦ ರೂ ಇಲ್ಲದೆ ಜೀವಿಸಲು ಸಾಧ್ಯವಿಲ್ಲ. ಗಗನ ಕುಸುಮವಾಗಿರುವ ಸಾಮಾಗ್ರಿಗಳನ್ನು ಪಡೆದು ತನ್ನ ಜೀವನ ನಡೆಸಬೇಕಾದರೆ ಅವರಿಗೆ ಒಂದು ನಿರ್ದಿಷ್ಟ ಸಂಬಳ ಇರಲೇಬೇಕಾಗಿದೆ. ಈ ವಿಚಾರದ ಬಗ್ಗೆ ನಿರ್ಣಯಿಸಿ ಕಳುಹಿಸಲಾಗುವುದು ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.