’ವ್ಯವಸ್ಥಿತವಾಗಿ ಮಾಡುವ  ಕೆಲಸದಲ್ಲಿ ಯಶಸ್ಸು’ ಕೊಂಬೆಟ್ಟು ಎನ್.ಸಿ.ಸಿ ದಿನಾಚರಣೆಯಲ್ಲಿ ಬಿ.ವಿ ಸೂರ‍್ಯನಾರಾಯಣ

Puttur_Advt_NewsUnder_1
Puttur_Advt_NewsUnder_1

 

kombettu1kombettu2ಪುತ್ತೂರು: ಯಾವುದೇ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದಾಗ ಯಶಸ್ಸು ಸಾಧ್ಯ.  ವಿದ್ಯಾರ್ಥಿಗಳು ತಮ್ಮ ಕಲಿಕೆಯ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದಾಗ ಜೀವನದಲ್ಲ್ಸೂ, ಶಿಕ್ಷಣದಲ್ಲೂ ಸಾಧನೆ ಸಾಧ್ಯ ಎಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸೂರ್ಯನಾರಾಯಣ ಬಿ.ವಿ. ಹೇಳಿದರು. ಕೊಂಬೆಟ್ಟು  ಸರಕಾರಿ ಪದವಿಪೂರ್ವ ಕಾಲೇಜು ಪುತ್ತೂರು (ಪ್ರೌಢಶಾಲಾ ವಿಭಾಗ) ಇಲ್ಲಿ ಎನ್. ಸಿ .ಸಿ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ , ಗೌರವವಂದನೆಯನ್ನು ಸ್ವೀಕರಿಸಿ ನಂತರ ಎನ್.ಸಿ.ಸಿ ಕೆಡೆಟ್‌ಗಳನ್ನುದ್ದೇಶಿಸಿ ಅವರು ಮಾತನಾಡಿದರು.

        ಸಾರ್ಜೆಂಟ್/ ಸನತ್ ಆರ್ ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರೆ, ಸಾರ್ಜೆಂಟ್ /ಶರ್ಮಿಳ, ಕಾರ್ಪೊರಲ್. ಅಭಿಶೇಕ್, ಲ್ಯಾನ್ಸ್ ಕಾರ್ಪೊರಲ್. ಸಂದೀಪ್ ಪ್ಲಟೂನ್ ಕಮಾಂಡರ್‌ಗಳಾಗಿಯೂ, ಪಥಸಂಚಲನದಲ್ಲಿ  ಭಾಗವಹಿಸಿದ್ದರು. ಸಂಸ್ಥೆಯ ಉಪಪ್ರಾಚಾರ್ಯ ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಕಾರ್ಯಾಧಕ್ಷ   ಜೋಕಿಂ ಡಿಸೋಜ ಸಮಯೋಚಿತವಾಗಿ ಮಾತನಾಡಿದರು. ಶಿಕ್ಷಕಿ. ಮಮತಾ ರೈ ಮತ್ತು ವಿದ್ಯಾರ್ಥಿನಿ ಕು. ಲಹರಿ. ಎಚ್. ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಆಶ್ಲೇಷ್ ಕುಮಾರ್ ಮತ್ತು ಶಶಿಕುಮಾರ್ ಸಹಕರಿಸಿದರು. ಎನ್.ಸಿ.ಸಿ ಅಧಿಕಾರಿ ಗ್ರೆಗೊರಿ ಪಾಯ್ಸ್ ಸ್ವಾಗತಿಸಿ, ಚಿತ್ರಕಲಾ ಶಿಕ್ಷಕರಾದ ಜಗನ್ನಾಥ ಪಿ. ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.