Breaking News

ಚಾರ್ವಾಕ- ಗೌಡ ಸಂಘದ ಗ್ರಾಮ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

charvaka

ಕಾಣಿಯೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ 72ನೇ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ತಾಲೂಕಿನ ಗ್ರಾಮಗಳ ಭೇಟಿ ಕಾರ್ಯಕ್ರಮದ ಅಂಗವಾಗಿ ಡಿ 27ರಂದು ಪುಣ್ಚತ್ತಾರು ಶ್ರೀ ಹರಿ ಸಭಾಭವನದಲ್ಲಿ ಆಶೀರ್ವಚನ ಸಮಾರಂಭ ನಡೆಯಲಿದೆ.

ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಾರ್ವಾಕ 1 ಮತ್ತು 2ನೇ ವಾರ್ಡ್ ಸಮಿತಿಯು ರಚನೆಗೊಂಡಿದ್ದು, 1ನೇ ವಾರ್ಡ್‌ನ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪದ್ಮನಾಭ ಗೌಡ ಪೊನ್ನೆತ್ತಡಿ, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಗೌಡ ನೀಟಡ್ಕರವರನ್ನು ಆಯ್ಕೆ ಮಾಡಲಾಗಿದೆ. ಜತೆ ಕಾರ್ಯದರ್ಶಿಯಾಗಿ ದಾಮೋದರ ಕೋಡಂದೂರು, ನಾರಾಯಣ ಕೋಲ್ಪೆ, ಕೋಶಾಧಿಕಾರಿಯಾಗಿ ತಿಮ್ಮಪ್ಪ ಗೌಡ ಎಣ್ಮೂರು, ಉಪಾಧ್ಯಕ್ಷರುಗಳಾಗಿ ಗೋಪಾಲಕೃಷ್ಣ ಬಾರೆಂಗಳ, ಆನಂದ ಗೌಡ ಮೇಲ್ಮನೆ, ಡೊಂಬಯ್ಯ ಗೌಡ ಬೀರೊಳಿಗೆಯವರನ್ನು ಆಯ್ಕೆಮಾಡಲಾಯಿತು. 2ನೇ ವಾರ್ಡ್ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಜಯಂತ ಅಂಬುಲ, ಕಾರ್ಯದರ್ಶಿ ವಿಶ್ವನಾಥ ಗೌಡ ಕಂಪ, ಕೋಶಾಧಿಕಾರಿ ಸೀತಾರಾಮ ಗೌಡ ಖಂಡಿಗ,  ಜೊತೆಕಾರ್ಯದರ್ಶಿ ಪ್ರಕಾಶ್ ಅರುವ, ಉಪಾಧ್ಯಕ್ಷರಾಗಿ ಸೀತಮ್ಮ ಖಂಡಿಗ, ಮೋನಪ್ಪ ಗೌಡ ಉಳವ, ಸುಂದರ ದೇವಸ್ಯರವರನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ ಗೌರವ ಸಲಹೆಗಾರರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಸವಣೂರು ವಲಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಕಾರ್ಯದರ್ಶಿ ಹರೀಶ್ ಪೈಕ, ಸಿ.ಪಿ ಜಯರಾಮ ಗೌಡ ಅರುವಗುತ್ತು, ವಲಯ ಉಸ್ತುವಾರಿ ಶಿವರಾಮ ಗೌಡ ಮೆದು, ಉಪಾಧ್ಯಕ್ಷರಾದ ನಾರಾಯಣ ಗೌಡ ಪುಣ್ಚತ್ತಾರು,  ಪುತ್ತೂರು ಯುವ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಕುಶಾಲಪ್ಪ ಗೌಡ ದೈಪಿಲರವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.