Breaking News

ಪೆರ್ನೆ: ಬುಲೆಟ್ ಟ್ಯಾಂಕರ್ ಪಲ್ಟಿ ತಪ್ಪಿದ ಸಂಭವನೀಯ ದುರಂತ

Puttur_Advt_NewsUnder_1
Puttur_Advt_NewsUnder_1

dsc08748 dsc08737 dsc08754

ಚಾಲಕ, ಕ್ಲೀನರ್‌ಗೆ ಗಾಯ,

 ಎಸ್.ಪಿ., ಶಾಸಕರ ಭೇಟಿ

 ಅಗ್ನಿಶಾಮಕ ದಳದಿಂದ       ಮುಂಜಾಗ್ರತಾ ಕ್ರಮ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪೆರ್ನೆ ಸಮೀಪ ಕಡಂಬು ಎಂಬಲ್ಲಿ ಬುಲೆಟ್ ಟ್ಯಾಂಕರ್ ಪಲ್ಟಿ ಆಗಿ ಚಾಲಕ ಸಣ್ಣಪುಟ್ಟ ತರಚಿದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೃಷ್ಠವಶಾತ್ ಗ್ಯಾಸ್ ಸೋರಿಕೆ ಇಲ್ಲದೆ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ.

 ಟ್ಯಾಂಕರ್ ಪಲ್ಟಿ ಆಗಿ ಚಾಲಕ ತಮಿಳುನಾಡು ಮೂಲದ ಅಲ್ಗುರಿ ಸ್ವಾಮಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಲೀನರ್ ವೇಲು ಸಣ್ಣಪುಟ್ಟ ತರಚಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಗ್ಯಾಸ್ ಹೇರಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಆಗಿದ್ದು, ಗ್ಯಾಸ್ ಸೋರಿಕೆ ಇಲ್ಲದ ಕಾರಣ ಸಂಭವನೀಯ ದುರಂತ ತಪ್ಪಿದಂತಾಗಿದೆ.

 4 ವರ್ಷದ ಹಿಂದಿನ ನೆನಪು, ಭೀತಿ:  4 ವರ್ಷದ ಹಿಂದೆ ಪೆರ್ನೆಯಲ್ಲಿ ಬುಲೆಟ್ ಟ್ಯಾಂಕರ್ ಪಲ್ಟಿ ಆಗಿ ಗ್ಯಾಸ್ ಸೋರಿಕೆ ಆಗಲಾರಂಭಿಸಿ, ಬೆಂಕಿ ಹತ್ತಿಕೊಂಡು ಭಾರೀ ದುರಂತ ಸಂಭವಿಸಿತ್ತು. 13 ಮಂದಿ ಮೃತಪಟ್ಟಿದ್ದರು. ಹೀಗಾಗಿ ಪೆರ್ನೆ ಪರಿಸರದಲ್ಲಿ ಬುಲೆಟ್ ಟ್ಯಾಂಕರ್ ಪಲ್ಟಿ ಆದಾಗಲೆಲ್ಲ ಸ್ಥಳೀಯರಲ್ಲಿ ಆತಂಕ ಎದುರಾಗುತ್ತಿದ್ದು, ಸಹಜವಾಗಿ ಇಂದು ಕೂಡಾ ಜನರಲ್ಲಿ ಆತಂಕ ವ್ಯಕ್ತವಾಗಿತ್ತು.

ಎಸ್.ಪಿ., ತಹಸೀಲ್ದಾರ್ ಶಾಸಕರ ಭೇಟಿ:  ಗ್ಯಾಸ್ ಟ್ಯಾಂಕರ್ ಪಲ್ಟಿ ಆಗಿದೆ ಎಂದು ತಿಳಿಯುತ್ತಲೇ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ, ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ತದ ನಂತರ ಸಂಸದೀಯ ಕಾರ‍್ಯದರ್ಶಿ, ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಉಮಾನಾಥ ರೈ, ಮಿತ್ರದಾಸ್ ರೈ ತನ್ನ ತೋಟದಿಂದ ನೀರಿನ ವ್ಯವಸ್ಥೆ ಮಾಡಿ ಸಮಯೋಚಿತ ಸಹಕಾರ ನೀಡಿದರು.

 ಅಗ್ನಿಶಾಮಕ ದಳ ಆಗಮನ, ಮುಂಜಾಗ್ರತಾ ಕ್ರಮ:  ಪಲ್ಟಿ ಆಗಿರುವ ಟ್ಯಾಂಕರ್‌ನಲ್ಲಿ ಗ್ಯಾಸ್ ಇದ್ದ ಕಾರಣ ಮುಂಜಾಗ್ರತಾ ಕ್ರಮ ಸಲುವಾಗಿ ಸ್ಥಳಕ್ಕೆ ಅಗ್ನಿಶಾಮಕ ದಳವನ್ನು ಕರೆಸಲಾಗಿ ಮುಂಜಾಗ್ರತಾ ಕ್ರಮ ಅನುಸರಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಬಂದೋಬಸ್ತ್ ನಲ್ಲಿ ನಿರತರಾಗಿದ್ದರು. ಸಂಜೆ ಹೊತ್ತು ಕ್ರೇನ್ ಮೂಲಕ ಸ್ಥಳೀಯರ ಸಹಕಾರದೊಂದಿಗೆ ಟ್ಯಾಂಕರನ್ನು ಸರಿಪಡಿಸಿ ನಿಲುಗಡೆಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.