Breaking News

ಇಚಿಲಂಪಾಡಿ: ಯಕ್ಷಗಾನ ತಾಳಮದ್ದಳೆ

Puttur_Advt_NewsUnder_1
Puttur_Advt_NewsUnder_1

ichilampadyನೆಲ್ಯಾಡಿ: ಇಚಿಲಂಪಾಡಿ ಗ್ರಾಮದ ಹೊಸಮನೆ ಉದಯ ಕುಮಾರ ಶೆಟ್ಟಿಯವರ ನೂತನ ಮನೆ’ಗೋಕುಲ’ದ ಗೃಹ ಪ್ರವೇಶದ ಪ್ರಯುಕ್ತ ನೆಲ್ಯಾಡಿ ಶ್ರೀ ಶಬರೀಶ ಕಲಾವೃಂದ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ’ಭೀಷ್ಮ ವಿಜಯ’ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಲಕ್ಷ್ಮೀ ನಾರಾಯಣ ಶೆಟ್ಟಿ ನೆಲ್ಯಾಡಿ, ಚೆಂಡೆ ಮದ್ದಳೆಗಳಲ್ಲಿ ಅಣ್ಣಿ ಗೌಡ ಶಿಶಿಲ, ವಿಠಲ ಹೆಬ್ಬಾರ್ ಕೊಕ್ಕಡ, ಹರಿಪ್ರಸಾದ್ ಇಚಿಲಂಪಾಡಿ, ಮುಮ್ಮೇಳದಲ್ಲಿ ಭೀಷ್ಮನಾಗಿ ಗುಡ್ಡಪ್ಪ ಗೌಡ ಬಲ್ಯ, ಪರಶುರಾಮನಾಗಿ ಸುಬ್ಬಪ್ಪ ಕೈಕಂಬ, ಅಂಬೆಯಾಗಿ ಕಟೀಲು ಮೇಳದ ಕಲಾವಿದ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಸಾಲ್ವನಾಗಿ ವಿಶ್ವನಾಥ ಪದ್ಮುಂಜ, ಬ್ರಾಹ್ಮಣನಾಗಿ ಕಟೀಲು ಮೇಳದ ರವಿಭಟ್ ಕೆಮ್ಮಣಮಕ್ಕಿ ಪಾಲ್ಗೊಂಡಿದ್ದರು. ಮನೆಯ ಯಜಮಾನ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ ಪಾತ್ರ ಪರಿಚಯಗೈದರು. ವೇಣುಗೋಪಾಲ ಶೆಟ್ಟಿ ವಂದಿಸಿದರು. ಮನೆಯ ಹಿರಿಯರಾದ ಮೋನಪ್ಪ ಶೆಟ್ಟಿಯವರು ಕಾರ್ಯಕ್ರಮದ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.