ಸುರುಳಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚೌತಿ, ಪಂಚಮಿ,ಷಷ್ಠಿ ಉತ್ಸವ

Puttur_Advt_NewsUnder_1
Puttur_Advt_NewsUnder_1

suruli1suruli2suruli3ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ದ.3 ರಿಂದ 5 ರ ತನಕ ಚೌತಿ,ಪಂಚಮಿ, ಷಷ್ಠಿ ಉತ್ಸವಗಳು ನಡೆಯಿತು.

ದ.3 ರಂದು ಬೆಳಿಗ್ಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಗಣಹವನ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಬೆಂಗಳೂರಿನ ಉದ್ಯಮಿ ರತನ್ ರೈ, ಪ್ರೀತಾ ಎಸ್.ರೈ, ಯಶಸ್ ರೈಯವರ ಸೇವಾರ್ಥವಾಗಿ ವಿವಿಧ ಸೇವೆಗಳನ್ನು ನಡೆಸಿಕೊಟ್ಟರು. ದ.4 ರಂದು ಬೆಳಿಗ್ಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಹೂವಿನ ಪೂಜೆ, ಸಹಸ್ರನಾಮಾರ್ಚನೆ, ಅನ್ನಸಂತರ್ಪಣೆ ನಡೆಯಿತು. ಸೇವೆಗಳನ್ನು ಕೆಯ್ಯೂರು ಪೊಯ್ಯೊಲೆ ಶ್ರೀ ದುರ್ಗಾನಿಲಯದ ವಿಠಲ ರೈ, ಶ್ರೀಮತಿ ನಯನ ರೈ ಮತ್ತು ಮಕ್ಕಳು ಸೇವಾರ್ಥವಾಗಿ ನಡೆಸಿಕೊಟ್ಟರು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಿತು. ದ.5 ರಂದು ಬೆಳಿಗ್ಗೆ ಷಷ್ಠಿ ಪ್ರಯುಕ್ತ ಶ್ರೀ ದೇವರಿಗೆ ನವಕಲಶಾಭಿಷೇಕ, ಪಂಚಮೃತಾಭಿಷೇಕ, ಮಹಾಪೂಜೆ ಚೆಂಡೆ ವಾದನದೊಂದಿಗೆ ವಿಜ್ರಂಭಣೆಯಿಂದ ನಡೆಯಿತು. ಬಳಿಕ ಬ್ರಾಹ್ಮಣ ಸುಹಾಸಿನಿ ಆರಾಧನೆ, ಷಷ್ಠಿ ವೃತಧಾರಿಗಳಿಗೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸೇವೆಗಳನ್ನು ಮುದಲೆಮಾರು ಮತ್ತು ಅಂಜಾರುಬೀಡು ಕುಟುಂಬಸ್ಥರು ಸೇವಾರ್ಥವಾಗಿ ನಡೆಸಿಕೊಟ್ಟರು.  ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರ ಮುದಲೆಮಾರು ರಾಮಮೋಹನ ರೈ ಸುರುಳಿ, ಊರ, ಪರವೂರಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.