Breaking News

ನೋಟು ರದ್ದು  ಪರಿಣಾಮ:  ಲೇಖನ, ಅಭಿಪ್ರಾಯಗಳು-ಸಂವಾದಕ್ಕೆ ಆಹ್ವಾನ ಮೋದೀಜಿಗೊಂದು ಪತ್ರ

Puttur_Advt_NewsUnder_1
Puttur_Advt_NewsUnder_1

modiಮೋದೀಜಿಯವರೇ,

ನೀವು ಭಾರತ ದೇಶವನ್ನು ಕಟ್ಟುವಿಕೆಯ ಬಗ್ಗೆ ಕಾಣುವ  ಕನಸಿಗೆ ನಾನು ಸ್ಪಂದಿಸುತ್ತೇನೆ.

ಹೇಗೆ ಗಂಗಾ ಮಾತೆಗೆ ಭೀಷ್ಮನೆಂಬ ಮಗನಿದ್ದನೋ ಅಂತೆಯೇ ನೀವೂ ಕೂಡಾ ಜನ್ಮತಃ ಗಂಗಾ ಮಾತೆಯ ಮಗನಂತೆ ಕಂಡಿರಿ. ನೀವು ಈ ದೇಶದ ನಾಯಕರಾದ ನಂತರ ಕೈಗೊಂಡ ಮೊದಲ ನಿರ್ಧಾರವೇ ಗಂಗಾ ನದಿಯ ಶುಚಿತ್ವದ ಬಗ್ಗೆ. ನೀವು ಅವಳನ್ನು ಕೂಡಾ ಒಬ್ಬ ತಾಯಿಯಂತೆ ಕಂಡಿದ್ದು ಇದಕ್ಕೆ ಉದಾಹರಣೆ.

ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀವು ಎಲ್ಲರಿಗೂ ಕೊಟ್ಟಿದ್ದೀರೆಂದು ನನ್ನ ನಂಬಿಕೆ ಹಾಗೂ ಎಲ್ಲರಿಗೂ ವ್ಯವಸ್ಥೆಯ ಬಗ್ಗೆ ಹಾಗೂ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲು ಎಲ್ಲರಿಗೂ ಅವಕಾಶವನ್ನು ಕಲ್ಪಿಸಿದ್ದೀರಿ. ಅದಕ್ಕೆನ್ನ ತುಂಬು ಹೃದಯದ ಸ್ವಾಗತ.

ಕಪ್ಪು ಹಣದ ನಿಯಂತ್ರಣದ ಬಗ್ಗೆ ಈ ಯೋಜನೆಯನ್ನು ನೀವು ಕೈಗೆತ್ತಿಕೊಂಡಿದ್ದು ಭಾರಿ ಒಳ್ಳೆಯದೇ ಆಗಿದೆ. ಕಾರಣವೇನೆಂದರೆ ಕಷ್ಟಪಟ್ಟು ದುಡಿದು ತಿನ್ನುವ ಕಾಲವಿತ್ತು ಅಂದು. ಆದರೀಗ ಹೆಚ್ಚಿನ ಜನರು ತಮ್ಮ ತಮ್ಮ ಶ್ರಮ ಹಾಗೂ ಸಾಧನೆಯನ್ನು ಮಾಡದೆ ಬೇಗನೆ ಹಣ ಸಂಪಾದಿಸುವ ಆಲೋಚನೆಗೆ ಇಳಿದಿದ್ದಾರೆ ಹಾಗೂ ಅತ್ಯಂತ ವೇಗದ ಗತಿಯಲ್ಲಿ ತಮ್ಮ ಕೆಲಸಗಳನ್ನು ಕಪ್ಪು ಹಣದ ಚಾಲನೆಯ ಮೂಲಕ ಮಾಡಿ ಮುಗಿಸುತ್ತಾರೆ. ನಿಜ ನಿರ್ಗತಿಕರ ಪಾಡೇನು ಹಾಗಾದರೆ? ಜೀವಿತದಲ್ಲಿ ಅವರು ನಿಜವಾಗಿಯೂ ಬಡವರಾಗೇ ಇರಬೇಕೇ? ನೀವು ಮಾಡಿದ ಯೋಜನೆಯ ಬಗ್ಗೆ ಒಳಗಿನಿಂದ ನಿಜವಾಗಿಯೂ ಯಾರು ತಿಳಿದಿರುತ್ತಾರೋ ಅಂತಹವರು ನಿಮ್ಮ ಬಗ್ಗೆ ದೂರಲು ಹೋಗಲಾರರು. ಕಾರಣ ಅವರಿಗೆ ನಿಮ್ಮ ಬಗ್ಗೆ ಮತ್ತು ನಿಮ್ಮ ನಿಲುವಿನ ಬಗ್ಗೆ ಗೊತ್ತಿಲ್ಲವೇನೋ? ಹಾಗಾಗಿ ಬೇರೆ ಬೇರೆ ಮಾತುಗಳನ್ನು ಆಡುತ್ತಾರೋ ಏನೋ?

ಮೋದಿಯವರು ನಾಯಕತ್ವದ ಬಗ್ಗೆ ಮಾತ್ರ ಯೋಚಿಸದೆ ಒಬ್ಬ ಪ್ರಜೆ ಯಾಗಿಯೂ ನಿಂತು ಯೋಚಿಸಿಯೇ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ನನ್ನ ಭಾವನೆ. ಹಣ ಮಾಡಲು ಮಾಡುವ ತಲೆಬಿಸಿ ಪುರುಸೊತ್ತಿಲ್ಲದ ಈ ಜೀವನಕ್ಕಿಂತ ನಮ್ಮದೇ ಹಣವಾದರೂ ಹಣಕ್ಕಾಗಿ ಬ್ಯಾಂಕ್‌ನ ಎದುರು ನಿಲ್ಲುವ ತಲೆಬಿಸಿಯೇ ಒಳ್ಳೆಯದು ಎಂದು ನನಗನಿಸುತ್ತಿದೆ. ಈ ಮೂಲಕವಾದರೂ ಬರಿಯ ಹಣ ಹಾಗೂ ಅಂತಸ್ತನ್ನೇ ಹೊಂದಲು ನಿರಂತರ ದುಡಿಮೆ ಹಾಗೂ ತನ್ನ ವ್ಯಕ್ತಿತ್ವಕ್ಕೇ ಬೆಲೆ ಕೊಡಲೂ ಪುರುಸೊತ್ತಿಲ್ಲದ ಜನ ಇನ್ನಾದರೂ ಸಮಯ ಹಾಗೂ ಸಂಬಂಧಗಳಿಗೆ ಬೆಲೆ ಕೊಟ್ಟಾರು ಎಂಬ ಭಾವನೆ ನನ್ನದು. ಹಾಗೆಯೇ ಮೋದಿಯವರು ಜೀವನಕ್ಕೊಂದು ಅರ್ಥ ವ್ಯವಸ್ಥೆಯನ್ನು  ಕಲ್ಪಿಸುವ ಕೆಲಸವನ್ನು ಮಾಡಿದ್ದಾರೆಂಬುದು ನನ್ನ ಭಾವನೆ. ಇಡೀ ದೇಶಕ್ಕೇ ಸಮಾನತೆಯನ್ನು ತಂದೊಡ್ಡುವ ಭಾವದಲ್ಲಿ ಕಪ್ಪು ಹಣ ನಿಯಂತ್ರಿಸುವ ಮೂಲಕ ನಿರ್ಧಾರ ತೆಗೆದುಕೊಂಡು ನಮ್ಮ ಭಾರತ ದೇಶಕ್ಕೇ (unoform) ಸಮವಸ್ತ್ರ ವನ್ನು ನಮ್ಮ ಮನದ ಕನ್ನಡಿಗೆ ಧರಿಸುವಂತೆ ಮಾಡಿದ ಒಬ್ಬ ನಾಯಕರು ಮಹಾತ್ಮರೂ ಆಗಿದ್ದೀರಿ ಎಂದು ನಾನು ಹೇಳುತ್ತಿzನೆ. ಸುಮ್ಮನೆ ನಾಯಕರಾಗಿ ಯಾವುದೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಶಕ್ತರಾಗಿದ್ದರೆ ನಾಯಕತ್ವದ ಪಾಡೇನು? ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ನಾವಾಗುತ್ತೇವೆ ಅಲ್ಲವೇ?

ನಾಯಕತ್ವ ಎಂದರೆ ಹೆಮ್ಮೆಯ ಕೆಲಸವಲ್ಲವೇ? ಅದಕ್ಕೆ ತಕ್ಕಂತೆ ಅವರ ಆಲೋಚನೆ ನಿರ್ಧಾರಗಳಿಂದಲೇ ಜನರನ್ನು ಮುಟ್ಟಲು ಸಾಧ್ಯ. ಸ್ವಲ್ಪ  ಕಾಲಾವಕಾಶ ಬೇಕು. ಇಂದಿ ನಿಂದ ನಾಳೆಗೇ ಎಲ್ಲವೂ ಸರಿಯಾಗುವುದೇ?  ಜನರನ್ನು ಪ್ರತಿನಿಧಿಸುವಂತಹ ಒಂದು ಅರ್ಹತೆ ಯೋಗ್ಯತೆಯನ್ನು ಹೊಂದಿ ದವರಿಗೆ ಮಾತ್ರ ಒಂದು ದೇಶದ ನಾಯಕತ್ವದ ಬಗ್ಗೆ ಅಲ್ಲಿ ಎಚ್ಚರಿಕೆಯ ಪಾತ್ರವಿರುತ್ತದೆ.

ಹೇಗೆ ಒಂದು ಮನೆಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತಾನೋ ಅಂತೆಯೇ ಮೋದಿಯವರು ಕೂಡಾ ಭಾರತ ದೇಶಕ್ಕೇ ಬರೀ ನಾಯಕರಾಗಿ ಅಲ್ಲ ದೇಶಕ್ಕೊಬ್ಬ ತಂದೆಯಾಗಿಯೂ ಆ ಕರ್ತವ್ಯ, ಜವಾಬ್ದಾರಿಗಳನ್ನು ಅರಿವು ಮಾಡಬೇಕಾಗುತ್ತದೆ. ಇಲ್ಲಿ ಅವರಿಗೆ ಪ್ರಜೆಗಳೆಂದರೆ ಮಕ್ಕಳಂತೆ. ಹಾಗಾಗಿ ಅವರು ಇಲ್ಲಿ ಶಿಸ್ತು ಹಾಗೂ ನ್ಯಾಯ ನಿಷ್ಠುರತೆಯನ್ನು ಕಾಪಾಡಬೇಕಾಗುತ್ತದೆ. ಆಗ ಭ್ರಷ್ಟಾಚಾರ, ಹಿಂಸೆ, ಅತ್ಯಾಚಾರ ಇವೆಲ್ಲವನ್ನೂ ನಿಯಂತ್ರಿಸುವ ಬಗ್ಗೆಯೂ ಆಲೋಚಿಸಬೇಕಾಗುತ್ತದೆ. ಇಲ್ಲಿ ಸರಕಾರದ ನಾಯಕತ್ವ  ವಹಿಸಿದವರೇ ತಂದೆ(ಯಾ) ಪ್ರಜಾ ಪಾಲಕರ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಆಗ ಎಲ್ಲ ಪ್ರಜೆಗಳ ಒಳಿತಿ ಗೋಸ್ಕರ ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಶಿಕ್ಷಣ ಕಷ್ಟವೆನಿಸಿದರೂ ಶಿಸ್ತನ್ನು ಕಲಿಸುವುದಿಲ್ಲವೇ? ಅಂತೆಯೇ ಕಪ್ಪು ಹಣ ಹೊಂದಿದವರಿಗೆ ಶಿಸ್ತನ್ನು ಪಾಲಿಸದವರಿಗೆ ಇದು ಶಿಕ್ಷೆಯೆನಿಸಲು ಬಹುದು. ಆದರೆ ಮೋದಿಯವರು ಜೀವನವೆಂಬ ಶಿಕ್ಷಣ ವನ್ನೇ ಕೊಡುತ್ತಿದ್ದಾರೆಂಬುದು ನನ್ನ ಅನಿಸಿಕೆ. ನಾವದರ ನಿಲುವುಗಳನ್ನು ತಪ್ಪೇ ಸರಿಯೇ ಎಂದು ತೂಗಿಸುವುದ ಕ್ಕಿಂತಲೂ ಅದರ ಹಿಂದಿನ ಉzಶ ಒಳ್ಳೆಯದೇ ಎಂಬುವುದನ್ನು ಸ್ಪಷ್ಟಪಡಿಸ ಬೇಕಾಗುತ್ತದೆ.

ಇನ್ನು ಮೋದೀಜಿಯವರು ನಮ್ಮ ದೇಶದ ಕಸದ ಸಮಸ್ಯೆಯ ಬಗ್ಗೆಯೂ ತುಂಬಾ ಆಲೋಚಿಸುತ್ತಿದ್ದೀರೆಂದು ನನ್ನದೊಂದು ವಿನಂತಿ. ಶುಚಿತ್ವದ ಕೆಲಸ ಗಳು ಇಂದಿನಿಂದ ನಾಳೆಗೇ ಎಲ್ಲವೂ ಆಗುವುದಿಲ್ಲ ಅಥವಾ ಏಕಾಏಕಿ ಇದ್ದಕ್ಕಿ ದ್ದಂತೆ ಒಂದು ದಿನ ಮಾಡಿದರೂ ಸಾಲದು. ಎಷ್ಟೋ ವರುಷಗಳಿಂದ ನಾವೇ ತುಂಬಿದ ಕಸವಿದು. ಅಷ್ಟು ಬೇಗನೆ ಸ್ವಚ್ಛವಾಗದು. ಅಂದಿನ ಕಾಲ ದಲ್ಲಿ ಕಸವನ್ನು ಒಟ್ಟು ಸೇರಿಸಿ ಬೆಂಕಿ ಹಾಕಿ ಸುಟ್ಟು ಮಣ್ಣು ಮಾಡಿ ಪುನಃ ಅದನ್ನೇ ಕೃಷಿಗೆ ಉಪಯೋಗಿಸುತ್ತಿದ್ದರು. ಆದ ರೀಗ ಯಾರೂ ಹಾಗೆ ಮಾಡುತ್ತಿಲ್ಲ. ಕಸ ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಎಸೆಯು ವುದು ಸರಿಯೇ? ಭೂಮಿ ಇರುವುದು ಬೆಳೆ ಬೆಳೆದು ನಾವು ಉಳಿಯಲೇ ಹೊರತು ಬೆಳೆಯ ಬದಲಿಗೆ ಕಸ ಹಾಕಲೇ? ಹಾಗಾದರೆ ಮುಂದೊಂದು ದಿನ ಕಸ ತಿನ್ನಲಾಗುವುದೇ? ಪ್ಲಾಸ್ಟಿಕ್ ನಿಷೇಧವಿದ್ದರೂ ಅದು ಹೇಗೆ ಶಾಪ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳು ಬರುತ್ತಿವೆ?

ಅಂತೆಯೇ ಮೋದಿಯವರಲ್ಲಿ ಎನ್ನ ದೊಂದು ಮನವಿ. ನಾವು ಬೆಳೆಸುವ ಆಹಾರದ ಬಗ್ಗೆ ಕೃಷಿ ಉತ್ಪನ್ನಗಳ ಬಗ್ಗೆ ಜನರಲ್ಲಿ ಒಳ್ಳೆ ಅಭಿಪ್ರಾಯ ಬರುವಂತಹ ಯೋಜನೆಗಳೂ ಜಾರಿಯಾಗಬೇಕು.

ಹೆಚ್ಚು ಹಣ ಉತ್ಪಾದಿಸುವ ಹಾಗೂ ಗಳಿಸುವ ಭರದಲ್ಲಿ ಹಣದಾಸೆಗೆ ಬಲಿ ಯಾಗಿ ರಾಸಾಯನಿಕಗಳನ್ನು ಸಿಂಪಡಿಸಿ ಆಹಾರ ಉತ್ಪಾದನೆ ಹಾಗೂ ನಕಲಿ ಆಹಾರ ಸಾಮಾಗ್ರಿಗಳ ಬಗ್ಗೆ ಏನಾದರೂ ಒಂದು ಕ್ರಮ ಕೈಗೊಳ್ಳಬಹುದೇ?

ತಿಂದ ಆಹಾರ ನಮ್ಮ ಜೀವಕ್ಕೆ ಶಕ್ತಿ ಯಾಗಿ ಪರಿವರ್ತನೆ ಆಗ ಬೇಕೇ ಹೊರತು ತಿನ್ನುವ ಆಹಾರವೇ ವಿಷವಾಗುವುದೇ?

ಹಣ ಮಾಡುವ ಭರದಲ್ಲಿ ನಮ್ಮನ್ನು ಹಾಗೂ ಇತರರನ್ನೂ ನಾವೇ ವಂಚಿತರಾಗಿಸಿದಂತೆ ಆಗುವುದಿಲ್ಲವೇ ಎಂಬುದು ನನ್ನ ಭಾವನೆ.

ಶಾಂತಾ ಕುಂಟಿನಿ

ಮೊ: 9482425714

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.