ವಿಟ್ಲ: ಕಡಂಬುವಿನಲ್ಲಿ ಮಲಾಮೆ ಮಾಪಿಲಕಲಾ ಅಕಾಡೆಮಿಯಿಂದ ಸೌಹಾರ್ದ ಸಂಗಮ-ರಾಜ್ಯ ಮಟ್ಟದ ದಫ್ ಕಲಾ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1

vittla

ಪುತ್ತೂರು: ಭಾಷಾ ಸೌಹಾರ್ದತೆ ಭವ್ಯ ಭಾರತದ ಹಿರಿಮೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್ ಹೇಳಿದರು. ಕರ್ನಾಟಕ ರಾಜ್ಯ ಮಾಪಿಲ ಕಲಾ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಡಿ 3 ರಂದು ವಿಟ್ಲದ ಕಡಂಬುವಿನ ಮರ್‌ಹೂಂ ಪೆದುಮಲೆ ಉಮರ್ ವೇದಿಕೆಯಲ್ಲಿ ನಡೆದ ಸೌಹಾರ್ದ ಸಮ್ಮೇಳನ, ಸನ್ಮಾನ, ಕವಿಗೋಷ್ಠಿ ಹಾಗೂ ದಫ್ ಕಲಾ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ಭಾಷೆ, ಜಾತಿ, ಪಂಗಡ ಹಾಗೂ ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಮಲಾಮೆ ಮಾಪಿಲ ಕಲಾ ಸಾಹಿತ್ಯ ಅಕಾಡೆಮಿ ಗೌರವಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಮಾತನಾಡಿ ಮಲಾಮೆ ಭಾಷೆಯ ಉಳಿವು ಹಾಗೂ ಅಭಿವೃದ್ದಿಗೋಸ್ಕರ ಶ್ರಮಿಸುವುದರ ಜೊತೆಗೆ ಮಲಾಮೆ ಭಾಷೆಗೆ ಸರಕಾರದ ಮಾನ್ಯತೆ ಗಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕಾಗಿದೆ ಎಂದರು.

ಬಂಟ್ವಾಳ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್. ಮಾವೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಲತೀಫ್ ನೇರಳಕಟ್ಟೆ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಶ್ ಶೆಟ್ಟಿ, ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಎಸ್‌ಡಿಪಿಐ ಹಕಡಂಬು ಅಧ್ಯಕ್ಷ ಮುಹಮ್ಮದ್ ಮಾತನಾಡಿ ಶುಭ ಹಾರೈಸಿದರು.

ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ವಿ.ಎಚ್. ಅಶ್ರಫ್, ಬೆಂಗಳೂರು ಉದ್ಯಮಿ ಬಿ. ಶರೀಫ್, ಎಂ.ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರಶೀದ್ ವಿಟ್ಲ, ಸಾಲೆತ್ತೂರು ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಕೀಂ ಪರ್ತಿಪ್ಪಾಡಿ ಸಾಮಾಜಿಕ ಕಾರ್ಯಕರ್ತ ಕೆ.ಎಂ. ಲತೀಫ್ ಪರ್ತಿಪ್ಪಾಡಿ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಖಲಂದರ್ ಪರ್ತಿಪ್ಪಾಡಿ, ಎಸ್‌ಎಸ್‌ಎಫ್ ಕಡಂಬು ಶಾಖಾಧ್ಯಕ್ಷ ಅಬ್ದುಲ್ ಖಾದರ್ ಗೌಸಿಯಾ, ಕೊಡಂಗಾಯಿ ಶಾಲಾಭಿವೃದ್ದಿ ಸಮಿತಿಯ ಹಮೀದ್ ಕೊಡಂಗಾಯಿ, ಎಸ್‌ವೈಎಸ್ ಕಡಂಬು ಶಾಖಾಧ್ಯಕ್ಷ ಕೆ.ಎಂ. ಅಬ್ದುಲ್ಲ ಹಾಜಿ, ಕಡಂಬು ಜುಮಾ ಮಸೀದಿ ಉಪಾಧ್ಯಕ್ಷ ಬಿ. ಅಬೂಬಕ್ಕರ್, ಉದ್ಯಮಿ ಚಂದ್ರಶೇಖರ ಕಡಂಬು, ಟಿಪ್ಪು ಸುಲ್ತಾನ್ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಸಫ್ವಾನ್ ಕಡಂಬು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಅಬ್ದುಲ್ ಹಮೀದ್ ಗೋಳ್ತಮಜಲು, ಝಕರಿಯಾ ಕಲ್ಲಡ್ಕ, ದಾವೂದ್ ತಾಜ್, ಇಬ್ರಾಹಿಂ ಎ-ಟು ಝಡ್ ಕಡಂಬು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಚೊಕ್ಕಿಪ್ಪೂ ಮಲಾಮೆ ಕವನ ಸಂಕಲನ, ಮಲಾಮೆ ಇದ್ ಞಮ್ಮಲೆ ಬಾಸೆ ಮಾಪಿಲ ಹಾಡುಗಳ ಸಂಕಲನ, ಮಲಿಕ್ ಉಳ್ಳಾಲ ಸಂಗೀತ ನಿರ್ದೇಶನ ಹಾಗೂ ಖಲೀಲ್ ಪುತ್ತೂರು ಸಾಹಿತ್ಯದ ಉಮ್ಮ ಎಂಡೆ ಜೀಮ ವೀಡಿಯೋ ಹಾಡಿನ ಸಿಡಿ ಬಿಡುಗಡೆ ಹಾಗೂ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.

ಸನ್ಮಾನ ಸಮಾರಂಭ: ವಿವಿಧ ಕ್ಷೇತ್ರ ಸಾಧಕರಾದ ಅಕಾಡೆಮಿ ಗೌರವಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಮುಹಮ್ಮದ್ ರಫೀಕ್ ಮಾಸ್ಟರ್ ಮಂಗಳಪದವು, ಮುಹಮ್ಮದ್ ಕುಂಞಿ ಕೊಡಂಗಾಯಿ, ಆದಂ ಕುಂಞಿ ಪರ್ತಿಪ್ಪಾಡಿ, ಹೈದರ್ ವಿಟ್ಲ ಹಾಗೂ ಫಾಝಿಲ್ ಪರ್ತಿಪ್ಪಾಡಿ ಅವರನ್ನು ಸನ್ಮಾನಿಸಲಾಯಿತು.

ಯುವ ಕವಿಗಳಾದ ಹಕೀಂ ಪದಡ್ಕ, ಸಫ್ವಾನ್ ಸವಣೂರು, ಸಫ್ವಾನ್ ಬಡಗನ್ನೂರು, ಸಫ್ವಾನ್ ಷಾ ವಿಟ್ಲ ಮಲಾಮೆ ಕವನ ವಾಚಿಸಿದರು. ಮಲಾಮೆ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಇಬ್ಬ ಕಡಂಬು ಹಾಗೂ ಶರಫ್ ವಿಟ್ಲ ಅವರ ನೇತೃತ್ವದಲ್ಲಿ ದಫ್ ಕಲಾ ಸ್ಫರ್ದೆ ನಡೆಯಿತು.  ಕರ್ನಾಟಕ ರಾಜ್ಯ ಮಾಪಿಲ ಕಲಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ಆರ್ಲಪದವು ಸ್ವಾಗತಿಸಿ, ಕಾರ್ಯದರ್ಶಿ ಹೈದರ್ ಅಲಿ ಐವತ್ತೊಕ್ಲು ವಂದಿಸಿದರು. ಹಸೈನಾರ್ ಕಡಂಬು ಪ್ರಸ್ತಾವನೆಗೈದರು. ರಿಯಾರh ಕಡಂಬು ಕಾರ್ಯಕ್ರಮ ನಿರೂಪಿಸಿದರು.

ಮಲಾಮೆ ಭಾಷೆಯ ಮಾನ್ಯತೆಗಾಗಿ ಹೋರಾಟ

ಮಲಾಮೆಭಾಷೆಗೆ ಇತರ ಭಾಷೆಗಳಂತೆ ಅಧಿಕೃತ ಮಾನ್ಯತೆ ಲಭಿಸಬೇಕೆಂಬುದೇ ನಮ್ಮ ಆಶಯ. ಅದಕ್ಕಾಗಿ ಅಕಾಡೆಮಿ ಸ್ಥಾಪಿಸಿ ಸಂಘಟಿತರಾಗುತ್ತಿzವೆ. ಸರಕಾರದ ಮಾನ್ಯತೆ ಮಲಾಮೆ ಭಾಷೆಗೆ ದೊರೆಯಲು ಹೋರಾಟವನ್ನೂ ಮಾಡುತ್ತೇವೆ. ಮಲಾಮೆಗೆ ಅಧಿಕೃತ ಮಾನ್ಯತೆ ಲಭಿಸುವ ಭರವಸೆ ಇದೆ

-ಇಸ್ಮಾಯಿಲ್ ಪಿ.ಕೆ ಆರ್ಲಪದವು, ಅಧ್ಯಕ್ಷರು ಮಲಾಮೆ ಮಾಪಿಲಕಲಾ ಅಕಾಡೆಮಿ ಕರ್ನಾಟಕ

ಮನರಂಜಿಸಿದ ದಫ್ ಕಲಾ ಸ್ಪರ್ಧೆ

ದಫ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ 10 ತಂಡಗಳು ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ರಿಫಾಯಿಯಾ ದಫ್ ಕಮಿಟಿ ಕೈಕಂಬ, ಬಿ.ಸಿ ರೋಡ್ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಹಯಾತುಲ್ ಇಸ್ಲಾಂ ದಫ್ ಸಂಘ ಪರ್ಲಡ್ಕ ಪುತ್ತೂರು ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಸಿರಾಜುಲ್ ಹುದಾ ದಫ್ ಕಮಿಟಿ ಮಜೂರ್ ಉಡುಪಿ ಪಡೆದುಕೊಂಡಿತು. ದಫ್ ಕಲಾ ಸ್ಪರ್ಧೆ ವೀಕ್ಷಿಸಲು ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.