ರೆಖ್ಯ ಶ್ರೀಗುಡ್ರಾಮಲ್ಲೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

Puttur_Advt_NewsUnder_1
Puttur_Advt_NewsUnder_1

rekhya rekhya1

ಕಡಬ: ರೆಖ್ಯ ಗ್ರಾಮದ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನದಲ್ಲಿ ಶ್ರೀಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ಜ.7ರಿಂದ ಜ.13ರವರೆಗೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ದ.5 ರಂದು ಚಪ್ಪರ ಮುಹೂರ್ತ ನಡೆಯಿತು. ಕೊಕ್ಕಡ ಶ್ರೀ ಬಾಲಕೃಷ್ಣ ಕೆದಿಲಾಯರವರ ನೇತೃತ್ವದಲ್ಲಿ ಪಟ್ರಮೆ ವಿಷ್ಣುಮೂರ್ತಿ ಎಡಪಡಿತ್ತಾಯ ದೇವಸ್ಥಾನದ ಪ್ರಧಾನ ಅರ್ಚಕ ತಿರುಮಲೇಶ್ವರ ಭಟ್ ಹಾಗೂ ಎಂಜಿರ ಮಹಾಬಲೇಶ್ವರ ಭಟ್‌ರವರ ಸಹಭಾಗಿತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಮಂಜುನಾಥ ಗೌಡ ಕೈಕುರೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟ್ರಮಣ ಗೌಡ ಕೈಕುರೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಭಟ್ ಕೆದಂಬಳ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಕಾರ್ಯಾಧ್ಯಕ್ಷ ಬಾಲಕೃಷ್ಣ ಗೌಡ ನೆಲ್ಯಾಡಿ, ವಸಂತ ಗೌಡ ಗುಡ್ರಾದಿ, ಆಡಳಿತ ಮಂಡಳಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ‍್ಯದರ್ಶಿ ಸದಾಶಿವ ಡಿ.ಕೆ, ಕಾರ‍್ಯದರ್ಶಿ ಲಕ್ಷ್ಮಣ ಗೌಡ  ಕನ್ನೆಕಂಡ, ಕೋಶಾಧಿಕಾರಿ ಜನಾರ್ದನ ಗೌಡ ಕೊಳಾರು, ಶೀನಪ್ಪ ಗೌಡ ಪರತ್ತಿಲ್‌ರವರ ನೇತೃತ್ವದಲ್ಲಿ ವಿವಿಧ ಸಮಿತಿಗಳ ಸಂಚಾಲಕರೊಂದಿಗೆ ದೇವಸ್ಥಾನದ ಬ್ರಹ್ಮಕಲಶೋತ್ಸವದೊಂದಿಗೆ ನಡೆಯುವ ಎಲ್ಲಾ ಕಾರ‍್ಯಕ್ರಮಗಳು ನಿರ್ವಿಘ್ನವಾಗಿ ನಡೆಯಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಸಚಿನ್ ಶಾಮಿಯಾನದ (ಅರ್ಬಿ) ಮಾಲಕ ಸುಂದರ ಗೌಡ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕಲ್ಲುಗುಡ್ಡೆ, ಆಡಳಿತ ಸಮಿತಿ ಉಪಾಧ್ಯಕ್ಷರಾದ ಹರಿಶ್ಚಂದ್ರ ಗೌಡ ಕಳೆಂಜಾಲು, ಕೆ.ಎನ್.ಶಶಿ ಆಚಾರಿ ನಾಳಾಲು, ಜತೆಕಾರ‍್ಯದರ್ಶಿ ಆನಂದ ಗೌಡ ಗೊಬ್ಬರ್ತಂಡ, ಆಡಳಿತ ಮಂಡಳಿ ಸದಸ್ಯರಾದ ಶೀನಪ್ಪ ಗೌಡ ಪರತ್ತಿಲ್, ಆನಂದ ಗೌಡ ಮುರತ್ತಮೇಲ್, ಪದ್ಮನಾಭ ಗೌಡ ಬರಮೇಲು, ಸುಂದರ ಗೌಡ ಚಾಕೋಟೆತ್ತಡಿ, ನಾರಾಯಣ ಗೌಡ ಗೊಬ್ಬರ್ತಂಡ, ಬಾಬು ತಾರಿಪಡ್ಪು, ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಕೇಶವ ಗೌಡ ಪಡ್ಪು, ಸದಸ್ಯರಾದ ತುಕರಾಮ ಗುಡ್ರಾದಿ, ಜನಾರ್ದನ ಕೆರೆಜಾಲು, ಭರತ್ ಕೆರೆಜಾಲು, ಸುಬ್ರಹ್ಮಣ್ಯ ಮುಚ್ಚಿರಡ್ಕ, ಉದಯ ಕೋಟಿಮಾರ್, ನಾರಾಯಣ ಕಂಡತಡ್ಕ, ಜಯಚಂದ್ರ ಗೌಡ ದೇವಸ, ವಿಶ್ವನಾಥ ಆರ್ಜಾಲು ಸೇರಿದಂತೆ ಆರ್ಥಿಕ ಸಮಿತಿ, ವೈದಿಕ ಸಮಿತಿ, ಕಲಶ ಸಮಿತಿ ಕಾರ‍್ಯಾಲಯ ಸಮಿತಿ, ಪ್ರಚಾರ ಸಮಿತಿ, ಸಭಾ ಮತ್ತು ಸಾಂಸ್ಕೃತಿಕ ಸಮಿತಿ, ವೇದಿಕೆ ಸಮಿತಿ, ಅತಿಥಿ ಸತ್ಕಾರ ಸಮಿತಿ, ಆಹಾರ ಸಮಿತಿ, ಭೋಜನ ಸಮಿತಿ, ಉಗ್ರಾಣ ಸಮಿತಿ, ಬೆಳಕು ಮತ್ತು ಧ್ವನಿವರ್ಧಕ ಸಮಿತಿ, ಭಜನಾ ಸಮಿತಿ, ಹೊರೆಕಾಣಿಕೆ ಸಮಿತಿ, ಪಾನೀಯ ಸಮಿತಿ, ಸ್ವಚ್ಚತೆ ಸಮಿತಿ, ವಾಹನ ವ್ಯವಸ್ಥಾ ಸಮಿತಿ, ರಕ್ಷಣಾ ಸಮಿತಿ, ಸ್ವಯಂ ಸೇವಾ ಸಮಿತಿ, ಆರೋಗ್ಯ ಸಮಿತಿ, ಚಪ್ಪರ ಸಮಿತಿ, ಆಲಂಕಾರ ಸಮಿತಿ, ಮಹಿಳಾ ಸ್ವಯಂಸೇವಾ ಸಮಿತಿ, ಹಾಗೂ ವಿದ್ಯಾರ್ಥಿ ಸ್ವಯಂಸೇವಕರ ಸಂಘದ ಸಂಚಾಲಕರು, ಸಹಸಂಚಾಲಕರು, ಸದಸ್ಯರು, ಬೈಲುವಾರು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.