ರಾಜ್ಯಮಟ್ಟದ ಅಂತರ್ ಶಾಖಾ ಕರಾಟೆ ಸಮಾರೋಪ

Puttur_Advt_NewsUnder_1
Puttur_Advt_NewsUnder_1

karateಉಪ್ಪಿನಂಗಡಿ: ಸ್ಪರ್ಧೆಯೆನ್ನುವುದು ಸವಾಲಾಗಿದ್ದು, ಸತತ ಪರಿಶ್ರಮದ ಮೂಲಕ ಈ ಸವಾಲನ್ನು ಎದುರಿಸುವ ಕೆಲಸವಾದಾಗ ಮಾತ್ರ ಗೆಲುವು ಸಾಧ್ಯ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ತಿಳಿಸಿದರು.

ಮಲೇಷ್ಯಾದ ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಇದರ ಅಂಗಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಮಂಗಳೂರು ಇದರ ಉಪ್ಪಿನಂಗಡಿ ಶಾಖೆಯ ವತಿಯಿಂದ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಎರಡು ದಿನಗಳ ಕಾಲ ನಡೆದ ೨೭ನೇ ರಾಜ್ಯಮಟ್ಟದ ಅಂತರ್‌ಶಾಖಾ ಕರಾಟೆ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ಸೋಲು-ಗೆಲುವು ಇದ್ದz. ಆದರೆ ಸೋತಾಗ ಮುಂದಿನ ಗೆಲುವಿಗಾಗಿ ಪ್ರಯತ್ನ ಪಡೆಬೇಕೇ ಹೊರತು, ವೈಯಕ್ತಿಕ ದ್ವೇಷ ಕಟ್ಟಿಕೊಂಡು ಪರಸ್ಪರ ಹಗೆತನ ಸಾಧಿಸುವುದು ಸರಿಯಲ್ಲ ಎಂದ ಅವರು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಮುಂದುವರಿದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ರವೀಂದ್ರ ಡಿ. ಮಾತನಾಡಿ, ಕ್ರೀಡೆಯಿಂದ ಆರೋಗ್ಯ ದೊರೆಯುವುದಲ್ಲದೆ, ದೈಹಿಕ ಹಾಗೂ ಮನಸ್ಸಿನ ವಿಕಸನ ಸಾಧ್ಯವಾಗುತ್ತದೆ. ಕರಾಟೆಯೆಂಬುದು ಆತ್ಮವಿಶ್ವಾಸವನ್ನು ರೂಪಿಸುವ ಕಲೆಯಾಗಿದ್ದು, ತಂತ್ರಗಾರಿಕೆಯಿದ್ದಾಗ ಮಾತ್ರ ಇದರಲ್ಲಿ ಗೆಲುವು ಸಾಧ್ಯ ಎಂದರು.

ವೇದಿಕೆಯಲ್ಲಿ ನ್ಯಾಯವಾದಿ ಮಹೇಶ್ ಕಜೆ, ಬಾಲಕೃಷ್ಣ ಆಳ್ವ, ದಿನೇಶ್ ಆಚಾರ್ಯ,  ಕರಾಟೆ ಸ್ಪರ್ಧಾ ಸಂಘಟನಾ ಸಮಿತಿಯ ಸಂಯೋಜಕ ಕೆ. ಉಮೇಶ್ ಆಚಾರ್ಯ ಸವಣಾಲು, ಉಪಮುಖ್ಯ ಶಿಕ್ಷಕ ಶಿಹಾನ್ ಎಂ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಕರಾಟೆ ಮುಖ್ಯ ಶಿಕ್ಷಕ ಕ್ಯೋಶಿ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮನೋಹರ್ ರೈ ಬಾರ್ಯ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.