ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯದೇವಸ್ಥಾನದ ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರಾಗಿ ಕಶಿ ವಿಶ್ವನಾಥ ಭಟ್

Puttur_Advt_NewsUnder_1
Puttur_Advt_NewsUnder_1

kolpe

ಪುತ್ತೂರು: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಒಂಬತ್ತು ಸದಸ್ಯರನ್ನು ಆಯ್ಕೆ ಮಾಡಿ ಜಿಲ್ಲಾ ಧಾರ್ಮಿಕ ಪರಿಷತ್ ಘೋಷಣೆ ಮಾಡಿದೆ.

ಮುಂದಿನ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಶಿ ವಿಶ್ವನಾಥ ಭಟ್ ಉರಿಮಜಲು, ಸದಸ್ಯರಾಗಿ ಪ್ರಕಾಶ್ ಕೆ.ಎಸ್ ಬಡಜ, ಕೆ.ಸುಬ್ರಾಯ ಭಟ್ ಕೊಂಕೋಡಿ, ಸುರೇಶ್ ಎಸ್ ಪೂಜಾರಿ, ರವೀಂದ್ರ ಎ., ಶ್ಯಾಮಲ ಮಿತ್ತೂರು, ರಮಣಿ, ಸತ್ಯಶಂಕರ ಭಟ್, ಅರ್ಚಕರಾಗಿ ಗೋವಿಂದ ಜ್ಯೋಯಿಸರವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಶಿ ವಿಶ್ವನಾಥ ಭಟ್‌ರವರು ಕಂಬಳಬೆಟ್ಟು ಸಮಾಜ ಮಂದಿರದ ಸ್ಥಾಪಕರಾಗಿದ್ದು, ಕಂಬಳಬೆಟ್ಟು ಭಜನಾ ಮಂದಿರ, ಅಳಕೆಮಜಲು ಶಾರದಾಂಬ ಭಜನಾಮಂದಿರ, ಮಿತ್ತೂರು ಬೀಜವಳಿಕೆ ಶ್ರೀ ರಾಮ ಭಜನಾಮಂದಿರಗಳ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಇಡ್ಕಿದು ಸೇವಾಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಇಡ್ಕಿದು ಗ್ರಾಪಂನ ಮಾಜಿ ಸದಸ್ಯರಾಗಿದ್ದು, ಮಾದಕಟ್ಟೆ ಶ್ರೀ ವಿಷ್ಣಮೂರ್ತಿ ದೇವಸ್ಥಾನದ ಗೌರವಾಧ್ಯಕ್ಷರಾಗಿದ್ದಾರೆ. ವಿಠಲ ವಿದ್ಯಾವರ್ಧಕ ಸಂಘದಲ್ಲಿ ೧೦ವರ್ಷ ಕಾರ್ಯದರ್ಶಿಯಾಗಿ, ೧೫ ವರ್ಷ ಉಪಾಧ್ಯಕ್ಷರಾಗಿ ಪ್ರಸ್ತುತ ಕಾರ್ಯದರ್ಶಿಯಾಗಿದ್ದಾರೆ. ಮಿತ್ತೂರು ಆದಿಪರಾಶಕ್ತಿ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರಾಗಿದ್ದಾರೆ.ಪ್ರಕಾಶ್ ಕೆ.ಎಸ್ ಬಡಜರವರು ಮಿತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದಾರೆ. ವಿಟ್ಲ  ಗ್ರಾಮೀಣ ಸಹಕಾರಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾಗಿದ್ದು, ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಕೆ. ಸುಬ್ರಾಯ ಭಟ್ ಕೊಂಕೋಡಿ ಸೂರ್ಯ ಸರಕಾರಿ ಪ್ರೌಡ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದು, ಇಡ್ಕಿದು ಸೇವಾಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗು ಸದಸ್ಯರಾಗಿದ್ದಾರೆ. ಸುರೇಶ್ ಎಸ್ ಪೂಜಾರಿಯವರು ಮಾಣಿವಲಯ ಬಿಲ್ಲವ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಸತ್ಯನಾರಾಯಣ ಭಟ್‌ರವರು ಮಿತ್ತೂರು ಪುರೋಹಿತ ಕುಟುಂಬಕ್ಕೆ ಸೇರಿದವರಾಗಿದ್ದು, ಪುರೋಹಿತರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ರಮಣಿಯವರು ಇಡ್ಕಿದು ಗ್ರಾಪಂ ಮಾಜಿ ಸದಸ್ಯೆಯಾಗಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.