Breaking News

ಕಾಣಿಯೂರು ಕಣ್ವಶ್ರೀ ಸಾಂಸ್ಕೃತಿಕ ಕಲಾಕೇಂದ್ರದ ವಾರ್ಷಿಕೋತ್ಸವ ’ಕಣ್ವಶ್ರೀ ಸಂಭ್ರಮ’

Puttur_Advt_NewsUnder_1
Puttur_Advt_NewsUnder_1

kaniyooru

ದೃಶ್ಯ ಮಾಧ್ಯಮಗಳ ಹಾವಳಿಯಿಂದ ಸಾಂಪ್ರದಾಯಿಕ ಕಲೆ ಜೀವಂತಿಕೆ ಕಳೆದುಕೊಳ್ಳುತ್ತಿದೆ-ಕಾಣಿಯೂರು ಶ್ರೀ

ಕಾಣಿಯೂರು: ಕಲಾಕಾರನ ಬದುಕಿಗೆ ಜೀವ ತುಂಬುವ ಕೆಲಸಗಳು ಮಾಧ್ಯಮಗಳಿಂದ ಆಗಬೇಕಾಗಿದೆ. ಆದರೆ ಇವತ್ತು ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಸಾಂಪ್ರದಾಯಿಕ ಕಲೆಗಳು ಜೀವಂತಿಕೆಯನ್ನು ಕಳೆದುಕೊಳ್ಳುತ್ತಾ ಇದೆ. ಪ್ರತಿಯೊಬ್ಬ ಕಲಾಕಾರನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ದ ೪ರಂದು ಕಾಣಿಯೂರು ಶ್ರೀ ಮಠದಲ್ಲಿ ನಡೆದ, ಕಣ್ವಶ್ರೀ ಸಾಂಸ್ಕೃತಿಕ ಕಲಾಕೇಂದ್ರ ಕಾಣಿಯೂರು ಇದರ ವಾರ್ಷಿಕೋತ್ಸವ ’ಕಣ್ವಶ್ರೀ ಸಂಭ್ರಮ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆಧುನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ಇಂದಿನ ಪೀಳಿಗೆಗೆ ನಮ್ಮ ಪ್ರಾಚೀನ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಗೆ ಹೆಚ್ಚಿನ ಆಸಕ್ತಿ ಬರುವಂತೆ ಮಾಡುವ ಜವಾಬ್ದಾರಿ ಹೆತ್ತವರ ಮೇಲಿದೆ. ಆ ಮೂಲಕ ಮಕ್ಕಳ ಸುಪ್ತ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯರವರು, ಸಜ್ಜನರ ಕೂಟದಿಂದ ಉತ್ತಮವಾದ ವಿಚಾರಗಳು ಪ್ರಕಟಗೊಂಡಾಗ ಸಮಾಜಕ್ಕೆ ಒಳಿತಾಗುತ್ತದೆ. ನಮ್ಮ ಧರ್ಮ ಮತ್ತು ಸಂಸ್ಕೃತಿ ಉಳಿಸುವ ಕೆಲಸವಾಗುತ್ತದೆ. ತಮ್ಮ ಅಮೂಲ್ಯವಾದ ಸಮಯವನ್ನು ಇಂತಹ ಉತ್ತಮವಾದ ಕಾರ್ಯಕ್ಕೆ ತೊಡಗಿಸಿಕೊಳ್ಳುವುದರ ಮುಖಾಂತರ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ, ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು, ಬೆಳ್ಳಾರೆ ಜೆ.ಸಿ.ಐ ಪೂರ್ವ ವಲಯಾಧಿಕಾರಿ ಪ್ರದೀಪ್ ಕುಮಾರ್ ರೈ ಪನ್ನೆರವರು ಶುಭಹಾರೈಸಿದರು. ಕೋಶಾಧಿಕಾರಿ ರಕ್ಷಿತಾ ಬೆದ್ರಂಗಳರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಕಣ್ವಶ್ರೀ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಗೊಳಿಸಲು ಸಹಕರಿಸಿದ ಸಚಿನ್ ಪೆರ್ಲಂಪಾಡಿ, ರಚನಾ ನಾವೂರು, ಸುಭಾಷ್ ಪಂಜ, ಶಿವಪ್ರಸಾದ್ ಅಬ್ಬಡ, ಹರೀಶ್ ಬೆಳ್ಳಾರೆ, ಐತ್ತಪ್ಪ ಪಾಟಾಜೆಯವರನ್ನು ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಕಲಾ ಕೇಂದ್ರದ ಸಂಚಾಲಕ ಸದಾನಂದ ಆಚಾರ್ಯ ಅಬೀರರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸೀತಮ್ಮ ಕಾಣಿಯೂರು ಇವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕಲಾ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.

ಕಲಾ ಕೇಂದ್ರದ ವಿದ್ಯಾರ್ಥಿಗಳಾದ ಗಗನ, ಪ್ರಜ್ಞಾ, ಹೃತ್ಪೂರ್ವ, ಸಿಂಚನಾ, ಹಿತೈಷಿರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.  ಕಲಾ ಕೇಂದ್ರದ ಸಂಚಾಲಕ ಸದಾನಂದ ಆಚಾರ್ಯ ಅಬೀರರವರು ಪ್ರಸ್ತಾವನೆಗೈದರು. ಗೌರವ ಸಲಹೆಗಾರ, ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಸ್ವಾಗತಿಸಿ, ಶ್ರೀ .ಕ್ಷೇ.ಧ.ಗ್ರಾ.ಯೋಜನೆಯ ಕಾಣಿಯೂರು ಸೇವಾಪ್ರತಿನಿಧಿ ಪ್ರವೀಣ್‌ಚಂದ್ರ ರೈ ಕುಮೇರು ವಂದಿಸಿದರು. ಕುಂಬ್ರ ಕ್ಲಸ್ಟರ್ ಸಿಆರ್‌ಪಿ ಸುನಿಲ್‌ರವರು ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಆಕರ್ಷಣೆಯಾಗಿ ಕುಣಿತ ಭಜನೆ, ಬಾಲ ಕಲಾವಿದರಿಂದ ಸಾಂಸ್ಕೃತಿಕ ಸಂಜೆ, ಜಾನಪದ ಲೋಕ, ಭಾರತದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳು, ಯಕ್ಷರೂಪಕ, ತರಬೇತಿ ಕೇಂದ್ರದ ನೃತ್ಯ ಗುರುಗಳಿಂದ ವಿವಿಧ ನೃತ್ಯ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.