ಕೋಡಿಂಬಾಳ: ನೀರಿಗೆ ಬಿದ್ದು ಬೆದ್ರಾಜೆ ನಿವಾಸಿ ಬಾಬು ಮೃತ್ಯು

Puttur_Advt_NewsUnder_1
Puttur_Advt_NewsUnder_1

ಕಡಬ: ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ.4ರಂದು ನಡೆದಿದೆ. ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಕರಿಯ ಎಂಬವರ ಪುತ್ರ ಬಾಬು(55ವ.)ರವರು ಮೃತಪಟ್ಟವರು. ಇವರು ಡಿ.4ರಂದು ಮನೆಯಿಂದ ಹೋದವರು ರಾತ್ರಿಯಾಗುವವರೆಗೆ ಬಾರದೆ ಇದ್ದಾಗ ಮನೆಯವರು ಹುಡುಕಾಡಿದ್ದರು, ಬಳಿಕ 102 ನೆಕ್ಕಿಲಾಡಿ ಗ್ರಾಮದ ನಾಗಮಾರ್ ಎಂಬಲ್ಲಿರುವ ಹಮ್ಮಬ್ಬ ಎಂಬವರ ತೋಟದಲ್ಲಿರುವ ಕಾಲು ಸೇತುವೆಯ ಕೆಳಗಡೆ ಶವವಾಗಿ ಪತ್ತೆಯಾಗಿದ್ದರು. ಯಾವುದೋ ಕೆಲಸದ ನಿಮಿತ್ತ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತ್ನಿ ಜಾನಕಿ, ಮಕ್ಕಳಾದ ಅಶೋಕ, ಆಶಿಕರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.