ಸಂಪ್ಯದಲ್ಲಿ ಸ್ಮಾಸ್ ಟ್ರೋಫಿ-2016

Puttur_Advt_NewsUnder_1
Puttur_Advt_NewsUnder_1

sampya2 sampya1ಪುತ್ತೂರು: ಹಾಯ್ ಫ್ರೆಂಡ್ಸ್  ಸಂಪ್ಯ ಇದರ ಆಶ್ರಯದಲ್ಲಿ 7 ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸ್ಮಾಸ್ ಟ್ರೋಫಿ 2016 ಡಿ.4 ರಂದು  ಸಂಪ್ಯದ ಕಮ್ಮಾಡಿ ಮೈದಾನದಲ್ಲಿ ನಡೆಯಿತು. ಸಂಪ್ಯ ಹಾಯ್ ಫ್ರೆಂಡ್ಸ್‌ನ ಅಧ್ಯಕ್ಷ ನಿಸಾರ್ ಅಹಮ್ಮದ್ ಅಧಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಜಬ್ಬಾರ್ ಬೌಲಿಂಗ್ ಹಾಕುವುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಫಾರೂಕ್ ಸಂಪ್ಯ ಉಪಸ್ಥಿತರಿದರು. 24 ತಂಡಗಳು ಭಾಗವಹಿಸಿದ್ದು, ಹಾಯ್ ಫ್ರೆಂಡ್ಸ್ ಸಂಪ್ಯ ಪ್ರಥಮ, ಫ್ರೆಂಡ್ಸ್ ಪುತ್ತೂರು ದ್ವಿತೀಯ ಹಾಗೂ ಫ್ರೆಂಡ್ಸ್ ಪುತ್ತೂರು ತೃತೀಯ ಬಹುಮಾನ ಪಡೆಯಿತು. ಸಂಜೆಯ ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅಬ್ದುಲ್ ಖಾದರ್ ವಹಿಸಿದ್ದರು. ವೇದಿಕೆಯಲ್ಲಿ ಲಕ್ಷ್ಮಣ್ ಬೈಲಾಡಿ, ಅಣ್ಣಿ ಪೂಜಾರಿ, ಪಿ.ಯಂ.ಬಶೀರ್, ಉಮೇಶ್ ಸಂಪ್ಯ ಹಾಗೂ ಯುವ ಉದ್ಯಮಿ ಹನೀಫ್ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು. ಅಲ್ ರೌಂಡರ್ ಆಗಿ ಯೂನೂಸ್ ಸಂಪ್ಯ, ಉತ್ತಮ ಎಸೆತಗಾರನಾಗಿ ರ್ಯಾನ್ ಹಾರೀಸ್ ಮೊಟ್ಟೆತಡ್ಕ, ಉತ್ತಮ ಬ್ಯಾಟ್ಸ್‌ಮೆನ್ ಆಗಿ ಶಾಫಿ ಸಂಪ್ಯ ಹೊರಹೊಮ್ಮಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.