ಚಾರ್ವಾಕ-ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಶ್ರೀ ದೇವರಿಗೆ ತೂಗುಯ್ಯಾಲೆ ಸಮರ್ಪಣೆ

Puttur_Advt_NewsUnder_1
Puttur_Advt_NewsUnder_1

 

charvaka-kumblady1charvaka-kumblady2ಪುತ್ತೂರು: ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದ.5 ರಂದು ಷಷ್ಠಿ ಉತ್ಸವ ಜರಗಿತು.

ಬೆಳಿಗ್ಗೆ ಗಣಹೋಮ, ಉಪಾ ಪೂಜೆ, ಕೊಪ್ಪರಿಗೆ ಏರಿಸುವ ಕಾರ‍್ಯಕ್ರಮ  ನಡೆದ ಬಳಿಕ, ಶ್ರೀ ದೇವರಿಗೆ ತೂಗುಯ್ಯಾಲೆ ಸಮರ್ಪಣೆ ನಡೆಯಿತು, ಮಧ್ಯಾಹ್ನ ಅನ್ನಸಂತರ್ಪಣೆ  ಜರಗಿತು. ರಾತ್ರಿ ಭಜನಾ ಕಾರ‍್ಯಕ್ರಮ, ರಂಗಪೂಜೆ, ಮಹಾಪೂಜೆ ನಡೆಯಿತು.

ಭಕ್ತಿಯಿಂದ ದೇವರ ಆರಾಧನೆ-ಸಿ.ಪಿ.: ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಿ.ಪಿ,ಜಯರಾಮ ಗೌಡ ಅರುವಗುತ್ತುರವರು ಮಾತನಾಡಿ ದೇವಸ್ಥಾನಕ್ಕೆ ಇಂದು ತೂಗುಯ್ಯಾಲೆಯನ್ನು ಸಮರ್ಪಣೆ ಮಾಡಲಾಗಿದ್ದು, ಇದು ದೇವಸ್ಥಾನಕ್ಕೆ ವಿಶೇಷವಾದ ದಿನವಾಗಿದೆ, ಷಷ್ಟಿಯ ಸಂಭ್ರಮದಲ್ಲಿ ಇರುವ ನಾವು ಕುಕ್ಕೇನಾಥ ಬಾಲಸುಬ್ರಹ್ಮಣ್ಯನ ಆರಾಧನೆಯಿಂದ ಪುನೀತರಾಗಿದ್ದೇವೆ ಎಂದು ಹೇಳಿ ಮುಂದಿನ ತಿಂಗಳು ನಡೆಯುವ ಜಾತ್ರೋತ್ಸವಕ್ಕೆ ಎಲ್ಲರ ಸಹಕಾರ ಕೋರಿದರು.

ದೇವಾಲಯದ ಆಡಳಿತಾಧಿಕಾರಿ ಪುಷ್ಪರಾಜ್, ದೇವಸ್ಥಾನದ ಆಡಳಿತ ಪಂಗಡದ ಸಂಚಾಲಕ ಮೋನಪ್ಪ ಗೌಡ ಉಳವ, ಕಾರ‍್ಯದರ್ಶಿ ಸಚಿನ್ ದೈಪಿಲ, ಕೋಶಾಧಿಕಾರಿ ಉಮೇಶ್ ದೈಪಿಲ, ಅರ್ಚಕ ಗಣಪತಿ ಭಟ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಯು.ಪಿ. ರಾಮಕೃಷ್ಣ, ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಗೌಡ ಕರಂದ್ಲಾಜೆ, ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲ, ಚಂದ್ರಕಲಾ ಸಿ.ಪಿ.ಜಯರಾಮ್, ಪ್ರವೀಣ್ ಕುಂಟ್ಯಾನ, ಕುಶಾಲಪ್ಪ ಗೌಡ ದೈಪಿಲ, ಮಾಧವ ಗೌಡ ಕಂಪ, ನೇಮಣ್ಣ ಗೌಡ ಕಂಪ, ವೆಂಕಪ್ಪ ಗೌಡ ಕಂಪ, ದೇವಪ್ಪ ಗೌಡ ಕಂಪ ಸಹಿತ ಸಾವಿರಾರು ಮಂದಿ ಭಾಗವಹಿಸಿದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.