ಬಾಬು ಸಪಲ್ಯ ಕಾರೆಕಾಡುರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1

babu-sapalyaಪುತ್ತೂರು:ನ.23ರಂದು ನಿಧನರಾದ ಕಾರೆಕಾಡು ನಿವಾಸಿ ಬಾಬು ಸಪಲ್ಯರವರ ಉತ್ತರಕ್ರಿಯೆ ಮತ್ತು ಶ್ರದ್ಧಾಂಜಲಿ ಅರ್ಪಣೆ ಕಾರ‍್ಯಕ್ರಮ ದ.5ರಂದು ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ಜರಗಿತು. ಪುತ್ತೂರು ನಗರಸಭೆ ಸದಸ್ಯ ರಾಜೇಶ್ ಬನ್ನೂರು ನುಡಿ ನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆಗಮಿಸಿದ ಎಲ್ಲ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ನಗರ ಬಿಜೆಪಿ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಸದಸ್ಯರಾದ ಸೋಮಪ್ಪ ಸಪಲ್ಯ, ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ ಕುಮಾರ್ ಜೈನ್, ಸತೀಶ್, ಆರ್‌ಟಿಒ ಅಬೂಬಕ್ಕರ್, ಶ್ರೀಧರ ಪಟ್ಲ, ಮಾಧವ ಪಟ್ಲ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂಜೀವ ನಾಯಕ ಕಲ್ಲೇಗ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮೃತರ ಪತ್ನಿ ವೀಣಾ, ಪುತ್ರರಾದ ಶಶಿಧರ, ಸಂದೇಶ, ಪುತ್ರಿಯರಾದ ಸುಖಲತ, ಶಾರದಾ, ಸಂಧ್ಯಾ ಮತ್ತು ಶ್ವೇತಾ ಹಾಗೂ ಅಳಿಯಂದಿರು, ಕುಟುಂಬಸ್ಥರು ಬಂಧುಮಿತ್ರರನ್ನು ಬರಮಾಡಿಕೊಂಡು ಸತ್ಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.