Breaking News

ಹಿರೇಬಂಡಾಡಿ: ಕೊರಗಜ್ಜ ದೈವದ ನೇಮೋತ್ಸವ, ಮುಟ್ಟಾಲೆ, ಪ್ರಭಾವಳಿ ಅರ್ಪಣೆ

Puttur_Advt_NewsUnder_1
Puttur_Advt_NewsUnder_1

hirebandady1ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಸೆಟ್ಲಪಾಲ್ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜನ ನೇಮೋತ್ಸವ, ಸ್ವಾಮಿ ಕೊರಗಜ್ಜನಿಗೆ ಮುಟ್ಟಾಲೆ ಮತ್ತು ಪ್ರಭಾವಳಿ ಅರ್ಪಣೆ ಕಾರ್ಯಕ್ರಮ ದ.3 ರಂದು ನಡೆಯಿತು.

ಬೆಳಿಗ್ಗೆ ಗಣಹೋಮ, ಸ್ಥಳಶುದ್ಧಿ ಕಾರ‍್ಯಕ್ರಮ ನಡೆಯಿತು. ಬಳಿಕ ದಿನೇಶ್ ಪೂಜಾರಿ ಇವರಿಂದ ಭಕ್ತಿರೂಪದ ಸೇವೆಯಾಗಿ ಕೊರಗಜ್ಜ ದೈವಕ್ಕೆ ಪ್ರಭಾವಳಿ ಸಮರ್ಪಣೆ ಮತ್ತು ಕಿರಣ್ ಕುಮಾರ್ ಸೆಟ್ಲಪಾಲ್ ಇವರಿಂದ ಭಕ್ತಿ ರೂಪದ ಸೇವೆಯಾಗಿ ಮುಟ್ಟಾಲೆ ಸಮರ್ಪಣೆ ಕಾರ‍್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಕೊರಗಜ್ಜ ದೈವದ ಪಾತ್ರಿ ದಿನೇಶ್ ಪೂಜಾರಿ, ಸ್ಥಳೀಯ ಪ್ರಮುಖರಾದ ರಾಮಣ್ಣಪೂಜಾರಿ, ಕಿರಣ್ ಕುಮಾರ್, ರಾಜೀವ ಪೂಜಾರಿ ಸೆಟ್ಲಪಾಲ್, ಹರೀಶ್ ಗುಂಡ್ಯ, ಮೋನಪ್ಪ ಪೂಜಾರಿ, ರಮಾನಂದ ಪೆರಾಬೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.