ಪುಣಚ: ಮರಾಟಿ ಸಂಘದ ಕ್ರೀಡೋತ್ಸವ

Puttur_Advt_NewsUnder_1
Puttur_Advt_NewsUnder_1

punacha-1ಪುಣಚ: ಅಡ್ಯನಡ್ಕ ಶ್ರೀ ಮಹಮ್ಮಾಯಿ ಮರಾಟಿ ಸಂಘ ಇದರ ಆಶ್ರಯದಲ್ಲಿ ವಾರ್ಷಿಕ ಕ್ರೀಡೋತ್ಸವ ಇತ್ತೀಚೆಗೆ ಕುದ್ದುಪದವಿನಲ್ಲಿ ಜರಗಿತು. ಕಾರ್ಯಕ್ರಮವನ್ನು ಗುರಿಕಾರರಾದ ಕೆಳಗಿನ ಪದವು ಕೇಶವ ನಾಯ್ಕರವರು ದೀಪಬೆಳಗಿಸಿ ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗೋವಿಂದ ನಾಯ್ಕ ನೆಗಳಗುಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯರಾದ ಜಯಶ್ರೀ ಕೋಡಂದೂರು, ತಾ.ಪಂ. ಸದಸ್ಯರಾದ ಕವಿತಾ ಎಸ್. ನಾಯ್ಕ, ಪದ್ಮನಾಭ ನಾಯ್ಕ ಬೀಮಾರು, ಗ್ರಾ.ಪಂ. ಸದಸ್ಯರಾದ ಮಾಲತಿ ಬೆಟ್ಟುಗದ್ದೆ, ಶಶಿಕಲಾ ಖಂಡಿಗೆ, ಹರೀಶ ನಾಯ್ಕ ನೀರ್ಕಜೆ, ವಿಠಲ ಕೋಪ್ರೆ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಕುಂಞ ನಾಯ್ಕ ಯಂ. ಮರಕ್ಕಿಣಿ ಇವರನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ನಾಯ್ಕ ಸ್ವಾಗತಿಸಿದರು. ಉಪಾಧ್ಯಕ್ಷರಾದ ಐತ್ತಪ್ಪ ನಾಯ್ಕ ವಂದಿಸಿದರು. ಕೋಶಾಧಿಕಾರಿ ಸುರೇಶ್ ಕೋಡಂದೂರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು  ಸಹಕರಿಸಿದರು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.