ಬೆಳಂದೂರು; ಮಕ್ಕಳ ಗ್ರಾಮ ಸಭೆ-ಶಿಕ್ಷಕರ ಕೊರತೆ, ಆವರಣಗೋಡೆ, ಶೌಚಾಲಯದ್ದೇ ಬೇಡಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

belandoor-makkala-grama-sabhe_2ಸವಣೂರು: ಶಿಕ್ಷಕರ ಕೊರತೆ ನೀಗಿಸುವಂತೆ, ಶಾಲೆಗೆ ಆವರಣಗೋಡೆ, ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಜನಪ್ರತಿನಿಧಿ ಅಧಿಕಾರಿಗಳ ಮುಂದೆ ಮಕ್ಕಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟ ವಿಚಾರವು ಪಳ್ಳತ್ತಾರಿನಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಾರ್ದನಿಸಿತು. ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಬೆಳಂದೂರು, ಕಾಯಿಮಣ, ಕುದ್ಮಾರು ಗ್ರಾಮಗಳನ್ನೊಳಗೊಂಡ ಮಕ್ಕಳ ಗ್ರಾಮ ಸಭೆಯು ಪಳ್ಳತ್ತಾರು ಶಾಲೆಯಲ್ಲಿ  ಗ್ರಾ.ಪಂ.ಅಧ್ಯಕ್ಷೆ ಉಮೇಶ್ವರಿ ಅಗಳಿ ಅಧ್ಯಕ್ಷತೆಯಲ್ಲಿ ನಡೆಯಿತು.

ನಾರ್ಯಬೈಲು ಶಾಲೆ ಜಾಗ ಅತಿಕ್ರಮಣವಾಗುತ್ತಿದೆ

ನಾರ್ಯಬೈಲು ಶಾಲಾ ಮೈದಾನವನ್ನು ಪಕ್ಕದ ನಿವಾಸಿಗಳು ಅತಿಕ್ರಮಣ ಮಾಡುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ಶಾಲಾ ಮೈದಾನಕ್ಕೆ ಆವರಣ ಗೋಡೆ ನಿರ್ಮಿಸುವಂತೆ ನಾರ್ಯಬೈಲು ವಿದ್ಯಾರ್ಥಿಗಳು ಮನವಿಮಾಡಿಕೊಂಡರು.

ಸಸಿ ನೆಟ್ಟಿಲ್ಲ

ಬೆಳಂದೂರು ಶಾಲೆಯ ವಿದ್ಯಾರ್ಥಿ ಮಾತನಾಡಿ, ಶಾಲೆಗೆ ಜಲನಯನ ಇಲಾಖೆಯಿಂದ ದೊರೆತ ಗಿಡಗಳನ್ನು ನೆಡದೇ ಮೂಲೆಯಲ್ಲಿಡಲಾಗಿದೆ. ಅದನ್ನು ಆದಷ್ಟು ಬೇಗ ನೆಟ್ಟು, ಆವರಣ ಗೋಡೆ ನಿರ್ಮಿಸುವಂತೆ ಕೇಳಿಕೊಂಡನು.

209 ಮಕ್ಕಳಿರುವ ಶಾಲೆ ಕುದ್ಮಾರಿಗೆ ಹೆಚ್ಚುವರಿ ಕೊಠಡಿಯ ಅಗತ್ಯವಿದೆ. ದನಕರುಗಳು ಶಾಲಾ ಆವರಣದೊಳಗಡೆ ಬಂದು ತರಕಾರಿಗಳನ್ನು ಹಾಳುಗೆಡವುತ್ತಿದೆ. ಕಸದ ಗುಂಡಿಯಿಂದ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಕುದ್ಮಾರು ಶಾಲಾ ವಿದ್ಯಾರ್ಥಿಗಳು ಹೇಳಿದರು.

ಪಳ್ಳತ್ತಾರು ಶಾಲೆಗೆ ಶೌಚಾಲಯ ನಿರ್ಮಾಣ ಮಾಡಿಕೊಡಿ. ಶಾಲೆಗೆ ಗೇಟ್ ನಿರ್ಮಿಸಿ, ಆಟದ ಮೈದಾನ ವಿಸ್ತರಿಸಿಕೊಡುವಂತೆ ಹಾಗೂ ಪಳ್ಳತ್ತಾರು ಶಾಲೆಗೆ ಖಾಯಂ ಶಿಕ್ಷಕರನ್ನು  ನೇಮಕ ಮಾಡುವಂತೆ ಮಕ್ಕಳು ಕೇಳಿಕೊಂಡರು.

ಮಕ್ಕಳ ಪ್ರಶ್ನೆಗಳಿಗೆ ಗ್ರಾ.ಪಂ. ಪಿಡಿಓ ನವೀನ್ ಎ., ಬೆಳ್ಳಾರೆ ಠಾಣಾ ಎಎಸ್‌ಐ ಭಾಸ್ಕರ ಎ., ಸಿಆರ್‌ಪಿ ವೆಂಕಟೇಶ್ ಅನಂತಾಡಿ, ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಉತ್ತರಿಸಿದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ., ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಕೆರೆನಾರು, ಕಿರಿಯ ಆರೋಗ್ಯ ಸಹಾಯಕಿ ನೀಲಮ್ಮ, ಪಳ್ಳತ್ತಾರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯುವರಾಜ ಬನಾರಿ, ಪಂಚಾಯತ್ ಕಾರ್ಯದರ್ಶಿ ಜಯಪ್ರಕಾಶ್ ಅಲೆಕ್ಕಾಡಿ ಉಪಸ್ಥಿತರಿದ್ದರು.

ಗ್ರಾ.ಪಂ. ಸದಸ್ಯ ಮೇದಪ್ಪ ಕೆಡೆಂಜಿ, ಗೌರಿ ಸಂಜೀವ, ತೇಜಾಕ್ಷಿ ಕೊಡಂಗೆ, ನಝೀರ್ ದೇವಸ್ಯ, ವಿಠಲ ಗೌಡ ಅಗಳಿ, ಪಾರ್ವತಿ ದಾಮೋಧರ, ಶೋಭ ಬಾಲಕಷ್ಣ, ಬೆಳ್ಳಾರೆ ಠಾಣಾ ಹೆಡ್‌ಕಾನ್‌ಸ್ಟೇಬಲ್ ವೆಂಕಪ್ಪ, ಆರೋಗ್ಯ ಸಹಾಯಕಿ ಚಂದ್ರಾವತಿ ಅಭಿಕರ, ಬೆಳಂದೂರು ಶಾಲಾ ಮುಖ್ಯಶಿಕ್ಷಕಿ ಜಾನಕಿ ಕೆ.ಆರ್., ಶಿಕ್ಷಕರಾದ ದೇವೆಂದ್ರಪ್ಪ ದೊಡ್ಡಗೌಡ್ರ, ಕುಶಾಲಪ್ಪ ಟಿ., ಜ್ಯೋತಿ ದೇವರಮನೆ, ಹೇಮಲತಾ, ಮಮತಾ ಕೆ., ಮಮತಾ ಬಿ. ಮಮತಾ ಟಿ. ಸಭೆಯಲ್ಲಿದ್ದರು.

ಜಯಪ್ರಕಾಶ್ ಅಲೆಕ್ಕಾಡಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.ಸವಣೂರು ಕ್ಲಸ್ಟರ್ ಸಿಅರ್‌ಪಿ ಸ ವೆಂಕಟೇಶ್ ಅನಂತಾಡಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.