’ಬಾಬರಿ ಮಸೀದಿ ಪುನರ್ ನಿರ್ಮಿಸಿ’: ಪುತ್ತೂರಿನಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

protest-today-6_2

ಪುತ್ತೂರು: ಸುಮಾರು 463 ವರ್ಷಗಳ ಇತಿಹಾಸ ಹೊಂದಿದ್ದ ಬಾಬರಿ ಮಸೀದಿಯನ್ನು 24 ವರ್ಷಗಳ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಹೊಂದಾಣಿಕೆಯ ಮೂಲಕ ಹೊಡೆದುರುಳಿಸಿದ್ದು ಆ ಮೂಲಕ ದೇಶದ ಸಂವಿಧಾನವನ್ನೇ ಬುಡಮೇಲು ಮಾಡಿದೆ ಎಂದು ಎಸ್.ಡಿ.ಪಿ.ಐ ರಾಜ್ಯ  ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಡಿ.6ರಂದು ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ’ಬಾಬರಿ ಮಸೀದಿ ಪುನರ್ ನಿರ್ಮಿಸಿ,’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ದೇಶದ ಐತಿಹಾಸಿಕ ಸ್ಮಾರಕವಾಗಿದ್ದ ಬಾಬರಿ ಮಸೀದಿಯನ್ನು ಅತ್ಯಂತ ವ್ಯವಸ್ಥಿತವಾಗಿ ಕೆಡವಲಾಗಿದೆ, ದೇಶದಲ್ಲಿರುವ ಶೇ.2ರಷ್ಟು ಮಾತ್ರವಿರುವ ಸಂವಿಧಾನ ವಿರೋಧಿಗಳು ಜಾತ್ಯಾತೀತತೆಗೆ ಮಾರಕವಾಗಿದ್ದಾರೆ ಎಂದು ಅವರು ಹೇಳಿದರು. ಜಾತ್ಯಾತೀತರು ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ನೈಜ ಜಾತ್ಯಾತೀತತೆಯನ್ನು ಹೊಂದಿದ್ದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಹೋರಾಟ ಮಾಡಲಿ ಎಂದು ಅವರು ಸವಾಲು ಹಾಕಿದರು. ಎಸ್.ಡಿ.ಪಿ.ಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದಿಕ್ ಕೆ.ಎ ಮಾತನಾಡಿ ಧ್ವಂಸಗೊಂಡಿರುವ ಬಾಬರಿ ಮಸೀದಿಯ ಪುನರ್ ನಿರ್ಮಾಣ ಆಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಮುಂದಕ್ಕೆ ದೇಶದ ಯಾವುದೇ ದೇವಸ್ಥಾನವಾಗಲೀ, ಚರ್ಚ್, ಮಸೀದಿಗಳಾಗಲೀ ಆಕ್ರಮಣಕ್ಕೆ ಒಳಗಾಗಲು ನಮ್ಮ ಪಕ್ಷ ಅವಕಾಶ ಕೊಡುವುದಿಲ್ಲ ಎಂದ ಅವರು ತಲಾಖ್, ಏಕರೂಪ ಕಾನೂನು, ನೋಟು ನಿಷೇಧದ ಮೊದಲು ದೇಶದ ಜನರ ಮಧ್ಯೆ ಕೋಮು ಸೌಹಾರ್ಧತೆ ಮೂಡಿಸುವ ಕಾರ್ಯವನ್ನು ಸರಕಾರ ಮಾಡಲಿ ಎಂದವರು ಆಗ್ರಹಿಸಿದರು.

ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ಎಂ ಕೂಸಪ್ಪ ಮಾತನಾಡಿ ದೇಶದಲ್ಲಿ ಬಾಬರಿ ಮಸೀದಿ ಧ್ವಂಸದ ಮೂಲಕ ಅಂಬೇಡ್ಕರ್ ಸಂವಿಧಾನಕ್ಕೆ ಕೊಡಲಿಯೇಟು ನೀಡಲಾಗಿದೆ, ದೇಶದ ನೈಜ ಜಾತ್ಯಾತೀತ ಪರಂಪರೆ ಉಳಿಸಲು ಬಾಬರಿ ಮಸೀದಿ ಪುನರ್ ನಿರ್ಮಾಣ ಆಗಲೇಬೇಕೆಂದು ಹೇಳಿದರು.

ಪಿ.ಎಫ್.ಐ ಪುತ್ತೂರು ತಾಲೂಕು ಅಧ್ಯಕ್ಷ ಸಂಶುದ್ದೀನ್ ಮಾತನಾಡಿ ಜಾತ್ಯಾತೀತತೆಯ ಮೇಲೆ ನಂಬಿಕೆಯಿಟ್ಟವರಿಗೆ ಬಾಬರಿ ಮಸೀದಿ ಧ್ವಂಸ ಎಂದಿಗೂ ಮರೆಯಲಾಗದು, ಬಾಬರಿ ಮಸೀದಿ ವಿಚಾರವನ್ನು ಮುಂದಿನ ಪೀಳಿಗೆಗೂ ನಾವು ತಿಳಿಸಿಕೊಡಲಿzವೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ತಾಲೂಕು ಅಧ್ಯಕ್ಷೆ ಯಶೋಧಾ ಆಲಂತಾಯ, ಎಸ್.ಡಿ.ಪಿ.ಐ ನಗರಾಧ್ಯಕ್ಷ ಅಶ್ರಫ್ ಬಾವು, ಪ್ರಮುಖರಾದ ಪಿ.ಬಿ.ಕೆ ಮುಹಮ್ಮದ್, ಅಝೀಝ್ ಕಬಕ, ಉಮ್ಮರ್ ಕೂರ್ನಡ್ಕ, ಎಸ್.ಎಂ ಮುಹಮ್ಮದ್ ಕುಂಞಿ ಕುಂಬ್ರ, ರಫೀಕ್ ನಂಜೆ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು. ಎಸ್.ಡಿ.ಟಿ.ಯು ತಾಲೂಕು ಅಧ್ಯಕ್ಷ ಬಾತಿಷಾ ಬಡಕ್ಕೋಡಿ ಸ್ವಾಗತಿಸಿದರು. ಹಮೀದ್ ಮೆಜೆಸ್ಟಿಕ್ ವಂದಿಸಿದರು. ಪ್ರತಿಭಟನೆಯ ಬಳಿಕ ಸಹಾಯಕ ಕಮಿಷನರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಎಸ್.ಡಿ.ಪಿ.ಐಯಿಂದ ನಿರಂತರ ಹೋರಾಟ

ಬಾಬರಿ ಮಸೀದಿ ಧ್ವಂಸ ಪ್ರಕರಣವು ತಕ್ಷಣಕ್ಕೆ ಉಂಟಾದ ಘಟನೆಯಲ್ಲ. ಬದಲಾಗಿ ಅದೊಂದು ಪೂರ್ವಯೋಜಿತ ಕೃತ್ಯವಾಗಿತ್ತು. ರಾಜಕೀಯ ನಾಯಕರು, ಪೊಲೀಸ್ ಇಲಾಖೆ, ಅಧಿಕಾರಿ ವರ್ಗ ಕೈಕಟ್ಟಿ ಕುಳಿತುಕೊಂಡಿದ್ದರ ಪರಿಣಾಮವಾಗಿ ದೇಶದ ಐತಿಹಾಸಿಕ ಸ್ಮಾರಕವೊಂದು ನೆರಕ್ಕುರುಳುವಂತಾಯಿತು. ಸಂವಿಧಾನದ ಮೌಲ್ಯ ಉಳಿಯಬೇಕಾದರೆ ಅನ್ಯಾಯವಾಗಿ ಕೆಡವಲ್ಪಟ್ಟ ಬಾಬರಿ ಮಸೀದಿ ಪುನರ್ ನಿರ್ಮಾಣವಾಗಲೇಬೇಕು. ಅದಕ್ಕಾಗಿ ಎಸ್.ಡಿ.ಪಿ.ಐ ನಿರಂತರ ಹೋರಾಟ ನಡೆಸಲಿದೆ.

-ರಿಯಾಝ್ ಫರಂಗಿಪೇಟೆ, ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ   

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.