ನೋಟು ರದ್ದು  ಪರಿಣಾಮ:  ಲೇಖನ, ಅಭಿಪ್ರಾಯಗಳು-ಸಂವಾದಕ್ಕೆ ಆಹ್ವಾನ ನೋಟು ರದ್ಧತಿಯ ಬಾಧಕ  ಮತ್ತು ಸಾಧಕ

 

unnamed1969ರಲ್ಲಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು 14 ಖಾಸಗಿ ಬ್ಯಾಂಕ್‌ಗಳನ್ನು ಒಂದೇ ಆದೇಶದಲ್ಲಿ ರಾಷ್ಟ್ರೀಕರಣಗೊಳಿಸಿದರು. ಭಾರತ ಸರ್ಕಾರದ್ದು ಹಣದ ಮುದ್ರಣ ಮತ್ತು ಚಲಾವಣೆಯನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಮಾಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅದರ ಸಾವರ್ತಿ ಬ್ಯಾಂಕ್‌ಗಳು (ಉದಾ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು) ಮೂಲಕ ಈ ಹಣವನ್ನು  ಬೇಡಿಕೆಗನುಗುಣವಾಗಿ ಮುದ್ರಣ ಮತ್ತು ಚಲಾವಣೆಯನ್ನು ಮಾಡುತ್ತಿತ್ತು. ಖಾಸಗಿ ಬ್ಯಾಂಕ್‌ಗಳು ತಮ್ಮಲ್ಲಿಯೇ ವಿನಿಮಯ ಮಾಡಿಕೊಂಡು ಹೆಚ್ಚಿನ ಹಣವು ಖಾಸಗಿಯರ ಪಾರಾಗುತ್ತಿತ್ತು.

ಆದರೆ ಖಾಸಗಿ ವಲಯಗಳು ತಮ್ಮ ಬ್ಯಾಂಕ್‌ಗಳಿಂದ ಷೇರುಗಳನ್ನು ಪಡೆದು ಸಮಾನಾಂತರ ಆರ್ಥಿಕ ವಲಯಗಳನ್ನು ಸ್ಥಾಪಿಸಿದರು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಈ ಯೋಜನೆಯ ಆರ್ಥಿಕ ಅಭಿವೃದ್ಧಿಗೆ ಸಹಕಾರವಾಗಲಿಲ್ಲ. ಮಾತ್ರವಲ್ಲ ಹೆಚ್ಚಿನ ಹಣವು ಉಳ್ಳವರ ಪಾಲಾಗುತ್ತಿತ್ತು.

500 ಹಾಗೂ 1000 ರೂ. ಬೆಲೆ ಬಾಳುವ ನೋಟುಗಳ ರದ್ಧತಿಯಿಂದ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತೊಂದರೆ ಉಂಟಾಗಿದೆ ಎಂದು ಒಪ್ಪಿ ಕೊಳ್ಳೋಣ. ಬಡ ಜನರು, ಕೂಲಿ ಕಾರ್ಮಿಕರು, ಗ್ರಾಮೀಣ ಪ್ರದೇಶದವರು, ಯುವಕರು, ಹಿರಿಯ ನಾಗರಿಕರು, ಮಹಿಳೆಯರು, ರೈತರು, ಕೆಳ ಮತ್ತು ಮಧ್ಯಮ ವರ್ಗದವರು ಕೂಡಾ ಬ್ಯಾಂಕುಗಳ, ಎಟಿಎಂಗಳ ಮುಂದೆ ದಿನಗಟ್ಟಲೆ ಕ್ಯೂ ನಿಂತು ಹಣಕ್ಕಾಗಿ ಪರದಾಡುವುದನ್ನು ನೋಡಿದ್ದೇವೆ. ಅಗತ್ಯ ವಸ್ತುಗಳ ಖರೀದಿಗೆ ಹಣ ಇಲ್ಲದೆ ಪರದಾಡುವ ಜನರ ಸಂಕಷ್ಟಗಳ ಬಗ್ಗೆಯೂ ಸಾಕಷ್ಟು ಕೇಳಿದ್ದೇವೆ. ಚಲಾವಣೆ ಯಲ್ಲಿರುವ ಒಟ್ಟು ನೋಟುಗಳಲ್ಲಿ500 ಮತ್ತು 1000ರೂ. ಬೆಲೆ ಬಾಳುವ ನೋಟುಗಳು ಶೇ.85ರಷ್ಟು ಇರುವಾಗ ಇಂತಹ ತೊಂದರೆಗಳು ಉಂಟಾಗು ವುದು ಅನಿವಾರ್ಯ. ಸಮಸ್ಯೆಗಳನ್ನು ಮೆಟ್ಟಿ ನಿಂತು ಪುಟಿದೇಳುವ ಅನಿವಾರ್ಯ ಸಮಸ್ಯೆ ಗಳನ್ನು ಮೆಟ್ಟಿ ನಿಂತು ಪುಟಿದೇಳುವ ಸಾಮರ್ಥ್ಯವನ್ನು ನಮ್ಮ ದೇಶದ ಶ್ರೀಸಾಮಾನ್ಯರು ಹಲವು ಬಾರಿ ಪ್ರದರ್ಶಿಸಿದ್ದಾರೆ. 1975ರ ತುರ್ತು ಪರಿಸ್ಥಿತಿ ಅಪರೇಶನ್ ಬ್ಲೂಸ್ಟಾರ್ ಭಯೋತ್ಪಾದನೆಯಿಂದ ತತ್ತರಿಸಿ ಹೋದ ಪಂಜಾಬ್, ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಪೋಟಗಳು 8 ವರ್ಷಗಳ ಹಿಂದೆ ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿ ಮತ್ತು ಹಲವು ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ದೇಶದ ಶ್ರೀಸಾಮಾನ್ಯರು ಹಲವು ಬಾರಿ ಪ್ರದರ್ಶಿಸಿದ್ದಾರೆ.

ರಮ್ಯ ಕೆ., 10ನೇ ತರಗತಿ, ಕೊಂಬೆಟ್ಟು ಹೈಸ್ಕೂಲ್ ಹಾಕೋಟೆಕಾನ ಮನೆ, ಕೊಣಾಜೆ ಗ್ರಾಮ, ಕಡ್ಯ ಅಂಚೆ, ಪುತ್ತೂರು ತಾಲೂಕು, ಮೊ: 9482034763

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.