Breaking News

ಹರಿಯುವ ನೀರನ್ನು ನಿಲ್ಲಿಸಿದ ಯುವಕರು ; ಸಮಾಜಕ್ಕೆ ಮಾದರಿಯಾದ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

shramadana-1

ಉಪ್ಪಿನಂಗಡಿ: ಜಿಲ್ಲಾಧಿಕಾರಿಗಳ ನಿಷೇಧ ಆದೇಶದ ಹೊರತಾಗಿಯೂ ಅಂತರ್ಜಲಕ್ಕೆ ಕನ್ನ ಹಾಕುವ ಕೆಲಸಗಳು ಅಲ್ಲಲ್ಲಿ ನಡೆಯುತ್ತಿದ್ದು, ಕೊಳವೆ ಬಾವಿಗಳನ್ನು ಕೊರೆಯುವುದು ಎಗ್ಗಿಲ್ಲದೆ ಸಾಗಿದೆ. ನೀರಿಂಗಿಸುವ ಪ್ರಯತ್ನ ಮಾಡದೇ ಭೂಮಿಯ ಅಂತರ್ಜಲವನ್ನೇ ದೋಚುವ ಕೆಲಸ ಮಾಡುತ್ತಿರುವ ಹಲವರ ಮಧ್ಯೆ ಉಪ್ಪಿನಂಗಡಿಯ ಯುವಕರ ತಂಡವೊಂದು ಹರಿಯುವ ನೀರನ್ನು ನಿಲ್ಲಿಸುವ ಪ್ರಯತ್ನಕ್ಕೆ ಕೈ ಹಾಕುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಅಂತರ್ಜಲ ವೃದ್ದಿಗಾಗಿಯೇ ನಿರ್ಮಿಸಲಾದ ಉಪ್ಪಿನಂಗಡಿ ಗ್ರಾಮದ ಅರ್ತಿಲ ನಾಲಯದ ಗುಂಡಿ ಎಂಬಲ್ಲಿನ ಕಿಂಡಿ ಅಣೆಕಟ್ಟು ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಕಿಂಡಿ ಅಣೆಕಟ್ಟಿನ ಹಲಗೆಯೂ ಕಣ್ಮರೆಯಾಗಿತ್ತು. ಒಟ್ಟೂ ಬಳಕೆಯಾಗದೇ ಉಳಿದಿದ್ದ ಈ ಕಿಂಡಿ ಅಣೆಕಟ್ಟಿಗೆ ಉಪ್ಪಿನಂಗಡಿಯ ಯುವಕರ ತಂಡ ಭಾನುವಾರ ಶ್ರಮದಾನದ ಮೂಲಕ ಅಡಿಕೆ ಮರದ ಪಟ್ಟಿಯನ್ನು ಅಳವಡಿಸಿ, ಸಿಮೆಂಟ್ ಗೋಣಿಗಳಲ್ಲಿ ಮರಳು ತುಂಬಿಸಿ ಕಿಂಡಿ ಅಣೆಕಟ್ಟಿನ ಕಿಂಡಿಯನ್ನು ಮುಚ್ಚುವ ಮೂಲಕ ಸರಾಗವಾಗಿ ಹರಿಯುತ್ತಿದ್ದ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡಿ, ಆ ನೀರು ಭೂಮಿಯಲ್ಲಿ ಇಂಗುವಂತೆ ಮಾಡಿದ್ದಾರೆ.

ಈ ಕಾರ್ಯದ ನೇತೃತ್ವವನ್ನು ತಾಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ  ಸುನಿಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು, ಪಂಚಾಯತ್ ಸಿಬ್ಬಂದಿ ಮಹಾಲಿಂಗ ಅವರ  ನೇತೃತ್ವವನ್ನು ವಹಿಸಿದ್ದರೆ, ಉಪ್ಪಿನಂಗಡಿ ಕಟ್ಟಡ ಕಾರ್ಮಿಕ ಸಂಘದ ಸದಸ್ಯರುಗಳು, ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರುಗಳು ಈ ಶ್ರಮದಾನದಲ್ಲಿ ಕೈ ಜೋಡಿಸಿ ಅಂತರ್ಜಲ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.

“ನೀರು ಬಯಸುವ ನಮ್ಮ ಹಕ್ಕಿನ ಜೊತೆಗೆ ಭೂಮಿಗೆ ನೀರಿಂಗಿಸುವ ನಮ್ಮ ಕರ್ತವ್ಯವನ್ನೂ ಪಾಲಿಸೋಣ ಎಂಬ ಅರಿವು ಮೂಡಿಸುವ ಸಲುವಾಗಿ ನಮ್ಮ ರಜಾ ದಿನವನ್ನು ಸಮಾಜಕ್ಕಾಗಿ ಸಮರ್ಪಿಸುವ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಮಾಡಿದ್ದೇವೆ. ಎಲ್ಲರೂ ತಮ್ಮ ತಮ್ಮ ಊರುಗಳಲ್ಲಿನ ಹರಿಯುವ ತೋಡು, ತೊರೆಗಳ ನೀರನ್ನು ತಡೆಗಟ್ಟಿ ಹರಿಯುವ ನೀರು ನಿಂತು ಹರಿಯುವಂತೆ ಮಾಡಲು ಮುಂದಾಗಬೇಕೆಂಬುದೇ ನಮ್ಮ ಮನವಿ.”

– ಸುನಿಲ್ ಕುಮಾರ್ ದಡ್ಡು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.