ಸಂಪ್ಯ ಠಾಣಾ ಎಎಸ್‌ಐ ವಿಠಲ ಶೆಟ್ಟಿ ಗೆ ಮುಂಭಡ್ತಿ- ಸಂಚಾರಿ ಠಾಣಾ ಎಸ್.ಐ ಆಗಿ ವರ್ಗ; ಸಂಚಾರಿ ಠಾಣಾ ಎಸ್.ಐ ನಾಗರಾಜ್ ವಿಟ್ಲಕ್ಕೆ: ವಿಟ್ಲ ಎಸ್‌ಐ ಪ್ರಕಾಶ್ ದೇವಾಡಿಗ ಕಡಬಕ್ಕೆ: ಉಪ್ಪಿನಂಗಡಿಗೆ ರಕ್ಷಿತ್

Puttur_Advt_NewsUnder_1
Puttur_Advt_NewsUnder_1

sampya

ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ಎಎಸ್‌ಐ ಆಗಿದ್ದ ವಿಠಲ ಶೆಟ್ಟಿಯವರು ಎಸ್‌ಐ ಆಗಿ ಭಡ್ತಿ ಹೊಂದಿ ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಸಂಚಾರಿ ಠಾಣಾ ಎಸ್‌ಐ ನಾಗರಾಜ್‌ರವರು ವಿಟ್ಲ ಠಾಣೆಗೆ ವರ್ಗಾವಣೆಗೊಂಡಿದ್ದು, ವಿಟ್ಲ ಠಾಣಾ ಎಸ್‌ಐ ಪ್ರಕಾಶ್ ದೇವಾಡಿಗರವರು ಕಡಬ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

 ವಿಠಲ ಶೆಟ್ಟಿಯವರು 1982ರಲ್ಲಿ ಕಾನ್ಸ್‌ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಗೊಂಡು ಮಂಗಳೂರಿನ ಉರ್ವಠಾಣೆಯಲ್ಲಿ ಕರ್ತವ್ಯ ಆರಂಭಿಸಿದ್ದರು. ಬಳಿಕ ಪುತ್ತೂರು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದರು. 1992ರಲ್ಲಿ ಬಂಟ್ವಾಳ ಠಾಣೆಯಿಂದ ಹೆಡ್‌ಕಾನ್ಸ್‌ಟೇಬಲ್ ಆಗಿ ಭಡ್ತಿ ಹೊಂದಿ ಕೊಣಾಜೆ ಠಾಣೆಗೆ ವರ್ಗಾವಣೆಗೊಂಡು ಬಳಿಕ ಸುಳ್ಯ ಠಾಣೆಯಲ್ಲಿ ಎಎಸ್‌ಐ ಆಗಿ ಭಡ್ತಿ ಹೊಂದಿ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡು ಪುತ್ತೂರು ಗ್ರಾಮಾಂತರ ಹಾಗು ಈಶ್ವರಮಂಗಲ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಇದೀಗ ಎಸ್‌ಐ ಆಗಿ ಭಡ್ತಿ ಹೊಂದಿ ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಸುಳ್ಯ ತಾಲೂಕಿನ ಪೆರುವಾಜೆ ನಿವಾಸಿಯಾಗಿದ್ದಾರೆ.

ಪುತ್ತೂರು ಸಂಚಾರಿ ಠಾಣಾ ಎಸ್‌ಐ ಹೆಚ್.ಇ ನಾಗರಾಜ್‌ರವರನ್ನು ವಿಟ್ಲ ಠಾಣೆಗೆ ವರ್ಗಾಯಿಸಲಾಗಿದ್ದು ಇವರು 2007ರಲ್ಲಿ  ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಠಾಣೆಯಲ್ಲಿ ಎಸ್‌ಐ ಆಗಿ ಕರ್ತವ್ಯ ಆರಂಭಿಸಿದ್ದರು ಬಳಿಕ ಬಸವನಹಳ್ಳಿ, ಕಡಬ, ಬಂಟ್ವಾಳ ಗ್ರಾಮಾಂತರ ಠಾಣೆಯಿಂದ ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದು ಇದೀಗ ಇಲ್ಲಿಂದ ವಿಟ್ಲ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಇವರು ಮೂಲತಃ ಹಾಸನ ಬಳಿಯ ಸಕಲೇಶ್‌ಪುರ ನಿವಾಸಿಯಾಗಿದ್ದಾರೆ.

ಕಡಬ ಠಾಣಾ ಎಸ್‌ಐ ಉಮೇಶ್ ಉಪ್ಪಳಿಕೆಯವರು ವೃತ್ತ ನಿರೀಕ್ಷಕರಾಗಿ ಭಡ್ತಿ ಹೊಂದಿ ವರ್ಗಾವಣೆಗೊಂಡಿದ್ದ ಬಳಿಕ ತೆರವಾಗಿದ್ದ ಆ ಸ್ಥಾನಕ್ಕೆ ಇದೀಗ ವಿಟ್ಲ ಠಾಣಾ ಎಸ್‌ಐ ಪ್ರಕಾಶ್ ದೇವಾಡಿಗರವರನ್ನು ವರ್ಗಾವಣೆಗೊಳಿಸಲಾಗಿದೆ. ಇದೇ ಸಮಯದಲ್ಲಿ ಉಪ್ಪಿನಂಗಡಿ ಠಾಣಾ ಎಸ್‌ಐ ಆಗಿದ್ದ ತಿಮ್ಮಪ್ಪ ನಾಯ್ಕರವರು ವೃತ್ತ ನಿರೀಕ್ಷಕರಾಗಿ ಭಡ್ತಿಹೊಂದಿ ವರ್ಗಾವಣೆಗೊಂಡಿದ್ದು, ಅವರ ತೆರವಾದ ಸ್ಥಾನ ಖಾಲಿಯಾಗಿಯೇ ಉಳಿದಿತ್ತು ಇದೀಗ ಆ ಸ್ಥಾನಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ರಕ್ಷಿತ್‌ರವರನ್ನು ವರ್ಗಾವಣೆಗೊಳಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ವಿಟ್ಲದಲ್ಲಿ ಎಸ್.ಐ ಆಗಿದ್ದ ರಕ್ಷಿತ್‌ರವರು ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂದು ನಂತರ ಪುತ್ತೂರಿನಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.