ಮಾಡನ್ನೂರು: ನೂರುಲ್ ಹುದಾ ಇಸ್ಲಾಮಿಕ್‌ಅಕಾಡೆಮಿ ಕಟ್ಟಡಕ್ಕೆ  ಶಿಲಾನ್ಯಾಸ, ಮಿಲಾದ್ ಕಾನ್ಫರೆನ್ಸ್

Puttur_Advt_NewsUnder_1
Puttur_Advt_NewsUnder_1

madnuru madannuru1 madannuru2

* ಮುಸ್ಲಿಮರು ಸಮಾಜ ಘಾತುಕ ಸಂಘಟನೆಗಳಿಂದ ದೂರವಿರಿ-ಪಾಣಕ್ಕಾಡ್ ತಂಙಳ್

*ಭಯೋತ್ಪಾದನೆ ನಿರ್ಮೂಲನೆ ಮುಸ್ಲಿಮರ ಗುರಿ- ಝೈನುಲ್ ಆಬಿದೀನ್ ತಂಙಳ್

* ದೇಶ ಪ್ರೇಮ ನಮ್ಮ ಹಕ್ಕು-ದ.ಕ ಖಾಝಿ ಜ ಸಮಾನ ನಾಗರಿಕತೆ ಸಾಧ್ಯವಾಗದು-ಎಂ.ಎಸ್

ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ನೂತನ ಕಟ್ಟಡದ ಶಿಲಾನ್ಯಾಸ ಹಾಗೂ ಮಿಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ದ.5ರಂದು ಮಾಡನ್ನೂರು ಶಹೀದಿಯ್ಯ ನಗರದಲ್ಲಿ ನಡೆಯಿತು.

ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ರಕ್ಷಾಧಿಕಾರಿ ಪಾಣಕ್ಕಾಡ್ ಅಸ್ಸಯ್ಯದ್ ಅಬ್ಬಾಸಲೀ ಶಿಹಾಬ್ ತಂಙಳ್‌ರವರು ನೆರವೇರಿಸಿ, ಪವಿತ್ರ ಕುರ್‌ಆನ್ ನಮ್ಮ ಜೀವನವಾಗಿದ್ದು, ಇಸ್ಲಾಂ ಧರ್ಮವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರ ಮೂಲಕ ನಮ್ಮ ಜೀವನದಲ್ಲಿ ಶಾಂತಿ, ಸಮಾನತೆಯಿಂದ ಬಾಳಲು ಸಾಧ್ಯವಿದೆ ಎಂದು ಹೇಳಿದರು. ನೂರುಲ್ ಹುದಾ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗಲಿದೆ ಎಂದ ಅವರು ಪ್ರವಾದಿಯವರ ಜನ್ಮದಿನದ ಮಾಸವಾದ ಈ ತಿಂಗಳಲ್ಲಿ ಇಂತಹ ಕಾರ್ಯಕ್ರಮವನ್ನು ಅಳವಡಿಸಿಕೊಂಡಿದ್ದು ಶ್ಲಾಘನೀಯ ವಾಗಿದ್ದು, ಪ್ರವಾದಿಯವರ ಜೀವನ ಚರ್ಯೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಮುಸ್ಲಿಮರು ಸಮಾಜಘಾತುಕ ಸಂಘಟನೆಗಳಿಂದ ದೂರವಿದ್ದು, ಸಮಾಜದಲ್ಲಿ ಶಾಂತಿ ನೆಲೆನಿಲ್ಲುವಂತೆ ಮಾಡಬೇಕು. ಜಾತ್ಯಾತೀತ ಭಾರತದಲ್ಲಿ ನಾವೆಲ್ಲರೂ ಒಂದೇ ಭಾವನೆಯಿಂದ ಶಾಂತಿ, ಸಹಬಾಳ್ವೆಯಿಂದ ಜೀವಿಸಿದಾಗ ಧರ್ಮದ ಮಹತ್ವ ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದರು. ದೇಶದಾದ್ಯಂತ ದಾರುಲ್ ಹುದಾ ಸಂಸ್ಥೆಯ ೩೨ ಸಹ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಮಾಡನ್ನೂರಿನ ನೂರುಲ್ ಹುದಾ ಸಂಸ್ಥೆ ಇದರ ಅಂಗ ಸಂಸ್ಥೆಯಾಗಿದ್ದು, ಇದು ಕರ್ನಾಟಕದಲ್ಲಿ ೨ನೇ ಅತೀ ದೊಡ್ಡ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಇಸ್ಲಾಂನ ಮಹತ್ವವನ್ನು ತಿಳಿಸಲು ಮುಂದೆ ಬರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀರhರವರು ವಹಿಸಿದ್ದರು.

ಪುತ್ತೂರು ಮುದರ್ರಿಸ್ ಅಸ್ಸಯ್ಯದ್ ಅಹಮ್ಮದ್ ಪೂಕೋಯ ತಂಙಳ್‌ರವರು ದುವಾಶೀರ್ವಚನ ನೀಡಿದರು.

ಬ್ರೌಶರ್ ಬಿಡುಗಡೆ ಮಾಡಿದ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈರವರು ಮಾತನಾಡಿ, ಭಯೋತ್ಪಾದನೆ ಭಾರತಕ್ಕೆ ಶಾಪವಾಗಿದ್ದು,  ಭಯೋತ್ಪಾದನೆಯ ನಿರ್ಮೂಲನೆ ಮುಸ್ಲಿಮರ ಗುರಿಯಾಗಿದ್ದು, ಇದಕ್ಕಾಗಿ ಜ್ಞಾನದ ಅವಶ್ಯಕತೆ ಇದೆ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಭಯೋತ್ಪಾದನೆಯಂತಹ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದರು. ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯು ಇಲ್ಲಿನ ವಿದ್ಯಾರ್ಥಿಗಳಿಗೆ ಇದನ್ನೇ ಕಲಿಸುತ್ತಿದ್ದು, ವಿದ್ಯಾರ್ಥಿಗಳು ವಿದ್ಯಾವಂತರಾದಾಗ ಇಡೀ ಸಮಾಜವೇ ವಿದ್ಯಾವಂತ ಸಮಾಜವಾಗಿ ಮೂಡಿಬರಲಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹಮ್ಮದ್ ಮೌಲವಿ ಅಲ್‌ಅರhಹರಿರವರು ಮಾತನಾಡಿ, ಭಯೋತ್ಪಾದನೆಯನ್ನು ಸೃಷ್ಟಿ ಮಾಡುವುದು ಇಸ್ಲಾಮಿನ ಗುರಿಯಲ್ಲ, ಅದನ್ನು ನಿರ್ಮೂಲನೆ ಮಾಡುವುದೇ ಇಸ್ಲಾಮಿನ ಗುರಿಯಾಗಿದೆ ಎಂದು ಹೇಳಿದರು. ದೇಶಪ್ರೇಮ ನಮ್ಮ ಹಕ್ಕಾಗಿದ್ದು, ನಾವು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಈ ದೇಶದ ಸತ್ಪ್ರಜೆಗಳಾಗಿ ಮುಂದೆ ಬರುವುದು ಅವಶ್ಯಕವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್‌ರವರು ಮಾತನಾಡಿ, ಮುಸ್ಲಿಂ ಸಮುದಾಯದ ಮೇಲೆ ಬಹಳಷ್ಟು ಅಪಸ್ವರ, ಅಪನಂಬಿಕೆ, ಆರೋಪ ಅಲ್ಲದೆ ಭಯೋತ್ಪಾದನೆ, ಉಗ್ರವಾದ ಎಂದು ಅಪಪ್ರಚಾರಗಳು ಕೇಳಿಬರುತ್ತಿದ್ದು, ಇದನ್ನು ತೊಡೆದು ಹಾಕಲು ನಾವು ಜಾತ್ಯಾತೀತವಾಗಿ ದೇಶಪ್ರೇಮಿಗಳಾಗಿ ಈ ದೇಶದಲ್ಲಿ ಜೀವಿಸುವಂತಾಗಬೇಕು ಎಂದು ಹೇಳಿದರು. ಸಮಾನ ನಾಗರಿಕತೆ, ತಲಾಖ್‌ನ ಬಗ್ಗೆ ಚರ್ಚೆಯಾಗುತ್ತಿದ್ದು, ಭವ್ಯ ಭಾರತದ ಸಂವಿಧಾನದ ವಿಷಯದಲ್ಲಿ ಈ ದೇಶದಲ್ಲಿ ಯಾವತ್ತೂ ಸಮಾನ ನಾಗರಿಕತೆ ಜಾರಿಗೆ ಬರಲು ಸಾಧ್ಯವಾಗುವುದಿಲ್ಲ. ಆದರೂ ಇದರ ಪ್ರಯತ್ನ ನಡೆಯುತ್ತಿದ್ದು, ಇಡೀ ಸಮುದಾಯ ಒಗ್ಗಟ್ಟಾಗಿ ನಮ್ಮ ಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಇಡೀ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಆಗ ಮಾತ್ರ ನಮ್ಮ ಬಲ ತಿಳಿಯುವಂತಾಗಲಿದೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಭಾಷಣ ಮಾಡಿದ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಾಂಶುಪಾಲ ಮತ್ತು ನಿರ್ದೇಶಕರಾದ ವಕೀಲ ಹಾಜಿ ಹನೀಫ್ ಹುದವಿ ದೇಲಂಪಾಡಿರವರು ಮಾತನಾಡಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ನಡೆದು ಬಂದ ಹಾದಿಯ ಬಗ್ಗೆ ಹಾಗೂ ಇಲ್ಲಿನ ಅಭಿವೃದ್ಧಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿ, ಈ ಕಾಲೇಜಿಗೆ ಇನ್ನಷ್ಟು ಸಹಕಾರ ನೀಡಲು ಮುಂದೆ ಬರಬೇಕು ಎಂದರು.

ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿಯವರು ಲೋಗೋ ಅನಾವರಣಗೊಳಿಸಿದರು.

ಬ್ರೌಷರನ್ನು ಝೈನುಲ್ ಆಬಿದೀನ್ ತಂಙಳ್‌ರವರು  ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್‌ರವರವರಿಗೆ ನೀಡಿ ಬಿಡುಗಡೆ ಮಾಡಿದರು.

ವಿದ್ಯಾರ್ಥಿಗಳಿಗಾಗಿ ನಡೆಸಲಾದ ಸುಮಾರು ೩೦ ಸ್ಪರ್ಧೆಗಳಲ್ಲಿ ವಿವಿಧ ಕಲಾತ್ಮಕ ಸ್ಪರ್ಧೆ ನಡೆದಿದ್ದು ಇದರಲ್ಲಿ ವಿಜೇತ ವಿದ್ಯಾರ್ಥೀಗಳಿಗೆ ಸಂಪ್ಯ ಠಾಣಾ ಎಸ್.ಐ ಅಬ್ದುಲ್ ಖಾದರ್ ಹಾಗೂ ಕರ್ನಾಟಕ ಗೇರು ಅಬಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹೆಚ್ ಖಾದರ್‌ರವರು ಟ್ರೋಪಿಯನ್ನು ವಿತರಿಸಿದರು.  ಮುಖ್ಯ ಪ್ರಭಾಷಣಗಾರರಾಗಿ ಅಬ್ದುಲ್ ನಾಸಿರ್ ಫೈಝಿ ಕೊಡತ್ತಾಯಿರವರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಡನ್ನೂರು ಮಸೀದಿಯ ಖತೀಬ್ ಮುಹಮ್ಮದ್ ಹನೀಫ್ ಮುಸ್ಲಿಯಾರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಅಬ್ದುಲ್ ಖಾದರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಅಧ್ಯಕ್ಷ ಅಬ್ಬಾಸ್ ಹಾಜಿ ಚಕ್ಕಾಮಕ್ಕಿ, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಮುಹಮ್ಮದ್ ಹಾಜಿ ಬೆಳ್ಳಾರೆ, ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ಚೆಯರ್‌ಮ್ಯಾನ್ ಹಸನ್ ಅರ್ಷದಿ ಬೆಳ್ಳಾರೆ, ಕುಂಬ್ರ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹನೀಫ್ ಮುಸ್ಲಿಯಾರ್, ಉಮ್ಮರ್ ಫೈಝಿ ದೇಲಂಪಾಡಿ, ಹಾಶಿಮ್ ದಾರಿಮಿ ಉಜಂಪಾಡಿ, ಟಿ.ಎಂ. ಶಹೀದ್ ಅರಂತೋಡು, ಪೆರ್ಲಂಪಾಡಿ ಶಾಫಿ ಹಾಜಿ, ಅಬ್ದುಲ್ ರಝಾಕ್ ಹಾಜಿ ಪಳ್ಳತ್ತೂರು, ಮಲಪ್ಪುರಂ ಕೋ-ಅಪರೇಟಿವ್ ಪ್ರವಾಸಿ ಕಾಂಗ್ರೆಸ್ ತೌಫಿಕ್ ವಿ.ಎನ್., ಡೆಲ್ಮಾ ಗ್ರೂಪ್‌ನ ಮುಹಮ್ಮದ್ ಕುಂಞಿ ಕೆ.ಎ. ಮತ್ತು ನಸೀರ್ ಕೆ.ಎಂ. ಪಳ್ಳಪುಜ, ಸುಳ್ಯ ಮುಸ್ತಫಾ ಹಾಜಿ, ಉಮ್ಮರ್ ಅಜ್ಜಾವರ, ಸಂಶುದ್ದೀನ್ ಸುಳ್ಯ, ಅಬ್ದುಲ್ ಹಾಜಿ ಇರಾ ಈಶ್ವರಮಂಗಲ, ಎನ್.ಎಸ್. ಅಬ್ದುಲ್ಲಾ ಹಾಜಿ ಈಶ್ವರಮಂಗಲ, ಅಬೂಬಕ್ಕರ್ ಹಾಜಿ ಮಂಗಳ ಬೆಳ್ಳಾರೆ, ಅಬೂಬಕ್ಕರ್ ಪೂಪಿ ಕನಕಮಜಲು, ಅಶ್ರಫ್ ಹಾಜಿ ಪಳ್ಳತ್ತೂರು, ಅಬ್ದುಲ್ ರಹಿಮಾನ್ ಹಾಜಿ ಪುಂಡೂರು, ಇಸಾಕ್ ಹಾಜಿ ನಾಟೆಕ್ಕಲ್ ದೇರಳಕಟ್ಟೆ, ಅಬ್ದುಲ್ ಖಾದರ್ ಹಾಜಿ (ಅಬ್ಬ), ಇಸ್ಮಾಯಿಲ್ ಹಾಜಿ ನೆಕ್ಕರೆ, ಮಾಡನ್ನೂರು ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಅಬ್ದುಲ್ಲಾ, ಎಂ.ಎಚ್. ಯೂಸುಫ್ ಹಾಜಿ ದೇಲಂಪಾಡಿ, ಇಸಾಕ್ ಹಾಜಿ ಸಾಹೇಬ್ ಪಾಜಪಳ್ಳ, ಎಲ್.ಟಿ. ಹಸೈನಾರ್ ಹಾಜಿ ಕೂರ್ನಡ್ಕ, ಅಬೂಬಕ್ಕರ್ ಕೆ.ಕೆ. ಕೋಲ್ಪೆ, ಅಬ್ದುಲ್ ಶುಕೂರ್ ಅರಸಿನಮಕ್ಕಿ, ಅಬ್ದುಲ್ ರಹಿಮಾನ್ ಫೈಝಿ ಎಸ್‌ಕೆಎಸ್‌ಎಸ್‌ಎಫ್ ಮಾಡನ್ನೂರು, ಮುಹಮ್ಮದ್ ಪವಾರh ಕನಕಮಜಲು, ಹಸೈನಾರ್ ಸಿ.ಕೆ. ಮಾಡನ್ನೂರು, ಖಾಲಿದ್ ಬಿ.ಎಂ. ಮಾಡನ್ನೂರು ಮೊದಲಾದವರು ಆಗಮಿಸಿದ್ದರು.

ಧ್ವಜಾರೋಹಣ: ಬೆಳಿಗ್ಗೆ ಧ್ವಜಾರೋಹಣವನ್ನು ಮಾಡನ್ನೂರು ಜಮಾಅತ್ ಕಮಿಟಿಯ ಅಧ್ಯಕ್ಷ ಎನ್.ಎ. ಅಬ್ದುಲ್ ಖಾದರ್ ಮುಸ್ಲಿಯಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ, ಬುಶ್ರಾ ಅಬ್ದುಲ್ ಅಝೀರh, ವಕೀಲ ಹನೀಫ್ ಹಾಜಿ ದೇಲಂಪಾಡಿ, ಅಬ್ದುಲ್ ಖಾದರ್ ಹಾಜಿ ಹಿರಾ ಈಶ್ವರಮಂಗಲ, ಇಸ್ಮಾಯಿಲ್ ಹಾಜಿ ನೆಕ್ಕರೆ, ಸಿ.ಎಚ್. ಅಬ್ದುಲ್ಲ ಮಾಡನ್ನೂರು, ಅಬ್ದುಲ್ಲಾ ಹಾಜಿ ಕನಕಮಜಲು, ದಿವ್ಯ ಎಚ್., ಅಬ್ದುಲ್ ಕುಂಞಿ ಕಾವು ಮತ್ತಿತರರು ಉಪಸ್ಥಿತರಿದ್ದರು.

ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಬಗ್ಗೆ  ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ, ಇಲ್ಲಿ ಈ ಒಂದು ಕೇಂದ್ರವು ಶಾಂತಿ ಸೌಹಾರ್ದತೆಯ ಕೇಂದ್ರವಾಗಲಿ. ಇಲ್ಲಿ ಕಲಿಯುತ್ತಿರುವಂತಹ ವಿದ್ಯಾರ್ಥಿಗಳು ಭಾರತದ ಸತ್ಪ್ರಜೆಗಳಾಗಿ ಮೂಡಿಬರಲಿ ಎಂದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಹಾಜಿ ಕೆಂಪಿ ಸ್ವಾಗತಿಸಿ, ಶುಭಹಾರೈಸಿದರು. ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ವ್ಯವಸ್ಥಾಪಕರಾದ ಕೆ.ಯು. ಕಲೀಲ್ ರಹಮಾನ್ ಅರ್ಷದಿ ಕೋಲ್ಪೆರವರು ಮಾತನಾಡಿ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಡಾಮಿಯ ಸಂಸ್ಥೆಯಲ್ಲಿ ಈಗಾಗಲೇ ೧೦೦ ವಿದ್ಯಾರ್ಥಿಗಳು ೨ ತರಗತಿಗಲಳ್ಳಾಗಿ ವಿದ್ಯಾರ್ಜನೆಗೈಯುತ್ತಿದ್ದು, ಪ್ರತೀ ತಿಂಗಳಿಗೆ ೨.೫೦ ಲಕ್ಷ ರೂ. ಖರ್ಚು ತಗಲುತ್ತಿದೆ. ಊಟ, ವಸತಿ ಎಲ್ಲವೂ ಉಚಿತವಾಗಿದ್ದು ಊರ ಪರವೂರ ದಾನಿಗಳ ನೆರವಿನಿಂದ ನೂರುಲ್ ಹುದಾ ಟ್ರಸ್ಟ್ ಹಾಗೂ ಮಾಡನ್ನೂರು ಜಮಾಅತ್ ಎಲ್ಲಾ ಖರ್ಚು ಬರಿಸುತ್ತಿದೆ.   ಹಿಂದಿ, ಉರ್ದು, ಕನ್ನಡ, ಇಂಗ್ಲಿಷ್, ಮಳಯಾಲಂ, ಪಾರ್ಸಿ, ಅರಬಿ ಸಹಿತ ೭ ಭಾಷೆಗಳಾಗಿ ೧೬ ವಿಸಯಗಳನ್ನು ನುರಿತ ಅಧ್ಯಾಪಕ ಸಹಾಯದಿಂದ ಕಲಿಸಲಾಗುತ್ತಿದೆ ಎಂದು ಅವರು ತೀಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.