ಸಂತೆ ಆದಿತ್ಯವಾರ ಕಿಲ್ಲೆಮೈದಾನದಲ್ಲಿ ನಡೆಯಲಿ; ನಗರ ಕಾಂಗ್ರೆಸ್‌ನಿಂದ ನಗರಸಭಾ ಅಧ್ಯಕ್ಷರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

kille

ಪುತ್ತೂರು: ವಾರದ ಸಂತೆಯನ್ನು ಆದಿತ್ಯವಾರ ಕಿಲ್ಲೆ ಮೈದಾನದಲ್ಲಿ ನಡೆಸುವಂತೆ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ನೇತೃತ್ವದಲ್ಲಿ ನಗರಸಭಾ ಅಧ್ಯಕ್ಷರಿಗೆ ಮನವಿ ಮಾಡಲಾಯಿತು.

ಕಿಲ್ಲೆ ಮೈದಾನದಲ್ಲಿ ಸೋಮವಾರದಂದು ನಡೆಯುತ್ತಿದ್ದ ವಾರದ ಸಂತೆಯು ಸಹಾಯಕ ಕಮೀಷನ್‌ಜರವರ  ಆದೇಶದಂತೆ ಎಪಿಎಂಸಿಗೆ ಸ್ಥಳಾಂತರವಾಗಿದ್ದು, ಎಪಿಎಂಸಿಯಲ್ಲಿರುವ ಸಂತೆಗೆ ಹೋಗಲು ವ್ಯಾಪಾರಿ ಹಾಗೂ ಗ್ರಾಹಕರು ದೂರವಿದೆ ಎಂಬ ಕಾರಣಕ್ಕಾಗಿ ಎಪಿಎಂಸಿ ಸಂತೆಯು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿರುವುದಿಲ್ಲ. ಇದರಿಂದಾಗಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆಯು ಇಲ್ಲದಾಗುವ ಸಂಭವವಿರುತ್ತದೆ.

ಸಂತೆ ಸ್ಥಳಾಂತರದ ಬಗ್ಗೆ ಬೇರೆ ಬೇರೆ ವ್ಯಕ್ತಿಗಳು ಗೊಂದಲವೆಬ್ಬಿಸಿ ರಾಜಕೀಯ ಮಾಡು ತ್ತಿರುವುದರಿಂದ ಪುತ್ತೂರಿನ ಸಂತೆಯ ಬಗ್ಗೆ ಜನತೆಗೆ ಗೊಂದಲ ಉಂಟಾಗಿರುತ್ತದೆ. ಕಿಲ್ಲೆ ಮೈದಾನದ ಸುತ್ತಮುತ್ತ ಮಿನಿ ವಿಧಾನ ಸೌಧ, ತಾ.ಪಂ., ನ್ಯಾಯಾಲಯ, ಸರ್ಕಾರಿ ಆಸ್ಪತ್ರೆ, ನಗರಸಭಾ ಕಛೇರಿ ಅಲ್ಲದೆ ಇನ್ನಿತರ ಸರಕಾರಿ ಕಛೇರಿಗಳು ಇರುವುದರಿಂದ ಸೋಮವಾರದಂದು ಸಂತೆ ನಡೆಸುವುದು ಸೂಕ್ತವಾಗಿರುವುದಿಲ್ಲ. ಇದರ ಬದಲು ಆದಿತ್ಯವಾರದಂದು ಹಿಂದಿನಂತೆ ಕಿಲ್ಲೆ ಮೈದಾನ ಹಾಗೂ ಸುತ್ತುಮುತ್ತ ವಾರದ ಸಂತೆ ನಡೆಸಲು ಅನುಕೂಲವಾದ ದಿನವಾದುದರಿಂದ ಹಾಗೂ ಟ್ರಾಫಿಕ್ ಸಮಸ್ಯೆಗಳು ಉದ್ಭವ ವಾಗದೆ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಆದಿತ್ಯವಾರದಂದು ಸಂತೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ಪಕ್ಷದ ಪ್ರಮುಖರಾದ ಯು.ಲೋಕೇಶ್ ಹೆಗ್ಡೆ ಸ್ವರ್ಣಲತಾ ಹೆಗ್ಡೆ, ಖಾದರ್ ಹಾಜಿ ಸಹಿತ ಹಲವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.