Breaking News

ಡಿ.7ರಿಂದ  ಡಿ.13ರವರೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ದತ್ತಜಯಂತ್ಯುತ್ಸವ, ದತ್ತ ಮಹಾಯಾಗ ಸಪ್ತಾಹ

Puttur_Advt_NewsUnder_1
Puttur_Advt_NewsUnder_1

odiyooruವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ.7ರಿಂದ 13ರ ವರೆಗೆ ದತ್ತ ಜಯಂತ್ಯುತ್ಸವ, ದತ್ತ ಮಹಾಯಾಗ ಸಪ್ತಾಹ ನಡೆಯಲಿದೆ.

ಡಿ.7ರಂದು ಬೆಳಿಗ್ಗೆ ದೀಪಾರಾಧನೆ, ಗಣಪತಿ ಹವನ, ದತ್ತ ಮಹಾಯಾಗ ಸಪ್ತಾಹ ಆರಂಭ, ದತ್ತಮಾಲಾಧಾರಣೆ, ಅಪರಾಹ್ನ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ ನಡೆಯಲಿದೆ. ಬಳಿಕ ಡಿ 12ರವರೆಗೆ ಬೆಳಿಗ್ಗೆ ಗುರು ಚರಿತ್ರೆ ಪಾರಾಯಣ, ವೇದ ಪಾರಾಯಣ, ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ ರಾತ್ರಿ ರಂಗಪೂಜೆ, ಮಹಾಮಂಗಳಾರತಿ, ಬೆಳ್ಳಿರಥೋತ್ಸವ ನಡೆಯಲಿದೆ.

ಡಿ 13ರಂದು ಬೆಳಿಗ್ಗೆ ದತ್ತಮಲಾವ್ರತಧಾರಿಗಳಿಂದ ನಾಮಸಂಕೀರ್ತನಾ ಯಾತ್ರೆ. ಮಧ್ಯಾಹ್ನ ಗುರುಚರಿತ್ರೆ-ವೇದ ಪಾರಾಯಣ ಸಮಾಪ್ತಿ, ದತ್ತಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ದತ್ತ ಸಂಪ್ರದಾಯದಂತೆ ಮಧುಕರೀ ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ: ಡಿ.13ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ, ದ.ಕ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ, ನ್ಯಾಯವಾದಿ ಜಗದೀಶ್ ಶೇಣವ, ಮುಂಬೈ ಗುರುದೇವ ಸೇವಾ ಬಳಗದ ಅಧ್ಯಕ್ಷ, ನ್ಯಾಯವಾದಿ ಕೃಷ್ಣ ಎಲ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಶೀನಪ್ಪ ರೈ ಸಂಪಾಜೆಯವರಿಗೆ ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಡಿ 13ರಂದು ರಾತ್ರಿ ಶ್ರೀ ಗೋಪಾಲ ಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಡನೀರು ಇವರಿಂದ ’ಮಧುಚಕ್ರ’ ಯಕ್ಷಗಾನ ಬಯಲಾಟ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.