ಡಿ.9: ಪೆರ್ಲಂಪಾಡಿ ಶಾಲೆಯಲ್ಲಿ ತಾ| ಮಟ್ಟದ ಮಕ್ಕಳ ಮೇಳ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಭಾರತ ಸೇವಾದಳ ಪುತ್ತೂರು ತಾಲೂಕು ಸಮಿತಿ ಹಾಗೂ ಹಿ.ಪ್ರಾ ಶಾಲೆ ಪೆರ್ಲಂಪಾಡಿ, ಕಾವು ಕ್ಲಸ್ಟರ್ ಇದರ ಸಹಯೋಗದೊಂದಿಗೆ ಸೇವೆಗಾಗಿ ಬಾಳು ಎಂಬ ಧ್ಯೇಯ ಹೊತ್ತ ಭಾರತ ಸೇವಾ ದಳದ ತಾಲೂಕು ಮಟ್ಟದ ಮಕ್ಕಳ ಮೇಳವು ಡಿ.9 ರಂದು ಪೆರ್ಲಂಪಾಡಿ ಹಿ.ಪ್ರಾ ಶಾಲೆಯಲ್ಲಿ ನಡೆಯಲಿದೆ.

ಭಾರತ ಸೇವಾದಳ ದ.ಕ.ಜಿಲ್ಲಾ ಸಮಿತಿಯ ಬಶೀರ್ ಬೈಕಂಪಾಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿ. ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಭಾರತ ಸೇವಾದಳ ತಾಲೂಕು ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷೆ ಗಿರಿಜಾ ಧನಂಜಯ ಪೂಜಾರಿ ಪುರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕೊಳ್ತಿಗೆ ಗ್ರಾ.ಪಂ. ಸದಸ್ಯ ಶಿವರಾಮ ಭಟ್ ಬೀರ್ಣಕಜೆ, ಷಣ್ಮುಖದೇವ ಫ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್ ಲಕ್ಷ್ಮಣ ಗೌಡ ಕುಂಟಿಕಾನ, ತಾಲೂಕು ಸಮನ್ವಯಾಧಿಕಾರಿ ವಿಷ್ಣುಪ್ರಸಾದ್ ಸಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ನಿವೃತ್ತ ಮುಖ್ಯಗುರು ಸುಧಾಕರ ರೈ ಕೆ ಮುಖ್ಯ ಅತಿಥಿಗಳಾಗಿ  ಭಾಗವಹಿಸಲಿದ್ದಾರೆ. ಕೊಳ್ತಿಗೆ ಗ್ರಾ.ಪಂ.ಸದಸ್ಯರಾದ ಚಂದ್ರಾವತಿ ಮತ್ತು ಷಣ್ಮುಖಲಿಂಗಂ, ಭಾರತ ಸೇವಾದಳದ ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ಸುಧೀರ್ ಟಿ.ಕೆ ಗೌರವ ಉಪಸ್ಥಿತಲಿದ್ದಾರೆ.

ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ತಾ. ಪಂ ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರು ಹಾಗೂ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ತಾ.ಪಂ ಸದಸ್ಯ ರಾಮ ಪಾಂಬಾರು ಪ್ರದರ್ಶನ ಚಟುವಟಿಕೆ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕೊಳ್ತಿಗೆ ಗ್ರಾ.ಪಂ.ಸದಸ್ಯೆ ಯಶೋದಾ ಕೋಡಂಬು ಪ್ರಶಸ್ತಿ ಪತ್ರ ವಿತರಿಸಲಿದ್ದಾರೆ. ಕಾರ್ಪೋರೇಶನ್ ಬ್ಯಾಂಕ್ ಪೆರ್ಲಂಪಾಡಿ ಶಾಖಾ ಪ್ರಬಂಧಕ ಶಂಕರನಾರಾಯಣ ದೇವ ಸನ್ಮಾನಿಸಲಿದ್ದಾರೆ. ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಅಲ್ಫೋನ್ಸೊ ಫ್ರಾಂಕೋ, ಕೊಳ್ತಿಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮುರಳೀಧರ ಎಸ್.ಪಿ ಕೆಮ್ಮಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಕೊಳ್ತಿಗೆ ಗ್ರಾ.ಪಂ.ಸದಸ್ಯ ದೇವಾನಂದ ರೈ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಷಪ್ಪ ಗೌಡ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಭಾರತ ಸೇವಾದಳ ತಾಲೂಕು ಸಮಿತಿ ಅಧ್ಯಕ್ಷ ಎಸ್.ಬಿ ಜಯರಾಮ ರೈ, ಕಾರ್ಯದರ್ಶಿ ಪುಷ್ಪಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ರಸಾದ್ ಎಂ, ಮಕ್ಕಳ ಮೇಳದ ಸಮಿತಿ ಅಧ್ಯಕ್ಷ ವಿಷ್ಣು ಭಟ್ ಎಕ್ಕಡ್ಕ ಹಾಗೂ ಮುಖ್ಯಗುರು ಲಕ್ಷ್ಮಣ ನಾಯ್ಕ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೧೫೦೦ ವಿದ್ಯಾರ್ಥಿಗಳು ಭಾಗಿ: ತಾಲೂಕಿನ ಸುಮಾರು 80 ಶಾಲೆಗಳಿಂದ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಲಕರಣೆ ವ್ಯಾಯಾಮ, ಲೇಝಿಮ್, ಡಂಬೆಲ್ಸ್ ಹಾಗೂ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಸೇವಾ ದಳದ ಪುರ ಮೆರವಣಿಗೆಯು ಶಾಲೆಯಿಂದ ಹೊರಟು ಪೆರ್ಲಂಪಾಡಿ ಮುಖ್ಯ ರಸ್ತೆಯ ಮೂಲಕ ಸಾಗಿ ಬರಲಿದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಊಟ, ಉಪಾಹಾರ ಹಾಗೂ ಕಾರ್ಯಕ್ರಮ ನೀಡುವ ವಿದ್ಯಾರ್ಥಿಗಳಿಗೆ ಬಿಸಿಲಿನಿಂದ ತೊಂದರೆಯಾಗದಂತೆ ದಾನಿಗಳ ನೆರವಿನಿಂದ ಮೈದಾನಕ್ಕೆ ಪೆಂಡಲ್ ಅಳವಡಿಸಲಾಗಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.