ಹೊಸ ಬೋರ್‌ವೆಲ್‌ನಲ್ಲಿ ಸಿಕ್ಕಿತು ಧಾರಾಳ ನೀರು… ಬಡಕ್ಕೋಡಿ, ಸರ್ವೆ ನೀರಿನ ಸಮಸ್ಯೆ ಪರಿಹಾರ

Puttur_Advt_NewsUnder_1
Puttur_Advt_NewsUnder_1

badakkodi-1

ಪುತ್ತೂರು: ಮುಂಡೂರು ಗ್ರಾ.ಪಂ ವ್ಯಾಪ್ತಿಯ ಬಡಕ್ಕೋಡಿ, ಸರ್ವೆ ಪರಿಸರದಲ್ಲಿ ಉಂಟಾಗಿದ್ದ ನೀರಿನ ದುರ್ವಾಸನೆ ಸಮಸ್ಯೆ ಕೊನೆಗೂ ಕೊನೆಗೊಂಡಿದೆ. ಶಾಸಕಿ ಶಕುಂತಳಾ ಶೆಟ್ಟಿಯವರ ಆದೇಶದಂತೆ  ಡಿ.6ರಂದು ಟಾಸ್ಕ್‌ಫೋರ್ಸ್ ಕುಡಿಯುವ ನೀರು ಯೋಜನೆಯಲ್ಲಿ ಬಡಕ್ಕೋಡಿಯಲ್ಲಿ ಹೊಸ ಬೋರ್‌ವೆಲ್ ಕೊರೆಸಲಾಗಿದ್ದು ಧಾರಾಳ ನೀರು ಕೂಡಾ ಸಿಕ್ಕಿದೆ. ಇದರೊಂದಿಗೆ ಒಂದು ತಿಂಗಳಿನಿಂದ ಪ್ರದೇಶದಲ್ಲಿ ಉಂಟಾಗಿದ್ದ ಸಮಸ್ಯೆ ಪರಿಹಾರವಾದಂತಾಗಿದ್ದು ಪ್ರದೇಶದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ಕುರಿತು ’ಸುದ್ದಿ’ ಜೊತೆ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿಯವರು ಒಂದು ವಾರದೊಳಗಾಗಿ ಹೊಸ ಬೋರ್‌ವೆಲ್ ಕೊರೆಸಿ ಕೊಡುವುದಾಗಿ ಡಿ.5ರಂದು ಭರವಸೆ ನೀಡಿದ್ದೆ. ಆದರೆ ಒಂದೇ ದಿನದಲ್ಲಿ ಭರವಸೆ ಈಡೇರಿಸಿದ್ದೇನೆ ಎಂದು ಹೇಳಿದರು.

ಕೊಳವೆಬಾವಿ ಕೊರೆಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಸದಸ್ಯ ಶಿವರಂಜನ್, ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ ಭೇಟಿ ನೀಡಿದ್ದರು.

ಭಕ್ತಕೋಡಿ, ಸರ್ವೆ ಪ್ರದೇಶದಲ್ಲಿ ಉಂಟಾಗಿದ್ದ ನೀರಿನ ದುರ್ವಾಸನೆ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ. ಪ್ರದೇಶದ ಜನರ ಸಂಕಷ್ಟದ ಕುರಿತು ಶಾಸಕರಿಗೆ ಹೇಳಿದಾಗ ಕೂಡಲೇ ಸ್ಪಂದಿಸಿ ಹೊಸ ಕೊಳವೆಬಾವಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಶಾಸಕರಿಗೆ ಅಭಿನಂದನೆಗಳು

-ಎಸ್.ಡಿ ವಸಂತ, ಅಧ್ಯಕ್ಷರು ಗ್ರಾ.ಪಂ ಮುಂಡೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.