Breaking News

ದ. 10 : ರಾಮಕುಂಜ ಹಾ.ಉ.ಸ. ಸಂಘದ ಸುವರ್ಣ ಮಹೋತ್ಸವ ವಿಸ್ತೃತ ಕಟ್ಟಡದ ಉದ್ಘಾಟನೆ, ಕ್ಷೇತ್ರೋತ್ಸವ, ವಿಚಾರ ಸಂಕಿರಣ

Puttur_Advt_NewsUnder_1
Puttur_Advt_NewsUnder_1

 

ಉಪ್ಪಿನಂಗಡಿ: ಕೊಯಿಲ ಗೋಕುಲ ನಗರದಲ್ಲಿ ಕಾರ‍್ಯಾಚರಿಸುತ್ತಿರುವ ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸ್ವರ್ಣಮಹೋತ್ಸವ ಕಾರ್ಯಕ್ರಮ, ಸಂಘದ ವಿಸ್ತೃತ ಕಟ್ಟಡ ಗೋಕುಲ ಇದರ ಉದ್ಘಾಟನಾ ಸಮಾರಂಭ ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಯೋಗದಲ್ಲಿ ತಾಲ್ಲೂಕು ಮಟ್ಟದ  ಜಾನುವಾರು ಪ್ರದರ್ಶನ (ಕ್ಷೇತ್ರೋತ್ಸವ)  10 ರಂದು ನಡೆಯಲಿದೆ ಎಂದು ರಾಮಕುಂಜ ಹಾ.ಉ.ಸ. ಸಂಘದ ಅಧ್ಯಕ್ಷ ಪಂಜೆ ರಾಮ ಭಟ್ಟ ತಿಳಿಸಿದರು.

 ಅವರು ದ. 6 ರಂದು ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಸಂಘವು 1966 ರಲ್ಲಿ ಎಚ್. ಎಚ್. ಇಬ್ರಾಹಿಂ ಹಾಜಿ ಹಲ್ಯಾರ ಅಧ್ಯಕ್ಷತೆಯಲ್ಲಿ ಸಹಕಾರಿ ಧುರೀಣ ಪೂರಿಂಗ ನಾರಾಯಣ ರಾಯರ ಮುತುವರ್ಜಿಯಲ್ಲಿ ಪ್ರಾರಂಭವಾಯಿತು. ಜನತಾ ಹಾಲು ಒಕ್ಕೂಟ ಎಂಬ ಹೆಸರಿನಲ್ಲಿ 33 ಸದಸ್ಯರಿಂದ ಪ್ರಾರಂಭವಾದ ಸಂಘ ಅಂದು ಮೂರು ಲೀಟರ್ ಹಾಲು ಖರೀದಿಯೊಂದಿಗೆ ಕಾರ್ಯಾರಂಭ ಮಾಡಿತ್ತು. ಇದೀಗ 431 ಸದಸ್ಯರನ್ನು ಹೊಂದಿರುವ ಸಂಘ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿ ದಿನ ನಿತ್ಯ 1000 ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದೆ. ಕಳೆದ ಸಾಲಿನ ಮಹಾಸಭೆಯಲ್ಲಿ 4.18 ಕೋಟಿ ರೂಪಾಯಿ ವ್ಯವಹಾರ ನಡೆಸಿ 5.8 ಲಕ್ಷ ರೂಪಾಯಿ ಲಾಭಗಳಿಸಿದೆ ಎಂದರು.

 ಐವತ್ತು ವರ್ಷ ಸಂದಿರುವ ಸಂದರ್ಭದ ನೆನಪಿನಲ್ಲಿ ಸುಮಾರು 16 ಲಕ್ಷ ರೂಪಾಯಿ ವೆಚ್ಚದಲ್ಲಿ ಸಭಾ ಭವನ ಹಾಗೂ ವ್ಯಾಪಾರ ಮಳಿಗೆಯನ್ನು ಹೊಂದಿರುವ ವಿಸ್ತೃತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ. ಶಿವರಾಮ ಭಟ್, ಎನ್. ಈಶ್ವರ ಭಟ್, ಸ್ಥಾಪಕ ಸದಸ್ಯರಾದ ಕೆ.ಎ. ಅಬೂಬಕ್ಕರ್, ಕೆ. ಸುಧಾಕರ ಚೌಟ ಅವರುಗಳನ್ನು ಸನ್ಮಾನಿಸಲಾಗುವುದು. ರಾಮಕುಂಜದ ಗಣೇಶ ನಗರದಿಂದ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಲಾಂಕೃತ ಗೋವುಗಳ ಮೆರವಣಿಗೆ ನಡೆಯಲಿದೆ ಎಂದರು.

 ಸಮಾರಂಭದಲ್ಲಿ ಜಾನುವಾರ ಪ್ರದರ್ಶನ ಕ್ಷೇತ್ರೋತ್ಸವನ್ನು ದ.ಕ. ಹಾ.ಉ. ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಉದ್ಘಾಟಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಸ್ತೃತ ಕಟ್ಟಡವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಬಳಿಕ ಕೊಯಿಲ ರೇಶ್ಮೆ ಕ್ಷೇತ್ರದಲ್ಲಿ ನಡೆಯುವ ವಿಚಾರಗೋಷ್ಠಿಯನ್ನು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎನ್.ಡಿ.ಆರ್.ಐ ನಿರ್ದೆಶಕ ಡಾ| ಕೆ.ಪಿ. ರಮೇಶ ಹಾಗೂ ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಪ್ರಭಾಕರ, ಬಂಟ್ವಾಳ ವಿಭಾಗ ರೇಶ್ಮೆ ಸಹಾಯಕ ನಿರ್ದೇಶಕ ಸಿದ್ದರಾಜು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

 ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಕೆ. ಸೀತಾರಾಮ ರೈ ಸವಣೂರು, ನಿರಂಜನ ಕುಮಾರ್ ಬಾವಂತಬೆಟ್ಟು, ನಿರ್ದೆಶಕರಾದ ವೀಣಾ ಆರ್. ರೈ, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ ಪಾಣಾಜೆ, ಕಾರ್ಯನಿರ್ವಾಹಕ ನಿರ್ದೆಶಕ ಡಾ| ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೀತಾರಾಮ ಶೆಟ್ಟಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಇ. ಕೃಷ್ಣ ಮೂರ್ತಿ ಕಲ್ಲೇರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 ಸಂಜೆ ನಡೆಯುವ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸುಳ್ಯ ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ಸಹಾಯಕ ನಿಬಂಧಕ ಕೆ. ಮಂಜುನಾಥ, ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ಸದಸ್ಯೆ ಜಯಂತಿ ಆರ್. ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ಆಲಂಕಾರು ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ, ದ.ಕ. ಹಾಲು ಒಕ್ಕೂಟದ ನಿರ್ದೇಶಕ ಡಾ| ಕೃಷ್ಣ ಭಟ್ ಕೊಂಕೋಡಿ, ಉಪ ವ್ಯವಸ್ಥಾಪಕ ಡಾ| ಯಂ.ರಾಮಕೃಷ್ಣ ಭಟ್,  ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್, ಕೊಲ ಗ್ರಾ. ಪಂ. ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದ ರಾಮ ಭಟ್ಟರವರು  ಸಭಾ ಕಾರ್ಯಕ್ರಮದ ಬಳಿಕ ಕೊಲ ಯಕ್ಷ ನಂದನ ಕಲಾ ಸಂಘದ ಸದಸ್ಯರಿಂದ ತೆಂಕುತಿಟ್ಟಿನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

 ಪತ್ರಿಕಾ ಗೋಷ್ಟಿಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಬಡಿಲ ಈಶ್ವರ ಭಟ್, ಉದಯ ಕಶ್ಯಪ್, ಹಾಲು ಒಕ್ಕೂಟದ ಸಹಾಯಕ ಮ್ಯಾನೇಜರ್ ಡಾ| ಕಾರ್ತಿಕ್, ಸಂಘದ ನಿರ್ದೆಶಕರಾದ ಟಿ. ಚಂದ್ರಶೇಖರ ಗೌಡ, ಕಾಯರಟ್ಟ ಸಂಜೀವ ಗೌಡ, ಕಾರ್ಯದರ್ಶಿ ಕೆ. ಚಿತ್ತರಂಜನ್ ರಾವ್ ಬದೆಂಜ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.