Breaking News

ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಬೀಜದಪಳಿಕೆ ಎಂಬಲ್ಲಿ ಮಂಗಳವಾರ ನಡೆದಿದೆ.

ಬೀಜದಪಳಿಕೆ ನಿವಾಸಿ ಜಿನ್ನಪ್ಪ ಗೌಡ ಎಂಬವರ ಪುತ್ರ ರಮೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೂಲಿ ಕಾರ್ಮಿಕನಾಗಿರುವ ಈತ ಮಂಗಳವಾರ ಬೆಳಗ್ಗೆ ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದು, ಕೂಲಿ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಪೂರ್ವಾಹ್ನ 11:15ರ ಸುಮಾರಿಗೆ ಮನೆಗೆ ಬಂದು ಮನೆಯೊಳಗೆ ಬಾಗಿಲಿನ ಚಿಲಕ ಹಾಕಿ ಈ ಕೃತ್ಯವೆಸಗಿದ್ದಾರೆ. ಮನೆಯೊಳಗೆ ಬೊಬ್ಬೆ ಕೇಳಿ ಮನೆಯ ಹೊರಗಡೆ ಇದ್ದ ಅವರತಂದೆ ಕಿಟಕಿಯ ಮೂಲಕ ನೋಡಿದಾಗ ಸೀಮೆ ಎಣ್ಣೆ ಸುರಿದು ಈತ ಮೈಮೇಲೆ ಬೆಂಕಿ ಹಚ್ಚಿರುವುದು ಕಂಡು ಬಂದಿದೆ. ಬಳಿಕ ಮನೆಯವರ ಬೊಬ್ಬೆ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಬಾಗಿಲು ಒಡೆದು ಒಳಪ್ರವೇಶಿಸಿ, ಬೆಂಕಿ ನಂದಿಸಿದರಾದರೂ, ಅಷ್ಟರಲ್ಲೇ ಈತ ಮೃತಪಟ್ಟಿದ್ದರು. ಮೃತನ ತಂದೆ ಜಿನ್ನಪ್ಪ ಗೌಡರು ನೀಡಿದ ದೂರಿನ ಮೇರೆಗೆ  ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.