ಇಂದಿನಿಂದ ಕರ್ಮಲ ಮಹಾಮ್ಮಾಯಿ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕರ್ಮಲ ಶ್ರೀಮಹಾಮ್ಮಾಯಿ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕಾಲಾವಧಿ ಉತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಡಿ.7,8,10 ಹಾಗೂ 15 ರಂದು ನಡೆಯಲಿದೆ. ಡಿ.7 ರಂದು ಮಹಾಗಣಪತಿ ಹೋಮ, ಚಂಡಿಕಾಯಾಗ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಡೆಯವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಸಂಗಮ್ ಬ್ರದರ‍್ಸ್ ಪುತ್ತೂರು, ಮುರಳಿ ಬ್ರದರ‍್ಸ್ ಕಲ್ಲೇಗ, ಸ್ಫೂರ್ತಿ ಕಲಾವಿದರು ಬಾಳೆಪುಣಿ ಹಾಗೂ ಸ್ಥಳಿಯ ಪ್ರತಿಭೆಗಳಿಂದ ಕಿರುಪ್ರಹಸನ ನಂತರ ತೆಲಿಕೆದ ರಂಗ ಕಲಾವಿದೆರ್ ಪುತ್ತೂರು ಇವರಿಂದ ಸತ್ಯೊದ ಬೊಲ್ಪು ತುಳು ಹಾಸ್ಯ ನಾಟಕ ನಡೆಯಲಿದೆ. ಡಿ.8 ರಂದು ಭಂಡಾರದ ಚಾವಡಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅರ್ಧ ಏಕಾಹ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ಹಾಗೂ ಶ್ರೀಮಹಾಮ್ಮಾಯಿ ದೇವರ ಭಂಡಾರ ಹೊರಟು ಭಂಡಾರದ ಚಾವಡಿಯ ರಾಜಾಂಗಣದಲ್ಲಿ ಕಾಲಾವಧಿ ಉತ್ಸವ ಜರಗಲಿದೆ. ಡಿ.10 ರಂದು ಭಂಡಾರದ ಚಾವಡಿಯಲ್ಲಿ ಚಾಮುಂಡಿ ಗುಳಿಗ, ಕಲ್ಲುರ್ಟಿ, ಧರ್ಮದೈವ ಹಾಗೂ ಶ್ರೀಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಡಿ.15 ರಂದು ಸಂಜೆ 6.00 ರಿಂದ ಭಂಡಾರದ ಚಾವಡಿಯಲ್ಲಿ ದೈವಗಳ ತಂಬಿಲ ಸೇವೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.