ಬನ್ನೂರು ಆರ್‌ಟಿಓ ಕಛೇರಿಯಲ್ಲಿ ಕಾನೂನು ಸಾಕ್ಷರತಾ ರಥ ಅಭಿಯಾನ, ಸಂಚಾರಿ ಲೋಕ ಅದಾಲತ್

Puttur_Advt_NewsUnder_1
Puttur_Advt_NewsUnder_1

1-2ಕಾನೂನಿನ ಅಜ್ಞಾನದಿಂದ ಬದುಕು ಅಸಾಧ್ಯ-ನ್ಯಾ. ಇಬ್ರಾಹಿಂ ಮುಜಾವರ್

ಚಿತ್ರ:ಪದ್ಮ ಪುತ್ತೂರು

ಪುತ್ತೂರು:ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕಾನೂನಿನ ಅರಿವು ಆವಶ್ಯಕ. ಕಾನೂನು ಇಲ್ಲದೆ ನಮ್ಮ ಬದುಕು ಅಸಾಧ್ಯ. ಮನಷ್ಯ ಹುಟ್ಟು, ಬದುಕಿನಿಂದ ಹಿಡಿದು ಆತನು ಸತ್ತರೂ ಕಾನೂನು ಅವನನ್ನು ಹಿಂಬಾಲಿಸುತ್ತದೆ. ಕಾನೂನಿನ ಅಜ್ಞಾನದಿಂದ ಮನುಷ್ಯನ ಬದುಕೇ ಅಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಇಬ್ರಾಹಿಂ ಎಂ ಮುಜಾವರ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಪುತ್ತೂರು ಇವುಗಳ ಆಶ್ರಯದಲ್ಲಿ ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ದ.7ರಂದು ನಡೆದ ಕಾನೂನು ಸಾಕ್ಷರತಾ ರಥ ಅಭಿಯಾನ ಮತ್ತು ಸಂಚಾರಿ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿ ಸೋಜ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಹಿರಿಯ ಮೋಟಾರು ನಿರೀಕ್ಷಕ ರವಿಶಂಕರ್ ’ವಿಮಾ ಕಾನೂನು ಮತ್ತು ರಸ್ತೆ ಸುರಕ್ಷತೆ ಮತ್ತು ಚಾಲನಾ ಪರವಾಣಿಗೆ ಕುರಿತು’ ಉಪನ್ಯಾಸ ನೀಡಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮಹೇಶ್ ಕಜೆ, ವಕೀಲರ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಕಾರ್ಯದರ್ಶಿ ಸಂತೋಷ್ ಕುಮಾರ್ ಎಂ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮಂಜುನಾಥ ಎನ್.ಎಸ್, ವಕೀಲರ ಸಂಘದ ನೂತನ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಉಪಾಧ್ಯಕ್ಷ ಮಹಾಬಲ ಗೌಡ, ನ್ಯಾಯವಾದಿಗಳಾದ ಹರಿಣಾಕ್ಷಿ ಜೆ ಶೆಟ್ಟಿ, ದೀಪಕ್ ಕುಮಾರ್, ಜೊತೆ ಕಾರ್ಯದರ್ಶಿ ರಮಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರ್‌ಟಿಓ ಕಛೇರಿ ಸಿಬಂದಿ ಗಾಯತ್ರಿ ಪ್ರಾರ್ಥಿಸಿದರು. ಅಧೀಕ್ಷಕ ಜನಾರ್ದನ ಗೌಡ ವಂದಿಸಿದರು. ಹಿರಿಯ ಮೋಟಾರು ನಿರೀಕ್ಷಕ ಶ್ರೀಧರ್ ರಾವ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.