ಫಿಲೋಮಿನಾದಲ್ಲಿ ‘ಮನೋ ಕೌಶಲ್ಯಗಳು’ ತರಬೇತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

dsc_6108_2

ಪುತ್ತೂರು: ಇಂದಿನ ಯುವ ಪೀಳಿಗೆ ಸಂವೇದನಾಶೀಲ ಗುಣಸ್ವಭಾವ ಹಾಗೂ ಸದೃಢ ಮಾನಸಿಕತೆಯನ್ನು ಆರ್ಜಿಸಿಕೊಳ್ಳುವುದು ಅಪೇಕ್ಷಣೀಯವಾಗಿದೆ. ಯುವಜನಾಂಗ ಬರೀ ಬಾಹ್ಯವಾದ ಶಾರೀರಿಕ ಸ್ವರೂಪದೆಡೆಗೇ ಹೆಚ್ಚಾಗಿ ಸೆಳೆಯಲ್ಪಡುತ್ತಿದ್ದು, ಪ್ರಸ್ತುತ ಸನ್ನಿವೇಶಗಳನ್ನು ನಿರ್ವಹಿಸಲು ಅವಶ್ಯವಿರುವ ಮನೋಸ್ಥೆರ್ಯವನ್ನು ಹೊಂದಲು ಅಸಮರ್ಥರಾಗುತ್ತಿರುವುದು ವಿಷಾದನೀಯ. ಇಂತಹ ಕಾರ್ಯಾಗಾರಗಳು ಯುವ ಸಮುದಾಯದಲ್ಲಿ ಜೀವನಾಭಿರುಚಿಯನ್ನು ಮೂಡಿಸಿ ಸವಾಲುಗಳನ್ನು ಎದುರಿಸಲು ಸನ್ನದ್ಧಗೊಳ್ಳುವಂತೆ ಪ್ರೇರೇಪಿಸುತ್ತವೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ರೆ. ಡಾ.ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.

ಅವರು ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಮನೋ ಕೌಶಲ್ಯಗಳು’ ಎಂಬ ಎರಡು ದಿನಗಳ ವ್ಯಕ್ತಿತ್ವ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿಶ್ಲೇಷಣಾತ್ಮಕ ಮನೋಪ್ರವೃತ್ತಿ, ಚಿಂತನಗ್ರಾಹಿತ್ವ, ವಿಮರ್ಶೆಗಳ ಸಕಾರಾತ್ಮಕ ಬಳಕೆ, ಕ್ರಿಯಾಶೀಲತೆ ಇವೇ ಮೊದಲಾದ ಮನೋ ಕೌಶಲ್ಯಗಳು ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕ ಅಂಶಗಳಾಗಿವೆ ಎಂದರು.

ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಸಂಯೋಜಕರಾದ ಪ್ರಸನ್ನಕುಮಾರ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ಉಪನ್ಯಾಸಕ ವಿಪಿನ್ ನಾಯ್ಕ್ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕ ತೇಜಸ್ವೀ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ಚಟುವಟಿಕೆಗಳ ಮೂಲಕ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಸಮಾಜಕಾರ್ಯ ವಿದ್ಯಾರ್ಥಿಗಳಾದ ಅಶ್ವಥ್ ಸ್ವಾಗತಿಸಿ. ಅನಿಲ್ ಜೋಸೆಫ್ ವಂದಿಸಿದರು. ಶುಭಶ್ರೀ ಪ್ರಾರ್ಥಿಸಿದರು. ಜಾನೆಟ್ ವಿಲ್ಮಾ ಡಿ’ಸೋಜ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.