ಹೀಗೊಂದು ಅಮಾನವೀಯ ಘಟನೆ ಗಾಯಾಳು ಕಾರ್ಮಿಕನನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋದರು…!

Puttur_Advt_NewsUnder_1
Puttur_Advt_NewsUnder_1

 

gayalu-karmika* ಡಿ.6ರಂದು ಸಂಪ್ಯದಲ್ಲಿ ನಡೆದ  ಅಮಾನವೀಯ ಘಟನೆ

* ಓಮ್ನಿ ಕಾರಿನಲ್ಲಿ ತಂದು ನಿರ್ಜನ    ಸ್ಥಳದಲ್ಲಿ ಹೊರಕ್ಕೆಸೆದರು

* ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದ   ಕೂಲಿ ಕಾರ್ಮಿಕ

* ಘಟನೆಯ ತನಿಖೆಗೆ   ಸೇರಿದ್ದವರ ಆಗ್ರಹ

ಪುತ್ತೂರು: ಕೂಲಿ ಕಾರ್ಮಿಕ ವ್ಯಕ್ತಿಯೊಬ್ಬರು ತಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬಿದ್ದು ಗಾಯಗೊಂಡಾಗ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಬದಲು ಅವರನ್ನು ಕಾರಿನಲ್ಲಿ ತಂದು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿರುವ ಹೃದಯ ವಿಧ್ರಾವಕ ಘಟನೆ ಸಂಪ್ಯದಲ್ಲಿ ಡಿ.6ರಂದು ಸಂಜೆ ನಡೆದಿದೆ.

ಸಂಪ್ಯ ಸಮೀಪದ ಪುರಸಭಾ ದ್ವಾರದ ಸಮೀಪವಿರುವ ಕಿರಿದಾದ ಒಳ ರಸ್ತೆಗೆ ಡಿ.6ರಂದು ಸಂಜೆ 4 ಗಂಟೆ ವೇಳೆಗೆ ಬಿಳಿ ಬಣ್ಣದ ಓಮ್ನಿ ಕಾರೊಂದು ಬಂದಿದ್ದು ರಸ್ತೆಯ ಮಧ್ಯೆ ನಿರ್ಜನ ಜಾಗದಲ್ಲಿ ಕಾರನ್ನು ನಿಲ್ಲಿಸಿ ಅದರೊಳಗಿನಿಂದ ಇಳಿದ ಈರ್ವರು ಕಾರಿನೊಳಗಿದ್ದ ವ್ಯಕ್ತಿಯೊಬ್ಬರನ್ನು ಎಳೆದು ಹೊರಗೆ ಹಾಕಿದ್ದು ಬಳಿಕ ಕಾರನ್ನು ವೇಗವಾಗಿ ಚಲಾಯಿಸಿದ್ದಾರೆ. ಬಳಿಕ ಅದೇ ರಸ್ತೆಯಾಗಿ ಬಂದ ವ್ಯಕ್ತಿಯೊಬ್ಬರು ರಸ್ತೆ ಮಧ್ಯೆ ನರಳಾಡುತ್ತಿದ್ದ ವ್ಯಕ್ತಿಯನ್ನು ಕಂಡು ಇತರರಿಗೆ ಮಾಹಿತಿ ನೀಡಿದ್ದು ಸ್ಥಳದಲ್ಲಿ ಹಲವಾರು ಮಂದಿ ಜಮಾಯಿಸಿದ್ದರು. ಬಳಿಕ ನಿಸಾರ್ ಸಂಪ್ಯ ಸೇರಿದಂತೆ 7 ಮಂದಿ ಯುವಕರು ತಕ್ಷಣ 108 ಅಂಬ್ಯುಲೆನ್ಸ್‌ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ನರಳಾಡುತ್ತಿದ್ದ ವ್ಯಕ್ತಿಯನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ರಸ್ತೆಯಲ್ಲಿ ಬಿದ್ದುಕೊಂಡಿದ್ದ ವ್ಯಕ್ತಿ ಮಾತನಾಡುವ ಸ್ಥಿತಿಯಲ್ಲಿರದಿದ್ದರೂ ಕೂಡಾ ತನ್ನ ಊರು ಗದಗ ಎಂಬುವುದಾಗಿಯೂ ತಾನು ವಕೀಲರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಮರದಿಂದ ಬಿದ್ದು ಗಾಯಗೊಂಡಿರುವುದಾಗಿಯೂ, ತನ್ನನ್ನು ಓಮ್ನಿ ಕಾರಿನಲ್ಲಿ ತಂದು ಇಲ್ಲಿ ಹಾಕಿರುವುದಾಗಿಯೂ ಹೇಳಿಕೆ ನೀಡಿದ್ದಾರೆ. ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿಯ ಸೊಂಟಕ್ಕೆ ಗಂಭೀರ ಗಾಯವಾಗಿದ್ದು ಅವರು ನಿಂತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅವರ ಪಕ್ಕದಲ್ಲೇ ಅವರ ಉಡುಪುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದು ಹಾಕಲಾಗಿತ್ತು. ಕಾರಿನಲ್ಲಿ ಬಂದ ವ್ಯಕ್ತಿಗಳು ವ್ಯಕ್ತಿಯೋರ್ವರನ್ನು ಕಾರಿನಿಂದ ಬಲಾತ್ಕಾರವಾಗಿ ಹೊರಕ್ಕೆ ತೆಗೆದು ಮಾರ್ಗ ಮಧ್ಯೆ ಮಲಗಿಸಿ ಹೋಗಿರುವ ದೃಶ್ಯವನ್ನು ನೋಡಿದ ಕೆಲವರು ಬಿಳಿ ಬಣ್ಣದ ಓಮ್ನಿ ಕಾರೊಂದು ಪ್ರದೇಶದಲ್ಲಿ ಸುತ್ತಾಡುತ್ತಿರವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.

ವ್ಯಕ್ತಿಯೊಬ್ಬರು ಬಿದ್ದು ಗಂಭೀರ ಗಾಯಗೊಂಡಾಗ ಅವರನ್ನು ಆಸ್ಪತ್ರೆಗೆ ಸೇರಿಸುವ ಬದಲು ರಸ್ತೆ ಮಧ್ಯೆ ಹೊರಗೆಸೆದು ಹೋಗಿರುವುದರ ಕುರಿತು ಸ್ಥಳದಲ್ಲಿದ್ದವರು ಆಕ್ರೊಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಯಾರೇ ಆಗಲಿ ಕಾರಿನಲ್ಲಿ ತಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹ ವ್ಯಕ್ತವಾಗಿದೆ.

ಕೂಲಿನಾಲಿ ಜೀವನ ಸಾಗಿಸುವ ಬಡಪಾಯಿಗಳು ಅವಘಡದಲ್ಲಿ ಒಳಪಟ್ಟಾಗ ಅವರಿಗೆ ಸೂಕ್ತ ಚಿಕಿತ್ಸೆ ಕೊಡದೆ ಅವರನ್ನು ಕಾರಿನಲ್ಲಿ ಎತ್ತಿ ಹಾಕಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿರುವ ಭೀಕರ ಘಟನೆ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಜೊತೆಗೆ ಮನುಷ್ಯತ್ವವೇ ಇಲ್ಲದವರು ಮಾಡಿರುವ ಘೋರ ಕೃತ್ಯಕ್ಕೆ ಬಡಪಾಯಿ ಜೀವವೊಂದು ಬಲಿಯಾಗುವ ಸಾಧ್ಯತೆಯಿದೆ. ಜೊತೆಗೆ ಘಟನೆಯ ಬಗ್ಗೆ ಸಂಶಯವೂ ವ್ಯಕ್ತವಾಗಿದ್ದು ಕೂಲಿ ಕಾರ್ಮಿಕನನ್ನು ತಿಂಗಳು ಗಟ್ಟಲೆ ದುಡಿಸಿ ಸಂಬಳ ನೀಡದೇ ಹೊಡೆದಿರುವುದರ ಪರಿಣಾಮ ಸೊಂಟಕ್ಕೆ ಗಾಯವಾಗಿರಬಹುದೇ ಎಂಬ ಅನುಮಾನವೂ ವ್ಯಕ್ತಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.