Breaking News

ಪುತ್ತೂರಿನಿಂದ ಉಪ್ಪಳಕ್ಕೆ ತೆರಳುತ್ತಿದ್ದ ಸರಕಾರಿ ಬಸ್ಸಿಗೆ ಉಪ್ಪಳ ಸಮೀಪ ಕಲ್ಲು ತೂರಾಟ

Puttur_Advt_NewsUnder_1
Puttur_Advt_NewsUnder_1

 

ವಿಟ್ಲ: ಪುತ್ತೂರಿನಿಂದ ಉಪ್ಪಳಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಂಜೇಶ್ವರ ಠಾಣಾ ವ್ಯಾಪ್ತಿಯ ಶಾಂತಿಗುಡಿ ಎಂಬಲ್ಲಿ ಕಲ್ಲೆಸೆದು ಹಾನಿಗೊಳಿಸಿದ ಘಟನೆ ಡಿ.5ರಂದು ರಾತ್ರಿ ನಡೆದಿದೆ.

ಪುತ್ತೂರಿನಿಂದ ಉಪ್ಪಳಕ್ಕೆ ತೆರಳುತ್ತಿದ್ದ ಕನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸು ರಾತ್ರಿ 7.15ರ ವೇಳೆಗೆ ಉಪ್ಪಳ ಕೈಕಂಬ ರಸ್ತೆಯ ಶಾಂತಿಗುಡಿ ತಲುಪುತ್ತಿದ್ದಂತೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಕಲ್ಲೆಸೆದು ಪಾರಾರಿಯಾಗಿದ್ದಾರೆ. ಘಟನೆಯಿಂದಾಗಿ ಬಸ್ಸಿನ ಗಾಜಿಗೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಅರಿತ ಕುಂಬಳೆ ವೃತ್ತ ನಿರೀಕ್ಷಕ ವಿ.ವಿ ಮನೋಜ್, ಮಂಜೇಶ್ವರ ಎಸ್.ಐ ಪ್ರಮೋದ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ಸಮಯಕ್ಕೆ ಬಳ್ಳೂರು ಎಂಬಲ್ಲಿ ಇದೇ ರೀತಿ ಖಾಸಗಿ ಬಸ್ಸಿಗೆ ಕಲ್ಲೆಸೆದು ತಂಡ ಪರಾರಿಯಾಗಿದೆ. ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನವಾದ ಡಿ.6ರಂದು ಕೇರಳದಲ್ಲಿ ಅಘೋಷಿತ ಬಂದ್ ಆಗುತ್ತಿದ್ದು. ಇದರ ಹಿಂದಿನ ದಿವಸ ಘಟನೆ ನಡೆದಿರುವುದು ದುಷ್ಕರ್ಮಿಗಳ ಗಲಭೆ ನಡೆಸುವ ಹುನ್ನಾರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.