Breaking News

ದೀಪ ಆರಿಸಿ ಹುಟ್ಟುಹಬ್ಬ ಆಚರಣೆ ನಮಗೆ ಬೇಡ-ರಾಘವೇಶ್ವರ ಶ್ರೀ; ಕಲ್ಲಮ ಹಿರಣ್ಯ ಮನೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಬ್ರಹ್ಮೈಕ್ಯ- ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1

kallama1 kallama3 kallama2

ನರಿಮೊಗರು: ಕಲ್ಲಮ ಹಿರಣ್ಯ ಗಣಪತಿ ಭಟ್‌ರವರ ಮನೆಯಲ್ಲಿ ಡಿ.೭ರಂದು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಬ್ರಹ್ಮೈಕ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಿತು.

ದೀಪ ಆರಿಸಿ ಆಚರಣೆ ಬೇಡ: ಆರಾಧನಾ ಮಹೋತ್ಸವದ ಧರ್ಮ ಸಭೆಯಲ್ಲಿ ಶ್ರೀ ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ, ಯಾವುದೇ ಆಚರಣೆಗೆ ಅರ್ಥ ಬೇಕು. ಔಚಿತ್ಯ ಇರಬೇಕು. ದೀಪ ಆರಿಸಿ ಹುಟ್ಟುಹಬ್ಬ ಆಚರಿಸುವ ಆಚರಣೆ ನಮಗೆ ಬೇಡ. ನಾವು ದೀಪ ಬೆಳಗಿಸಿ ಹುಟ್ಟು ಹಬ್ಬ ಆಚರಿಸಬೇಕು. ಹಿರಣ್ಯ ಗಣಪತಿ ಭಟ್‌ರವರ ಮನೆಯಲ್ಲಿ ಬ್ರಹ್ಮೈಕ್ಯ ಗುರುಗಳ ಆರಾಧನೆ ನಡೆದಿದೆ. ಇದು ಅವರು ಯೋಗ ಪಡೆದು ಬಂದ ಭಾಗ್ಯ.ಕನಸು ನನಸಾದ ಕಾಲ. ತಪಸ್ಸು ಈಡೇರಿದ ಸಮಯ ಇದು. ಹಿರಣ್ಯ ಅಂದರೆ ಸುವರ್ಣ ಹಿರಣ್ಯಕ್ಕೆ  ’ಹಿರಣ್ಯ’ ಬಂದಿದೆ ಎಂದರು.

ಗುರುವಿನ ಕಣ್ಣಲ್ಲಿ ಕರುಣೆ ಇದೆ: ಬ್ರಹ್ಮೈಕ್ಯ ಗುರುಗಳು ಸಮಾಜವನ್ನು ಮೇಲೆತ್ತಿದವರು. ಸಮಾಜದಲ್ಲಿ ರಾಮನನ್ನು ಕಂಡವರು. ಗುರು ಮನುಷ್ಯ ಮಾತ್ರವಲ್ಲ. ಅದಕ್ಕಿಂತ ಹೆಚ್ಚು. ಗುರುವಿನ ಕಣ್ಣಲ್ಲಿ ಕರುಣೆ ಇದೆ. ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

ವೃದ್ಧಾಶ್ರಮಕ್ಕೆ ಸೇರಿಸುವುದು ಅಕ್ಷಮ್ಯ: ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಅಕ್ಷಮ್ಯ. ಇಂತಹ ಮಕ್ಕಳು ಹುಟ್ಟಲೇಬಾರದು. ಮಕ್ಕಳು ಗುರು ಹಿರಿಯರಿಗೆ ಗೌರವ ಕೊಡಬೇಕು. ಮುದಿ ಪ್ರಾಯದಲ್ಲಿ ತಂದೆ ತಾಯಿ ಅಸಂಬದ್ಧವಾಗಿ ವರ್ತಿಸಬಾರದು.ಮಕ್ಕಳನ್ನು ಚೆನ್ನಾಗಿ ಬೆಳೆಸಿ ನೋಡಿಕೊಳ್ಳುವುದು ಹಿರಿಯರ ಜವಾಬ್ದಾರಿ. ಮನೆ ಮನೆಯ ಹಿರಿಯರು, ಗೋವುಗಳು ಕ್ಷೇಮವಾಗಿರಬೇಕು. ೬೦ ವರ್ಷ  ತುಂಬಿದವರಿಗೆ ಸರಳವಾಗಿ ಷಷ್ಟ್ಯಬ್ಧ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಇಂದು ಇಲ್ಲಿ ಷಷ್ಟ್ಯಬ್ಧ ಆಚರಿಸಲಾಗಿದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

ಹರಿಪ್ರಸಾದ್ ಪೆರಿಯಾಪ್ಪರವರು ಮಹಾಮಂಗಲ ಗೋಯಾತ್ರೆ ಬಗ್ಗೆ ಮಾಹಿತಿ ನೀಡಿದರು. ಹಿರಣ್ಯ ಗಣಪತಿ ಭಟ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.ಡಿ.೭ರಂದು ಬೆಳಿಗ್ಗೆ ಶ್ರೀಕರಾರ್ಚನೆ, ಮಹಾಮೃತ್ಯುಂಜಯ ಹೋಮ, ರಾತ್ರಿ ಬ್ರಹ್ಮೈಕ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಸಂಸ್ಮರಣೆ, ಪಾಂಡಿತ್ಯ ಪುರಸ್ಕಾರ ನಡೆಯಿತು. ಹಿರಣ್ಯ ಗಣಪತಿ ಭಟ್ ಮನೆಯವರು, ಉಪ್ಪಿಮಂಡಲ, ದರ್ಬೆ ಹವ್ಯಕ ವಲಯ ಪದಾಧಿಕಾರಿಗಳು, ಶಿಷ್ಯರು, ಶ್ರೀಮಠದ ಅಭಿಮಾನಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.