ಬಾಲವನ ಅಭಿವೃದ್ಧಿ ಸಮಿತಿ ಸಭೆ-ಅಭಿವೃದ್ಧಿಗೆ ಚಿಂತನೆ; ಈಜು ಕೊಳದಲ್ಲಿ ಹೆಚ್ಚುವರಿ ಶುಲ್ಕ ಯಾಕೆ – ಬಡವರಿಗೂ ಅವಕಾಶ ಸಿಗಬೇಕು

Puttur_Advt_NewsUnder_1
Puttur_Advt_NewsUnder_1

balavana

ಪುತ್ತೂರು: ಡಾ. ಶಿವರಾಮ ಕಾರಂತರ ಪರ್ಲಡ್ಕದ ಬಾಲವನ ಅಭಿವೃದ್ಧಿ ಕುರಿತು ಅಭಿವೃದ್ಧಿ ಸಮಿತಿ ಸಭೆಯು ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ದ.7ರಂದು ಎ.ಸಿ. ಕೋರ್ಟ್ ಹಾಲ್‌ನಲ್ಲಿ ನಡೆಯಿತು.

ಬಾಲವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಹಾಯಕ ಕಮೀಷನರ್ ಡಾ. ರಘುನಂದನ ಮೂರ್ತಿಯವರು ಮಾತನಾಡಿ ಬಾಲವನಕ್ಕೆ ಸಿ.ಸಿ.ಕ್ಯಾಮರಾ,  ಮ್ಯೂಸಿಕ್ ಅಳವಡಿಸುವ ಮಾಹಿತಿ ನೀಡಿದರು. ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಈಗಾಗಲೇ ಬಾಲವನ ಈಜು ಕೊಳದಿಂದ ಸುಮಾರು 900 ಮಂದಿ ವಿವಿಧ ಮಟ್ಟದಲ್ಲಿ ಪುತ್ತೂರಿಗೆ ಹೆಸರು ತಂದಿದ್ದಾರೆ. ಆದರೆ ಈಜು ಕೊಳ ವೀಕ್ಷಣೆ ಮತ್ತು ತರಬೇತಿಗೆ  ಪಡೆಯುವ ಶುಲ್ಕ ಜಾಸ್ತಿ ಮಾಡಿರುವ ಕುರಿತು ನನಗೆ ದೂರು ಬಂದಿದೆ.  ಇಲ್ಲಿ ಕೇವಲ ಶ್ರೀಮಂತರು ಮಾತ್ರ ಈಜು ಕಲಿತರೆ ಸಾಲದು. ಬಡವರಿಗೂ ಅವಕಾಶ ಸಿಗಬೇಕು ಎಂದರಲ್ಲದೆ ಮುಂದೆ ಬಿಪಿಎಲ್ ಪಟ್ಟಿಯವರಿಗೆ ಪ್ರತ್ಯೇಕವಾಗಿ ಸಮಯ ನಿಗದಿಪಡಿಸಿ ಅವರಿಗೆ ಈಜು ತರಬೇತಿ ಪಡೆಯುವ ಅವಕಾಶ ನೀಡಬೇಕೆಂದರು. ತಹಶೀಲ್ದಾರ್ ಅನಂತಶಂಕರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್,  ಬಾಲವನ ಅಭಿವೃದ್ಧಿ ಸಮಿತಿ ಸದಸ್ಯರಾದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್, ವಿದ್ಯಾಗೌರಿ, ಭಾಸ್ಕರ್, ರಮಾನಂದ ನಾಯಕ್, ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ರಮಾನಂದ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್, ಪ್ರೊ.ಬಿ.ಜೆ.ಸುವರ್ಣ, ಸುಂದರ ನಾಕ್, ಬಾಲವನ ನಿರ್ವಹಣೆಯ ಅಶೋಕ್ ಉಪಸ್ಥಿತರಿದ್ದರು.

ಮಲ್ಪಿ ಜಿಮ್‌ಗೆ ಕೊಠಡಿ ಅವಶ್ಯಕತೆ-ಶಕುಂತಳಾ ಶೆಟ್ಟಿ

ಕ್ರೀಡಾ ಸಚಿವರು ನೀಡಿದ ಮಲ್ಪಿ ಜಿಮ್‌ಗೆ ಬಾಲವನದಲ್ಲಿ ಸೂಕ್ತ ಕೊಠಡಿಯ ಅವಶ್ಯಕತೆ ಆಗಬೇಕಾಗಿದೆ. ಈ ಕುರಿತು ಈಗಿರುವ ಈಜು ಕೊಳದ ಮೇಲೆ ಜಿಮ್ ಕೊಠಡಿ ತೆರೆಯಲು ಸಾಧ್ಯವಿದೆಯೇ ಎಂದು ಇಂಜಿನಿಯರ್ ಮೂಲಕ ಕಟ್ಟಡದ ಪರಿಶೀಲನೆ ನಡೆಸಬೇಕು. ಒಂದು ವೇಳೆ ಅದು ಸಾಧ್ಯವಾಗುವುದಾದರೆ ಮತ್ತು ಸಮಿತಿಯ ಒಪ್ಪಿಗೆ ಇರುವುದಾದರೆ ನನ್ನ ಅನುದಾನದಿಂದ ರೂ. ೫ಲಕ್ಷ ನೀಡುತ್ತೇನೆ. ಉಳಿದಿರುವುದನ್ನು ಪ್ರಾಯೋಜಕರಿಂದ ಸಂಗ್ರಹಿಸಬೇಕು ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಬಾಲವನದಲ್ಲಿ ಜಿಮ್ ತರುವುದಕ್ಕೆ ವಿರೋಧ-ಶಮ

ಡಾ| ಶಿವರಾಮ ಕಾರಂತರ ಹೆಸರಿನಲ್ಲಿ ಸಾಂಸ್ಕೃತಿಕವಾಗಿ ಬಾಲವನ ಉಳಿಯಬೇಕು. ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್, ಕುವೆಂಪುರವರ ಮನೆಯ ರೀತಿಯಲ್ಲಿ ಬಾಲವನ ಉಳಿಯಬೇಕು. ಆದರೆ ಅದು ಈಗ ಎಲ್ಲೋ ಹೋಗುತ್ತಿದೆ. ಮಲ್ಟಿ ಜಿಮ್ ಅಲ್ಲಿ ಆರಂಭಿಸುವುದು ಕಲ್ಚರಲ್ ಡಿಪಾರ್ಟ್‌ಮೆಂಟ್ ಕೆಲಸ ಅಲ್ಲ. ಬಾಲವನದ ರಾಜ್ಯ ಸಮಿತಿಯಿಂದಲೇ ಇದಕ್ಕೆ ವಿರೋಧ ಇದೆ ಎಂದು ಡಾ| ಶಿವರಾಮ ಕಾರಂತರ ಪುತ್ರಿ ಶಮರವರು ’ಸುದ್ದಿ’ಗೆತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.