ಹಳೆನೇರೆಂಕಿ ಶಾಲಾ ಪ್ರಭಾರ ಮುಖ್ಯಶಿಕ್ಷಕಿಯಿಂದ ಅವ್ಯವಹಾರ ಆರೋಪ ಮಾಜಿ ಅಧ್ಯಕ್ಷರಿಂದ ಸುಳ್ಳುದೂರು-ಸತ್ಯಪ್ರಮಾಣಕ್ಕೆ ಬರಲಿ: ಪೋಷಕರ ಆಗ್ರಹ

Puttur_Advt_NewsUnder_1
Puttur_Advt_NewsUnder_1

 

haleneranki2ಪುತ್ತೂರು: ಹಳೆನೇರೆಂಕಿ ಸರ್ಕಾರಿ ಉನ್ನತ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ವಿರುದ್ಧ ಅವ್ಯವಹಾರ ಆರೋಪ ಹೊರಿಸಿ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಮತ್ತು ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗಣೇಶ್ ಹಿರಿಂಜ ನೀಡಿರುವ ದೂರು ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಅವರು ಸತ್ಯ ಪ್ರಮಾಣಕ್ಕೆ ಬರಲಿ ಎಂದು ದ.7ರಂದು ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರರವರು ಮಾತನಾಡಿ, ಶಾಲಾ ಪ್ರಭಾರ ಮುಖ್ಯಶಿಕ್ಷಕಿಯವರು ಶಾಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಅವ್ಯವಹಾರ ಎಸಗುತ್ತಿದ್ದು, ಕ್ರೀಡಾಕೂಟದಲ್ಲಿ ಮಕ್ಕಳನ್ನು ಅಕ್ರಮವಾಗಿ ಸೇರ್ಪಡೆಗೊಳಿಸುವುದು, ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗುವುದು ಮೊದಲಾದ ರೀತಿಯಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಗಣೇಶ ಹಿರಿಂಜರವರು ಶಿಕ್ಷಣ ಸಚಿವರಿಗೆ ಹಾಗೂ ದ.ಕ.ಜಿಲ್ಲಾ ಸಾರ್ವಜನಿಕ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿದೆ. ಆದರೆ ಇದೊಂದು ಕಪೋಲಕಲ್ಪಿತ ಸುಳ್ಳು ದೂರು ಆಗಿದೆ. ಶಾಲೆಯಲ್ಲಿ ನಡೆದ ಎಲ್ಲಾ ಹಣಕಾಸಿನ ವ್ಯವಹಾರಗಳು ಮತ್ತು ಕಾರ್ಯಚಟುವಟಿಕೆಗಳು ಗಣೇಶ್ ಹಿರಿಂಜರವರ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಡಿಎಂಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಪ್ರಕಾರವೇ ನಡೆದಿದೆ. ಗಣೇಶ್ ಹಿರಿಂಜರವರೇ ಶಾಲೆಯಲ್ಲಿ ನಿವೃತ್ತ ಶಿಕ್ಷಕಿಯವರಿಗೆ ನಡೆಸಿದ ವಿದಾಯಕೂಟ ಮತ್ತು ತಾಲೂಕು ಮಟ್ಟದ ಖೋ ಖೋ ಪಂದ್ಯಾಟವನ್ನು ಆಯೋಜಿಸಿ ದೇಣಿಗೆ ಸಂಗ್ರಹಕ್ಕೆ ಪೂರ್ವ ತಯಾರಿ ಮಾಡದೆ, ಹಳೆ ವಿದ್ಯಾರ್ಥಿ ಸಂಘದವರು ಕೊಟ್ಟಿರುವ 10,800 ರೂ. ಮತ್ತು ವಸ್ತುರೂಪದಲ್ಲಿ ದೇಣಿಗೆ ಪಡೆದುಕೊಂಡಿದ್ದಾರೆ. ಈ ಕಾರ‍್ಯಕ್ರಮಕ್ಕೆ ಸಂಬಂಧಿಸಿದಂತೆ ಖರ್ಚಿನ ಬಾಬ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ 10,590 ಇನ್ನೂ ಪಾವತಿಸಿಲ್ಲ. ಈ ಕುರಿತ ಎಲ್ಲಾ ಲೆಕ್ಕಪತ್ರಗಳನ್ನು ಎಸ್‌ಡಿಎಂಸಿ ಸಭೆಯಲ್ಲಿ ಮಂಡಿಸುವಂತೆ ಪಂಚಾಯತ್ ಅಧ್ಯಕ್ಷರು ದೂರವಾಣಿ ಮೂಲಕ  ಮಾಡಿರುವ ಸೂಚನೆಯನ್ನು ದಿಕ್ಕರಿಸಿದ್ದಾರೆ. ಇಲ್ಲಿ ಶಾಲಾ ಪ್ರಭಾರ ಮುಖ್ಯಶಿಕ್ಷಕಿಯಾಗಲೀ, ಇತರೇ ಶಿಕ್ಷಕರಾಗಲಿ, ಎಸ್‌ಡಿಎಂಸಿ ಸದಸ್ಯರಾಗಲಿ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ಗಣೇಶ್ ಹಿರಿಂಜರವರು ಮಾಡಿರುವ ಆರೋಪಗಳೆಲ್ಲವೂ ಕಪೋಲಕಲ್ಪಿತ, ನಿರಾಧಾರವಾಗಿದೆ. ಇದರಿಂದಾಗಿ ಸಂಸ್ಥೆಗೆ ಹಾಗೂ ಶಿಕ್ಷಕರ ಗೌರವಕ್ಕೆ ಧಕ್ಕೆಯಾಗಿದ್ದು ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದಾರೆ ಎಂದರು.

ಶಾಲೆಗೆ ದೇಣಿಗೆಗಳು ವಸ್ತುರೂಪದಲ್ಲಿಯೇ ಬಂದಿದೆ. ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಹಣದ ರೂಪದಲ್ಲಿ ಬಂದ ದೇಣಿಗೆಗಳು ಬ್ಯಾಂಕ್‌ನಲ್ಲಿ ಠೇವಣಿಯಿದ್ದು ಅದರ  ಬಡ್ಡಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈಗಿನ ಪ್ರಭಾರ ಮುಖ್ಯಶಿಕ್ಷಕಿ ಅವಧಿಯಲ್ಲಿ ಶಾಲೆಗೆ ಯಾವುದೇ ದೇಣಿಗೆಗಳು ಬಂದಿಲ್ಲ. ಗುಬ್ಬಚ್ಚಿ ಸ್ಪೀಕಿಂಗ್ ತರಗತಿ ನಡೆಸಲು ಹಳೆವಿದ್ಯಾರ್ಥಿ ಸಂಘದಿಂದ ಗೌರವ ಶಿಕ್ಷಕಿಯೋರ್ವರ ನೇಮಕ ಮಾಡಲಾಗಿದೆ. ಇನ್ನೋರ್ವ ಗೌರವ ಶಿಕ್ಷಕಿ ಆಯ್ಕೆಯನ್ನು ಗಣೇಶ್ ಹಿರಿಂಜರವರೇ ನೇಮಕ ಮಾಡಿದ್ದಾರೆ. ತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಆಯೋಜನೆ ಸೇರಿದಂತೆ ಕೆಲವೊಂದು ನಿರ್ಧಾರಗಳನ್ನು ಎಸ್‌ಡಿಎಂಸಿ ಸದಸ್ಯರ ಗಮನಕ್ಕೆ ತಾರದೇ ಗಣೇಶ್ ಹಿರಿಂಜರವರೇ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ. ಅಕ್ಷರದಾಸೋಹ ಕಟ್ಟಡಕ್ಕೆ3.31 ಲಕ್ಷ ರೂ.ಅನುದಾನ ಬಂದಿದ್ದು ಈ ಕಟ್ಟಡ ಕಾಮಗಾರಿ ಗುತ್ತಿಗೆ ನೀಡುವಂತೆ ಗಣೇಶ್ ಹಿರಿಂಜ ಕೇಳಿದ್ದರು. ಆದರೆ ಇದಕ್ಕೆ ನಿಯಮದಲ್ಲಿ ಅವಕಾಶ ಇಲ್ಲದೇ ಇದ್ದುದರಿಂದ ಅವರಿಗೆ ಗುತ್ತಿಗೆ ಕೊಟ್ಟಿಲ್ಲ. ಶಾಲೆಗೆ 92 ವರ್ಷಗಳ ಇತಿಹಾಸವಿದೆ. ಹಳೆವಿದ್ಯಾರ್ಥಿ ಸಂಘ ಸುವರ್ಣಮಹೋತ್ಸವದ ಸಂಭ್ರಮದಲ್ಲಿದ್ದು 35 ಲಕ್ಷ ರೂ.ವೆಚ್ಚದ ಯೋಜನೆ ಹಾಕಿಕೊಂಡಿದೆ. ಇದೀಗ ಕೇಳಿಬರುತ್ತಿರುವ ಅಪಪ್ರಚಾರದಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಪೋಷಕರ ಸಭೆ ಕರೆಯಲಾಗಿದ್ದು ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಎಸ್‌ಡಿಎಂಸಿ ಕ್ರಮ ಕೈಗೊಳ್ಳಲಿದೆ ಎಂದು ಅಧ್ಯಕ್ಷ ರವಿಚಂದ್ರ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.