ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ: 20ನೇ ಬಾರಿಗೆ ಇಂದ್ರಪ್ರಸ್ಥದ ವೈಜ್ಞಾನಿಕ ಯೋಜನಾ ವರದಿ ರಾಷ್ಟ್ರ ಮಟ್ಟಕ್ಕೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಪುತ್ತೂರುನಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿರುವ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದು, ಆ ಮೂಲಕ ಈ ಸಂಸ್ಥೆಯ ವಿದ್ಯಾರ್ಥಿಗಳು 20ನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದಂತಾಗಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

1997ರಿಂದ ನಿರಂತರವಾಗಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸುತ್ತಾ ಬಂದಿರುವ ಉಪ್ಪಿನಂಗಡಿ ಇಂದ್ರಪ್ರಸ್ಥದ ವಿದ್ಯಾರ್ಥಿಗಳು ಈ ಬಾರಿಯೂ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಈ ವರ್ಷ India herbal shampoo, a complete hair care nourisher‘ ಎಂಬ ವಿಷಯದ ಬಗ್ಗೆ ಕುಮಾರಿ ಅಲಿಷಾ ಜೋಸ್, ಕುಮಾರಿ ಆನ್ಸಿಲಾ ಜಾನ್, ರಾಮಚಂದ್ರ ವಿದ್ಯಾಸಾಗರ್, ಎಸ್. ಎ. ಬಾಹುಬಲಿ ಜೈನ್ ಮತ್ತು ಶಶಾಂಕ್ ರಾಮ್ ಕೆ. ವೈಜ್ಞಾನಿಕ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದರು. ಈ ಯೋಜನೆಯ ಮಾರ್ಗದರ್ಶನವನ್ನು ಸಂಸ್ಥೆಯ ಶಿಕ್ಷಕಿಯರಾದ ಕುಮಾರಿ ಮಾಲತಿ ಮತ್ತು ಶ್ರೀಮತಿ ವೀಣಾ ಮಾಡಿರುತ್ತಾರೆ. ರಾಷ್ಟ್ರ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಮಹಾರಾಷ್ಟ್ರದ ಭಾರಾಮತಿಯಲ್ಲಿ ಡಿಸೆಂಬರ್ ೨೭ರಿಂದ ೩೧ರ ವರೆಗೆ ನಡೆಯಲಿರುವುದು. ಈ ಸಮಾವೇಶದಲ್ಲಿ ತಂಡದ ನಾಯಕಿಯಾದ ಕುಮಾರಿ ಅಲಿಷಾ ಜೋಸ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅಮನ್ ಕೆ. ಎ., ಎ. ಯು. ನಚಿಕೇತ್ ಕುಮಾರ್, ರಿಷಿಕೇಶ್ ಆರ್. ಸುವರ್ಣ, ನಿಖಿಲ್ ಪಿ. ಲದ್ವ ಮತ್ತು ಮಹಮ್ಮದ್ ಯತಿಶಾಮ್ ಭಾಗವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆಯ ಮುಖ್ಯಸ್ಥರು ತಿಳಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.