ಆನಂದ ಪೂಜಾರಿ ಎಸ್.ಐ.ಯಾಗಿ ಭಡ್ತಿ ಎಸ್ಪಿ ಕಚೇರಿ ಡಿಸಿಆರ್‌ಬಿಗೆ ವರ್ಗ

Puttur_Advt_NewsUnder_1
Puttur_Advt_NewsUnder_1

ananda-poojary

ಪುತ್ತೂರು: ವಿಟ್ಲ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಪ್ಯ ನಿವಾಸಿ ಆನಂದ ಪೂಜಾರಿಯವರಿಗೆ ಎಸ್‌ಐಯಾಗಿ ಮುಂಬಡ್ತಿ ನೀಡಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ತಕ್ಷೀರು ಅಭಿಲೇಖ ಸಂಗ್ರಹಾಲಯ (ಡಿಸಿಆರ್‌ಬಿ) ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ.

1981ರ ಜುಲೈ 23ರಂದು ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಇಲಾಖಾ ಕರ್ತವ್ಯ ಆರಂಭಿಸಿದ್ದ ಆನಂದ ಪೂಜಾರಿಯವರು ಬಳಿಕ ಕುಂದಾಪುರ, ಶಂಕರನಾರಾಯಣ ಹೊರಠಾಣೆ, ಸಂಪ್ಯ, ಸುಳ್ಯ, ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2011ರಲ್ಲಿ ಎಎಸ್‌ಐಯಾಗಿ ಭಡ್ತಿ ಹೊಂದಿ ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡು ಅಲ್ಲಿಂದ ನಂತರ ಕಡಬಕ್ಕೆ ಕಡಬದಿಂದ ವಿಟ್ಲ ಠಾಣೆಗೆ ವರ್ಗಾವಣೆಗೊಂಡಿದ್ದರು.ಇದೀಗ ಎಸ್‌ಐಯಾಗಿ ಭಡ್ತಿ ಹೊಂದಿ ಎಸ್‌ಪಿ ಕಚೇರಿಗೆ ವರ್ಗಾವಣೆಗೊಳ್ಳುತ್ತಿದ್ದಾರೆ.ಮರ್ದಾಳ ಮೂಲದವರಾಗಿದ್ದು ಇಲ್ಲಿನ ಸಂಪ್ಯದಲ್ಲಿ ವಾಸವಿರುವ ಆನಂದ ಪೂಜಾರಿಯವರ ಪತ್ನಿ ಗುಲಾಬಿ ಗೃಹಿಣಿಯಾಗಿದ್ದು ಪುತ್ರ ಲತನ್ ಕುಮಾರ್ ದುಬೈಯಲ್ಲಿ ಉದ್ಯೋಗದಲ್ಲಿದ್ದರೆ, ಪುತ್ರಿ ಶ್ವೇತಾರವರು ಎಂ.ಎ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ವಿವೇಕಾನಂದದಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.