’ಶ್ರೀ’ಪಡ್ರೆಯವರಿಗೆ ’ಕುಸುಮಾಶ್ರೀ’ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

shripadre

ಪುತ್ತೂರು: ಕುಂದಾಪುರ ನಾಗೂರಿನ ಕುಸುಮಾ ಫೌಂಡೇಶನ್ ಇವರು ಪ್ರಾಯೋಜಿಸುವ ’ಕುಸುಮಾಶ್ರೀ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆಯವರು ಭಾಜನರಾಗಿದ್ದಾರೆ. ದ.11ರಂದು ಸಂಜೆ ನಾಗೂರಿನ ಕುಸುಮ ಸಂಸ್ಥೆಯ ವಠಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.   ಶ್ರೀ ಪಡ್ರೆಯವರು ನೆಲಜಲ ಸಂರಕ್ಷಣೆ, ಅಲಕ್ಷಿತ ಬೆಳೆ ಹಲಸು, ಕೃಷಿಕರ ಕೈಗೆ ಲೇಖನಿ ಮೊದಲಾದ ಆಂದೋಳನಗಳಿಗೆ ಶ್ರೀಕಾರ ಬರೆದವರು. ಈಚೆಗೆ ಪುತ್ತೂರಿನಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಜರುಗಿದ ’ವಾಟ್ಸ್‌ಆಪ್ ಪತ್ರಿಕೋದ್ಯಮ’ ಶಿಬಿರದ ರೂವಾರಿ.

ತಿರುವನಂತಪುರಂನ ಜಾಕ್‌ಫ್ರುಟ್ ಪ್ರೋಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಯು ಈಚೆಗೆ ಶ್ರೀ ಪಡ್ರೆಯವರಿಗೆ ’ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ’ ಎಂದು ಗೌರವಿಸಿತ್ತು. ಇದಕ್ಕೂ ಮೊದಲು ಕೊಚ್ಚಿಯ ದಿಶಾ ಟ್ರಸ್ಟ್ ಅವರಿಗೆ ಇದೇ ಕೆಲಸಕ್ಕಾಗಿ ’ದಿಶಾ ಗ್ರೀನ್ ಗ್ಲೋಬ್ ಪ್ರಶಸ್ತಿ’ ನೀಡಿತ್ತು.

ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಹದಿನೈದು ಕೃತಿಗಳ ರಚಯಿತರು. ಈಚೆಗೆ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ ಪ್ರಕಾಶಿಸಿದ ’ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ’ ಎನ್ನುವ ಕೃತಿಯು ಹದಿನಾರನೆಯದು.

ರಾಷ್ಟ್ರೀಯ, ರಾಜ್ಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದ ಶ್ರೀ ಪಡ್ರೆಯವರಿಗೆ ಈಗ ’ಕುಸುಮಾಶ್ರೀ’ ಪ್ರಶಸ್ತಿಯ ಗೌರವ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.