ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ದತ್ತಮಾಲಾಧಾರಣೆ: ಕ್ಯಾಲೆಂಡರ್ ಬಿಡುಗಡೆ-ಪಲ್ಲಕ್ಕಿ ಉತ್ಸವ

Puttur_Advt_NewsUnder_1
Puttur_Advt_NewsUnder_1

odiyooru1 odiyooru2

ನಿರ್ಮಲ ಮನಸ್ಸು ಹೊಂದಲು ದೀಕ್ಷಾಬದ್ಧರಾಗುವುದು ಅವಶ್ಯ: ಒಡಿಯೂರು ಶ್ರೀ

ವಿಟ್ಲ: ನಿರ್ಮಲ ಮನಸ್ಸು ಹೊಂದಲು ದೀಕ್ಷಾಬದ್ಧರಾಗುವುದು ಅವಶ್ಯ, ನಡೆ ನುಡಿಯಲ್ಲಿ ಶುದ್ದತೆ ಇದ್ದಾಗ ಬದುಕಲ್ಲಿ ಸತ್‌ಚಾರಿತ್ರ್ಯ ನಿರ್ಮಾಣವಾಗುತ್ತದೆ ಎಂದು ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು. ಅವರು ಡಿ.7ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ  ದತ್ತಜಯಂತಿ ಮಹೋತ್ಸವದಂಗವಾಗಿ ದತ್ತಮಾಲಾಧಾರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದತ್ತ ಚಿಂತನೆಯಿಂದ ಜಗತ್ತಿನಲ್ಲಿ ನಡೆಯುವ ಅನಾಚಾರಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಿರಂತರ ಬದಲಾವಣೆಯಲ್ಲಿರುವ ತಂತ್ರಜ್ಞಾನ ಹಾಗು ಶಾಶ್ವತವಾಗಿರುವ ತತ್ವಜ್ಞಾನ ಜತೆಯಾಗಿ ಸಾಗಿದಾಗ ಮಾತ್ರ ಸಮಾಜ ಉತ್ತಮವಾಗಿರಬಹುದು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥಾನದ ಉತ್ಸವಗಳ ವಿವರಗಳನ್ನೊಳಗೊಂಡ ೨೦೧೭ ಇಂಗ್ಲೀಷ್ ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು. ಸುಮಾರು ೧೪೮ ಮಂದಿ ಗುರು ಭಕ್ತರು ದತ್ತಮಾಲಾಧಾರಣೆ ಮಾಡಿದರು. ಒಡಿಯೂರು ಸಾಧ್ವಿ ಮಾತಾನಂದಮಯೀ ಉಪಸ್ಥಿತರಿದ್ದರು.

ಮುಂಬಯಿ ಉದ್ಯಮಿ ವಾಮಯ್ಯ ಬಿ ಶೆಟ್ಟಿ, ಕೃಷ್ಣ ಎಲ್ ಶೆಟ್ಟಿ, ಒಡಿಯೂರು ಗುರುದೇವ ಸೇವಾ ಬಳಗದ ಅದ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ಗುರುದೇವ ಸೇವಾ ಬಳಗದ ಮಂಗಳೂರು ವಲಯ ಅಧ್ಯಕ್ಷ ಜಯಂತ್ ಜೆ ಕೋಟ್ಯಾನ್, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ ಪುರುಷೋತ್ತಮ, ಒಡಿಯೂರು ವಿವಿಧೋzಶ ಸೌಹಾರ್ದ ಸಹಕಾರಿ ನಿಯಮಿತದ ಮಾಜಿ ಪ್ರಧಾನ ವ್ಯವಸ್ಥಾಪಕ ಉಗ್ಗಪ್ಪ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಒಡಿಯೂರು ಘಟಕದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ಮುಂಬೈ ಘಟಕದ ಅದ್ಯಕ್ಷೆ ರೇವತಿ ವಿ ಶೆಟ್ಟಿ, ಸುಹಾಸಿನಿ ಎಸ್.ಶೆಟ್ಟಿ, ಕಲ್ಪನಾ ಕೆ.ಶೆಟ್ಟಿ, ವನಜಾ ಶೆಟ್ಟಿ ಉಪಸ್ಥಿತರಿದ್ದರು. ಟಿ ತಾರನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವೇ.ಮೂ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ದತ್ತ ಮಹಾಯಾಗ ನಡೆಯಿತು.

ಪಲ್ಲಕಿ ಉತ್ಸವ: ಅಪರಾಹ್ನ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ ನಡೆಯಿತು. ದೇವಸ್ಥಾನದಿಂದ ಆರಂಭಗೊಂಡ ದೇವರ ಪಲ್ಲಕಿ ಸವಾರಿ ವಗೆನಾಡು ಸುಬ್ರಾಯ ದೇವಸ್ಥಾನ ಹಾಗೂ ಮಿತ್ತನಡ್ಕ ಮಲರಾಯಿ ದೈವಸ್ಥಾನಕ್ಕೆ ತೆರಳಿ  ದೇವಸ್ಥಾನಕ್ಕೆ ಮರಳಿತು.ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.